ಇಸ್ಲಾಮಾಬಾದ್: ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ದುಃಖ ತರಿಸಬಹುದು, ಮತ್ತೆ ಕೆಲವೊಂದು ಎಂಟರ್ಟೈನ್ಮೆಂಟ್ ನೀಡಬಹುದು, ಇನ್ನು ಕೆಲವು ನಗೆಗಡಲಲ್ಲಿ ನಿಮ್ಮನ್ನು ತೇಲಿಸುಬಹುದು. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್( Viral Video) ಆಗುತ್ತಿದೆ. ಅದು ವಾಟರ್ ಸಪ್ಲೈ ಪೈಪ್ನಿಂದ ನೀರು ಬರುತ್ತಿದೆ ಎಂದು ತಿಳಿಯಲು ಮಾಡಿರುವ ಜುಗಾಡ್ ಟ್ರಿಕ್ ಅನ್ನು ನೋಡಬಹುದು.
ಇದನ್ನು ಓದಿ: ‘ಸ್ತ್ರೀ 2’ ಹಾಡಿಗೆ ಪುಟ್ಟ ಪೋರಿಯ ಮಸ್ತ್ ಸ್ಟೆಪ್ಸ್; ಜೂ. ಶ್ರದ್ಧಾ ಕಪೂರ್ ಎಂದ ನೆಟ್ಟಿಗರು | Viral Video
ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಾತನಾಡುತ್ತಾ ಡೆಮೊ ತೋರಿಸುವುದನ್ನು ನೋಡಬಹುದು. ನೀರು ಸರಬರಾಜು ಪೈಪ್ನಲ್ಲಿ ಕೊಳವೆ ಮಾದರಿಯ ಒಂದನ್ನು ಸಿಂಪಡಿಸಿದ್ದಾರೆ. ಅದು ಬಾರಿ ಸೌಂಡ್ ಮಾಡುವುದನ್ನು ನೀವು ಕಾಣಬಹುದು. ನೀರು ಬರುವ ಮುನ್ನ ಪೈಪ್ಗೆ ಅಳವಡಿಸಿರುವ ಈ ಕೊಳವೆಯೂ ಸೌಂಡ್ ಮಾಡುತ್ತದೆ ಎಂದು ಆ ಮಹಿಳೆ ವಿವರಿಸಿದ್ದಾರೆ. ಒತ್ತಡದಿಂದಾಗಿ ರಿಂಗಿಂಗ್ ಪ್ರಾರಂಭವಾಗುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅಂದ್ಹಾಗೆ ಈ ವಿಡಿಯೋವನ್ನು ಜುಲೈನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಪಾಕಿಸ್ತಾನದ್ದು ಎನ್ನಲಾಗಿದೆ. ನೀರು ಬರುವುದನ್ನು ಕಾಯುವುದು ಈಗ ಮುಗಿದಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಇದುವರೆಗೂ ಈ ವಿಡಿಯೋ 52 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ.
ವಿಡಿಯೋ ನೋಡಿದ ನೆಟ್ಟಿಗರು ನಾಸಾದಿಂದ 1.5 ಕೋಟಿ ಮಿಸ್ಡ್ ಕಾಲ್‌ಗಳನ್ನು ಸ್ವೀಕರಿಸಲಾಗಿದೆ, ದುಃಖಕರ ವಿಷಯವೆಂದರೆ ಈಗ ಈ ವಿಡಿಯೋ ಭಾರತವನ್ನು ತಲುಪಿದೆ, ಮಗ ಜುಗಾಡ್ನಲ್ಲಿ ಕಡಿಮೆಯಿಲ್ಲ, ಈಗ ಈ ತಂತ್ರಜ್ಞಾನ ಭಾರತಕ್ಕೂ ಬಂದಿದೆ, ಈಗ ಈ ತಂತ್ರಜ್ಞಾನ ನಾಸಾ ತಲುಪಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)
ಕುತ್ತಿಗೆಗೆ ವಿಷಕಾರಿ ಹಾವನ್ನು ಸುತ್ತಿಕೊಂಡಿರುವ ಪುಟ್ಟ ಪೋರಿ; ವಿಡಿಯೋ ನೋಡಿ ನೆಟ್ಟಿಗರು ಕಿಡಿ | Viral Video