ವಿಶ್ವದ ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಹಾವು ಕೂಡ ಒಂದಾಗಿದೆ. ರೀಲ್ಸ್ಗಾಗಿ ಅಥವಾ ವಿಡಿಯೋ ಮಾಡಿ ಅತಿ ಹೆಚ್ಚು ಲೈಕ್ಗಳನ್ನು ಪಡೆಯುವ ಸಲುವಾಗಿ ಇತ್ತೀಚಿನ ದಿನಗಳಲ್ಲಿ ಹಾವನ್ನು ಸಾಕುವುದು ಹೊಸ ಪ್ರವೃತ್ತಿಯಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಿದರೆ ಪ್ರತಿಯೊಂದು ಅಪಾಯಕಾರಿ ಜೀವಿಯನ್ನು ತನ್ನ ಮುದ್ದಿನ ಸಾಕುಪ್ರಾಣಿಯನ್ನಾಗಿ ಮಾಡಿಕೊಳ್ಳುವ ಮನುಷ್ಯ ಅದಕ್ಕಿಂತಲೂ ಅಪಾಯಕಾರಿ ಎನ್ನಿಸುವುದಂತೂ ಸತ್ಯ.(Viral Video)
ಇದನ್ನು ಓದಿ: ರೈಲ್ವೆ ಟ್ರ್ಯಾಕ್ ಮೆಲೆ ಆನೆಗಳ ಹಿಂಡು; ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ನೋಡಿದ್ರೆ ಅಚ್ಚರಿ ಪಡೋದು ಪಕ್ಕಾ | Viral Video
ವೈರಲ್ ವಿಡಿಯೋದಲ್ಲಿ ಒಬ್ಬಳು ಸಣ್ಣ ಹುಡುಗಿಯ ಕುತ್ತಿಗೆಗೆ ಹಾವು ಸುತ್ತಿಕೊಂಡಿರುವುದನ್ನು ನೋಡಬಹುದು. ಪುಟ್ಟ ಹುಡುಗಿ ಸ್ವಲ್ಪ ಭಯಭೀತಳಾಗಿರುವಂತೆ ವಿಡಿಯೋದಲ್ಲಿ ಕಾಣುತ್ತದೆ. ಅವಳು ತನ್ನ ದೇಹದ ಮೇಲೆ ತೆವಳುತ್ತಾ ಕುತ್ತಿಗೆಗೆ ಸುತ್ತಿಕೊಳ್ಳುತ್ತಿರುವ ಬೃಹತ್ ಹಾವನ್ನು ನಿಭಾಯಿಸುತ್ತಿರುವುದನ್ನು ಕಾಣಬಹುದು.
‘ಹೇ ನಾನು ಸ್ನೇಕ್‌ಮಾಸ್ಟೆರೆಕ್ಸೊಟಿಕ್ಸ್‌ನಿಂದ ಅರಿಯಾನಾ! ಏನು ಊಹಿಸಿ? ಈ ದೊಡ್ಡ ಹಾವು ನನ್ನ ಕುತ್ತಿಗೆಗೆ ಸುತ್ತಿಕೊಂಡಿದೆ. ಆದರೆ ಚಿಂತಿಸಬೇಡಿ, ನಾನು ಅದನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದೇನೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಆಕೆಯ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಮೊದಲೇ ವಿವಿಧ ಜಾತಿಯ ಹಾವುಗಳೊಂದಿಗೆ ಅನೇಕ ವಿಡಿಯೋ ಮತ್ತು ಚಿತ್ರಗಳನ್ನು ತೆಗೆದುಕೊಂಡಿರುವುದನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದರೆ ಅರಿಯಾನಾ ಎಂಬ ಹುಡುಗಿ ಹಾವುಗಳನ್ನು ಇಷ್ಟಪಡುತ್ತಾಳೆ ಎಂದೆನ್ನಿಸುವುದಂತು ಸತ್ಯ. ಆಕೆ 4 ಲಕ್ಷ ಜನರು ಫಾರ್ಲೋವರ್ಸ್ ಅನ್ನು ಹೊಂದಿದ್ದಾಳೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಲದಲ್ಲಿ ಭಾರೀ ಆಕ್ರೋಶ ಉಂಟಾಗಿದೆ. ವಿಡಿಯೋ ಮಾಡಲು ಕಂಟೆಂಟ್ಗಾಗಿ ಆ ಮಗುವಿನ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತಿದ್ದಾರೆ, ಯಾವುದೇ ಪಾಲಕರು ಇಂತಹ ಬೇಜವಾಬ್ದಾರಿ ಕೃತ್ಯಗಳನ್ನು ಮಾಡುವುದಿಲ್ಲ, ನೀವು ಯಾವ ರೀತಿಯ ಪಾಲಕರು, ಚಿಕ್ಕ ಹುಡುಗಿಗೆ ಅಪಾಯದ ಬಗ್ಗೆ ತಿಳಿದಿರುವುದಿಲ್ಲ, ಆ ಪಾಲಕರನ್ನು ಬಂಧಿಸಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಾಹನದ ಬಾನೆಟ್ ಮೇಲೆ ಕಾಡಿನ ರಾಜ; ಸಿಂಹದ ಫೋಸ್ಗೆ ನೆಟ್ಟಿಗರು ಏನಂದ್ರು ಗೊತ್ತಾ? | Viral Video