ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ‘ಸ್ತ್ರೀ 2’ ಸಿನಿಮಾ ಥಿಯೇಟರ್ಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಬಾಕ್ಸ್ ಆಫೀಸಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಇನ್ನು ಚಿತ್ರದ ‘ಆಜ್ ಕಿ ರಾತ್’ ಮತ್ತು ’ಆಯಿ ನಹಿ’ ಸೂಪರ್ ಹಿಟ್ ಹಾಡುಗಳಿಗೆ ರೀಲ್ಸ್ ಮಾಡುತ್ತಿರುವುದನ್ನು ನೋಡಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video) ಆಗುತ್ತಿದೆ.
ಇದನ್ನು ಓದಿ: ಕುತ್ತಿಗೆಗೆ ವಿಷಕಾರಿ ಹಾವನ್ನು ಸುತ್ತಿಕೊಂಡಿರುವ ಪುಟ್ಟ ಪೋರಿ; ವಿಡಿಯೋ ನೋಡಿ ನೆಟ್ಟಿಗರು ಕಿಡಿ | Viral Video
ವೈರಲ್ ವಿಡಿಯೋದಲ್ಲಿ ಚಿಕ್ಕ ಹುಡುಗಿಯೊಬ್ಬಳು ‘ಆಯಿ ನಹಿ’ ಹಾಡಿಗೆ ಡ್ಯಾನ್ಸ್ ಮಾಡುವುದನ್ನು ನೋಡಬಹುದು. ಈ ಹುಡುಗಿಯ ಡ್ಯಾನ್ಸ್ ವಿಡಿಯೋ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಹುಡುಗಿಯ ಸುತ್ತ ಆಕೆಯ ಡ್ಯಾನ್ಸ್ ನೋಡುತ್ತಾ ನಿಂತಿರುವವರನ್ನು ಕಾಣುಬಹುದು. ಹಾಡು ಶುರುವಾದ ತಕ್ಷಣ ಆ ಹುಡುಗಿ ತುಂಬಾ ಬೋಲ್ಡ್ ಆಗಿ ಡ್ಯಾನ್ಸ್ ಮಾಡುತ್ತಾಳೆ. ಸುತ್ತ ನಿಂತಿದ್ದವರು ಚಪ್ಪಾಳೆ ತಟ್ಟುತ್ತಾ ಅವರ ಸಂತೋಷಕ್ಕೆ ಮಿತಿಯೇ ಇಲ್ಲ ಎಂಬಂತಿದೆ.
ವೈರಲ್ ವಿಡಿಯೋ ಈವರೆಗೂ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಅನ್ನು ಪಡೆದುಕೊಂಡಿದೆ. ಅಲ್ಲದೆ ವಿಡಿಯೋವನ್ನು 4 ಮಿಲಿಯನ್ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾಋಎ. ಹಲವರು ಪ್ರತಿಕ್ರಿಯಿಸಿದ್ದಾರೆ. ಉಫ್…ಆಕೆಯ ಡ್ಯಾನ್ಸ್ ನೋಡಿ, ದೇವರಿಂದ ಪ್ರತಿಭಾನ್ವಿತ ಪ್ರತಿಭೆಯನ್ನು ಪಡೆದಿದ್ದಾರೆ, ನೃತ್ಯ ಅದ್ಭುತವಾಗಿದೆ, ಬಾಬ್ ರೇ… ಈ ಹುಡುಗಿ ಏನು ನೃತ್ಯ ಮಾಡುತ್ತಾಳೆ, ಹುಡುಗಿ ಮಿನಿ ಶ್ರದ್ಧಾ ಕಪೂರ್‌ನಂತೆ ಕಾಣುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ವಾಹನದ ಬಾನೆಟ್ ಮೇಲೆ ಕಾಡಿನ ರಾಜ; ಸಿಂಹದ ಫೋಸ್ಗೆ ನೆಟ್ಟಿಗರು ಏನಂದ್ರು ಗೊತ್ತಾ? | Viral Video