ಪ್ರತಿಯೊಂದು ಪ್ರಾಣಿಯು ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಕಾಡಿನ ರಾಜ ಎಂದು ಸಿಂಹವನ್ನು ಕರೆಯುತ್ತಾರೆ. ಸಿಂಹವು ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ತನಗಿಂತ ದೊಡ್ಡವರೇ ಅಥವಾ ಚಿಕ್ಕವರೇ ಎಂದು ಯೋಚಿಸುವುದಿಲ್ಲ. ತನ್ನ ಕೆಲಸವನ್ನು ತಾನು ನಿಸ್ಸಂದೇಹವಾಗಿ ಮಾಡುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಂಹದ ವಿಡಿಯೋವೊಂದು(Viral Video) ಹರಿದಾಡುತ್ತಿದೆ.
ಇದನ್ನು ಓದಿ: ಮೆಟ್ರೋ ಟ್ರ್ಯಾಕ್ ಮೇಲೆ ಮೂತ್ರ ವಿಸರ್ಜಿಸುತ್ತಿರುವ ವ್ಯಕ್ತಿ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೀಗೆ | Viral Video
ವೈರಲ್ ವಿಡಿಯೋ ನೋಡಿದ್ರೆ ನಿಮಗೆ ಸಿಂಹ ಯಾವುದೋ ಸಾಹಸ ಮಾಡುವ ಹುಮ್ಮಸ್ಸಿನಲ್ಲಿದೆಯೋ ಅಥವಾ ಸೋಮಾರಿತನದಲ್ಲಿಯೋ ಎಂಬ ಆಲೋಚನೆ ಬರಬಹುದು. ವಾಸ್ತವವಾಗಿ ಈ ವಿಡಿಯೋದಲ್ಲಿ ಸಿಂಹವು ಕಾಡಿನಲ್ಲಿ ಸಫಾರಿಗೆ ಬಳಸುವ ವಾಹನದ ಮೇಲೆ ಇರುವುದನ್ನು ಕಾಣಬಹುದು. ಕಾರು ಚಲಿಸುವಾಗ ಸಿಂಹವು ಆ್ಯಕ್ಷನ್ ಹೀರೋನಂತೆ ಕಾರಿನ ಬಾನೆಟ್ ಮೇಲೆ ನಿಂತಿದೆ.
ಸಿಂಹವು ಕಾರಿನ ಬಾನೆಟ್ ಮೇಲೆ ಹತ್ತಿ ಸವಾರಿಯನ್ನು ಆನಂದಿಸುತ್ತಿದೆ ಎಂದೆನ್ನಿಸುತ್ತದೆ. ಸಫಾರಿ ವಾಹನದೊಳಗಿರುವ ಜನರು ಆರಾಮಾಗಿ ಕುಳಿತಿರುವುದನ್ನು ನೋಡಬಹುದು. ನಡೆಯುವುದಕ್ಕಿಂತ ಇದು ಉತ್ತಮವಾಗಿದೆ ಎಂದು ಸಿಂಹವು ಭಾವಿಸಿರಬಹುದು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Lion is like: wow, this is better than walking!! pic.twitter.com/ivZpqrG0qT
— Nature is Amazing ☘️ (@AMAZlNGNATURE) September 28, 2024
ವಿಡಿಯೋ ವೈರಲ್ ಆದಗಿನಿಂದ ಇಲ್ಲಿಯವರೆಗೆ 3.7 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಹಲವರು ಪ್ರತಿಕ್ರಿಯಿಸಿದ್ದಾರೆ. ಈ ರೀತಿ ಆಯ್ಕೆ ಇರುವಾಗ ನಾನು ಯಾವಾಗಲೂ ಏಕೆ ನಡೆಯುತ್ತೇನೆ ಎಂದು ನಿಜವಾಗಿಯೂ ಸಿಂಹ ಭಾವಿಸುತ್ತಿರಬೇಕು, ಸಿಂಹವು ಇದನ್ನು ಆನಂದಿಸುತ್ತಿದೆ, ತಾನೂ ಸಿಂಹಕ್ಕೆ ಸವಾರಿ ಮಾಡಿಸಿದ್ದೇನೆ ಎಂದು ಡ್ರೈವರ್ ರೆಸ್ಯೂಮ್‌ನಲ್ಲಿ ಸೇರಿಸುತ್ತಾನೆ, ಸಿಂಹವು ಉತ್ತಮ ಶಾರ್ಟ್‌ಕಟ್ ಅನ್ನು ಆರಿಸಿಕೊಂಡಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ನುಂಗಿದ ಮೂರು ಹಾವುಗಳನ್ನು ಉಗುಳಿದ King Cobra; ಎದೆ ಝಲ್ಲೆನ್ನಿಸುವ Video ನೋಡಿದ್ರೆ ಮೂಕವಿಸ್ಮಿತರಾಗುವುದು ಗ್ಯಾರಂಟಿ