ಅಮೀರ್​ಖಾನ್​ ಮಗನ ಜತೆ ಖುಷಿ ಕಪೂರ್​ ರೊಮ್ಯಾನ್ಸ್​​; ಈ ಕುರಿತು ಜಾಹ್ನವಿ ಕಪೂರ್​​ ಹೇಳಿದಿಷ್ಟು..

ಮುಂಬೈ: ಬಾಲಿವುಡ್​​ ಸೂಪರ್​ಸ್ಟಾರ್​ ಅಮೀರ್​ ಖಾನ್​ ಅವರು ಪುತ್ರ ಜುನೈದ್​ ಖಾನ್​​​ ಅವರ ನಟನೆಗೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಒಟಿಟಿ ಪ್ಲಾಟ್​ಫಾರ್ಮ್​​ನಲ್ಲಿ ಬಿಡುಗಡೆಯಾದ ಅವರ ಮೊದಲ ಸಿನಿಮಾ ‘ಮಹಾರಾಜ’ ಹೆಚ್ಚು ಮೆಚ್ಚುಗೆ ಪಡೆದಿದೆ. ಈಗ ದೊಡ್ಡಪರದೆಗೆ ಬರುಲು ಜುನೈದ್​​​ ಸಜ್ಜಾಗಿದ್ದಾರೆ. ಅವರಿಗೆ ಶ್ರೀದೇವೆ ಪುತ್ರಿ ಖುಷಿ ಕಪೂರ್ ನಾಯಕಿಯಾಗಿದ್ದಾರೆ.

ಇದನ್ನು ಓದಿ: ನಟ ಧನುಷ್ ​​ಮುಂದಿನ ಸಿನಿಮಾ ಅನೌನ್ಸ್​​​; D52 ಕುರಿತು ನಿರ್ದೇಶಕರು ಹೇಳಿದಿಷ್ಟು..

ಈ ಹಿಂದೆ ಅಮೀರ್​ ಖಾನ್​ ಅವರ ‘ಸೀಕ್ರೆಟ್ ಸೂಪರ್ ಸ್ಟಾರ್’ ಮತ್ತು ‘ಲಾಲ್​​ ಸಿಂಗ್​ ಚಡ್ಡಾ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಅದ್ವೈತ್ ಚಂದನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಿರ್ಮಾಪಕರು ಸಿನಿಮಾದ ಮೊದಲ ಪೋಸ್ಟರ್​​ ಮತ್ತು ಬಿಡುಗಡೆ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದ ಹೆಸರನ್ನು ಇನ್ನೂ ರಿವೀಲ್​ ಮಾಡಿಲ್ಲವಾದರೂ. 2025 ಫೆಬ್ರವರಿ 7ರಂದು ಸಿನಿಮಾ ತೆರೆಕಾಣಿಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಅಮೀರ್​ಖಾನ್​ ಮಗನ ಜತೆ ಖುಷಿ ಕಪೂರ್​ ರೊಮ್ಯಾನ್ಸ್​​; ಈ ಕುರಿತು ಜಾಹ್ನವಿ ಕಪೂರ್​​ ಹೇಳಿದಿಷ್ಟು..

ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟರ್​ನಲ್ಲಿ ಜುನೈದ್ ಮತ್ತು ಖುಷಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ನೀವು ಡಿಜಿಟಲ್ ಯುಗದಲ್ಲಿ ಖುಷಿ ಕಪೂರ್ ಮತ್ತು ಜುನೈದ್ ಖಾನ್ ಅವರೊಂದಿಗೆ ಪ್ರೀತಿಯನ್ನು ಅನುಭವಿಸಲು ಸಿದ್ಧರಿದ್ದೀರಾ? ಫೆಬ್ರವರಿ 7, 2025ರಂದು ಚಿತ್ರಮಂದಿರಗಳಲ್ಲಿ! ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Srishti (@srishtibehlarya)

ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಮಗ ಜುನೈದ್​. ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಕಿರಿಯ ಮಗಳು ಖುಷಿ ಎಂಬುದು ಎಲ್ಲರಿಗೂ ಗೊತ್ತಿದೆ. ಜುನೈದ್​ ‘ಮಹಾರಾಜ’ದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರೆ, ಖುಷಿ ಕಪೂರ್ ದಿ ಆರ್ಚೀಸ್ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಶಾರೂಖ್​ ಖಾನ್​ ಮಗಳು ಸುಹಾನಾ ಖಾನ್ ಮತ್ತು ಅಮಿತಾಭ್​​ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರನ್ನು ಪರಿಚಯಿಸಲಾಯಿತು.

ಇನ್ನೂ ಈ ಸಿನಿಮಾ ಬಗ್ಗೆ ಖುಷಿ ಕಪೂರ್​ ಅಕ್ಕ ಜಾಹ್ನವಿ ಕಪೂರ್​​ ಪ್ರತಿಕ್ರಿಯಿಸಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಇದು ಬಹಳ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ. ಸಿನಿಮಾ ಮಾಹಿತಿ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಶೀರ್ಷಿಕೆ ಇಲ್ಲವೆ, ಕಾತುರದಿಂದ ಕಾಯುತ್ತಿರುವುದಾಗಿ, ಇನ್ನೂ ಕಾಯಲು ಸಾಧ್ಯವಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜನ್ಸೀಸ್​​)

ಆ ವ್ಯಕ್ತಿ ನೋಡಿ ಮೂರ್ಛೆ ಹೋಗುತ್ತಿದ್ದೆ ಅಷ್ಟರಲ್ಲಿ..; ಬಿಗ್​​ಬಿ ಅಮಿತಾಭ್​​ ಹೇಳಿದಿಷ್ಟು..

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…