ಚೆನ್ನೈ: ತಮಿಳು ಫಿಲಂಸ್ ಪ್ರೊಡ್ಯೂಸರ್ಸ್ ಕೌನ್ಸಿಲ್ (ಟಿಎಫ್‌ಪಿಸಿ)ನೊಂದಿಗಿನ ಸಮಸ್ಯೆಯನ್ನು ನಟ ಧನುಷ್ ಪರಿಹರಿಸಿಕೊಂಡಿದ್ದು ನಟನ ಮೇಲೆ ವಿಧಿಸಿದ್ದ ರೆಡ್ಕಾರ್ಡ್ ಅನ್ನು ಮಂಡಳಿ ಹಿಂಪಡೆದಿರುವುದು ಗೊತ್ತೆ ಇದೆ. ಪ್ರಸ್ತುತ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿನ ಹಲವು ಪ್ರಾಜೆಕ್ಟ್ಗಳಲ್ಲಿ ಬಿಸಿಯಾಗಿರುವ ನಟ ಧನುಷ್ ಅವರ ಮುಂದಿನ ಸಿನಿಮಾದ ಮಾಹಿತಿ ಹೊರಬಿದ್ದಿದೆ.
ಇದನ್ನು ಓದಿ: ಅಡುಗೆಯವರಿಗೆ ನೀಡಲು ನನ್ನ ಬಳಿ ಹಣ ಇರಲಿಲ್ಲ; ಕಣ್ಣೀರಿಟ್ಟ ದಿನಗಳನ್ನು ನೆನೆದ ಫ್ಯಾಷನ್ ಡಿಸೈನರ್ ಮಸಾಬಾ
ಧನುಷ್ ನಟಿಸಿ ನಿರ್ದೇಶಿಸಿದ್ದ ತಮ್ಮ 50ನೇ ಸಿನಿಮಾ ರಾಯನ್ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು. ನಟನೆಯಲ್ಲಿ ಮಾತ್ರವಲ್ಲ ನಿರ್ದೇಶನದಲ್ಲೂ ಸೈ ಎನ್ನಿಸಿಕೊಂಡರು ಧನುಷ್. ಸದ್ಯ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದಲ್ಲಿ ಬರುತ್ತಿರುವ ಕುಬೇರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ನಾಯಕನಾಗಿ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೆ ಇದೆ.
ಸರಣಿ ಚಿತ್ರಗಳಲ್ಲಿ ಬಿಸಿಯಾಗಿರುವ ಧನುಷ್ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದು ಅವರ 52ನೇ ಸಿನಿಮಾವಾಗಿದೆ. ಈ ಸಿನಿಮಾದ ಬಗ್ಗೆ ಮಂಗಳವಾರ (ಸೆಪ್ಟೆಂಬರ್ 17) ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ಆಕಾಶ್ ಬಾಸ್ಕರನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಇನ್ನು ಹೆಸರಿಡದ ಸಿನಿಮಾದ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿದೆ.
ಡಾನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ ಮೊದಲ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಹೇಳಲು ಸಂತೋಷವಾಗುತ್ತಿದೆ. ಇದು ನಮ್ಮ ನಿರ್ಮಾಣ ಸಂಸ್ಥೆಗೆ ಪ್ರಮುಖ ಮೈಲಿಗಲ್ಲು. ಪ್ರಪಂಚದಾದ್ಯಂತ ಸಿನಿಪ್ರೇಕ್ಷಕರನ್ನು ರಂಜಿಸಲು ಧನುಷ್ ಅಭಿಮಾನಿಗಳಿಗೆ ವಿನೂತನ ವಿಷಯ ನೀಡಲು ನಾವು ಸಿದ್ಧರಿದ್ದೇವೆ. D52 ಅನ್ನು ಘೋಷಿಸಲು ಹೆಮ್ಮೆಪಡುತ್ತೇನೆ. ನಮಗೆ ಈ ಅದ್ಭುತ ಅವಕಾಶ ನೀಡಿದ ಧನುಷ್ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇವೆ ಎಂದು ನಿರ್ಮಾಪಕ ಆಕಾಶ್ ಭಾಸ್ಕರನ್ ಹೇಳಿದ್ದಾರೆ.
NEW BEGINNINGS! 💥
— DawnPictures (@DawnPicturesOff) September 17, 2024
Dawn Pictures launches with a bang!
We are proud to announce our maiden project #D52, starring @dhanushkraja sir 🔥@aakashbaskaran @wunderbarfilms @DawnPicturesOff #DawnPictures @theSreyas pic.twitter.com/Iet4X0cdD1
ಆದರೆ ಈ ಸಿನಿಮಾವನ್ನು ಯಾರು ನಿರ್ದೇಶಿಸಲಿದ್ದಾರೆ ಹಾಗೂ ಚಿತ್ರತಂಡಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇನ್ನೂ ಹೊರಬಂದಿಲ್ಲ. ಆದ್ರೆ ಚಿತ್ರವನ್ನು ನಟ ಧನುಷ್ ನಿರ್ದೇಶನ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್)
ಕನ್ನಡ್ ಅಲ್ಲ.. ಕನ್ನಡ; ಅಭಿನಯ ಚಕ್ರವರ್ತಿ ಸುದೀಪ್ ಪಾಠ ಮಾಡಿದ್ದು ಯಾರಿಗೆ?