ನಾವು ಬಿಲ್ ಕಟ್ಟಲ್ಲ ಎಂದ ಗ್ರಾಮಸ್ಥರು; ಕೆಇಬಿ ಕಲೆಕ್ಟರ್​ ಊರಿಂದ ಹೊರಕ್ಕೆ!

bill collector
Published on

ಕೊಪ್ಪಳ: ಅತ್ತ ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಇತ್ತ ಜನರು ಕೂಡ ಕರೆಂಟ್ ಬಿಲ್ ಕಾಂಗ್ರೆಸ್​ನವರನ್ನೆ ಕೇಳಿ ಎನ್ನುತ್ತಿದ್ದಾರೆ.

ಕಾಂಗ್ರೆಸ್​ಗೆ ಬಹುಮತ ಸಿಕ್ಕ ಹಿನ್ನೆಲೆ ವಿದ್ಯುತ್ ಬಿಲ್ ಪಾವತಿ ಮಾಡಲ್ಲ ಎಂದು ಜನರು ಹೇಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರ ಗ್ರಾಮದಲ್ಲಿ ಜನರು ಬಿಲ್​ ಪಾವತಿ ಮಾಡಿಸಿಕೊಳ್ಳಲು ಬಂದ ಕೆಇಬಿ ಬಿಲ್ ಕಲೆಕ್ಟರ್​ನನ್ನೇ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

"ಕಾಂಗ್ರೆಸ್ ಸರ್ಕಾರ ಬಂದಿದೆ ಅವರ ಬಳಿಯೆ ಬಿಲ್ ತಗೆದುಕೋ ನಾವು ಬಿಲ್ ಕಟ್ಟಲ್ಲ. ಬೇಕಾದರೆ ನಿನ್ನ ಆಫೀಸರ್​ ಬಳಿ ಹೋಗಿ ಹೇಳು" ಎಂದು ಜನರು ಹೇಳುತ್ತಿದ್ದು "ಗ್ರಾಮದಲ್ಲಿ ಯಾರ ಮನೆಗೂ ಹೋಗಿ ಬಿಲ್ ಕೇಳಬೇಡ. ಕಮರ್ಷಿಯಲ್ ಮೀಟರ್ ಗೆ ಮಾತ್ರ ಬಿಲ್ ಕೇಳು ಮನೆಗಳ ತಂಟೆಗೆ ಬರಬೇಡ" ಎಂದು ಬಿಲ್ ಕಲೆಕ್ಟರ್​ಗೆ ಜನರು ಕ್ಲಾಸ್ ಕೂಡ ತಗೆದುಕೊಂಡಿದ್ದಾರೆ. ಇಷ್ಟು ನಡೆದು ಬಿಲ್ ಕಲೆಕ್ಟರ್​ರನ್ನು ಗ್ರಾಮದಿಂದ ಗ್ರಾಮಸ್ಥರು ಹೊರ ಕಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net