More

    ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ಸಿದ್ದರಾಮಯ್ಯನವರ ಅಸಹಾಯಕತೆ ಕೆಲವರನ್ನು ಪಕ್ಷ ಬಿಡಲು ಪ್ರೋತ್ಸಾಹಿಸಿತ್ತು: ಎಸ್​​.ಟಿ ಸೋಮಶೇಖರ್

    ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ಡಾ. ಸುಧಾಕರ್, ಸಿದ್ದರಾಮಯ್ಯನವರ ಪರೋಕ್ಷ ಅಥವಾ ಅಪರೋಕ್ಷ ಪಾತ್ರದ ಕಾರಣದಿಂದಲೇ ಕೆಲವರು ರಾಜೀನಾಮೆ ನೀಡಿದ್ದರು ಎಂದು ಟ್ವೀಟ್​ ಮೂಲಕ ಹೇಳಿದ್ದರು. ಇದೀಗ ಅದೇ ಧಾಟಿಯ ಟ್ವೀಟ್​ ಒಂದನ್ನು ಎಸ್​.ಟಿ ಸೋಮಶೇಖರ್​ ಪೋಸ್ಟ್​ ಮಾಡಿದ್ದಾರೆ.

    ತಮ್ಮ ಟ್ವೀಟ್​ನಲ್ಲಿ ಎಸ್.ಟಿ ಸೋಮಶೇಖರ್​, “ಮಾನ್ಯ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ಶಾಸಕರಲ್ಲಿ ತೋಡಿಕೊಳ್ಳುತ್ತಿದ್ದ ಅಸಹಾಯಕತೆ, ಕೊಡುತ್ತಿದ್ದ ಆಶ್ವಾಸನೆ ಇದೇ ಎಂಬುದು ಸತ್ಯ.

    ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ!: ಸ್ಫೋಟಕ ಹೇಳಿಕೆ ನೀಡಿದ ಸುಧಾಕರ್

    ಸಿದ್ದರಾಮಯ್ಯನವರ ಅಸಹಾಯಕತೆ ಸಹ ನಾವು ಪಕ್ಷ ಬಿಡಲು ಒಂದು ಪ್ರೇರಣೆಯಾಯಿತು ಎಂದರೆ ಅದು ತಪ್ಪಾಗಲಾರದು” ಎಂದು ಬರೆದುಕೊಂಡಿದ್ದಾರೆ.

    ಇದೀಗ ಡಿಕೆಶಿ ಹಾಗೂ ಸಿದ್ದರಾಮಯ್ಯ ಸಿಎಂ ಗಾದಿಗಾಗಿ ಪಟ್ಟು ಬಿಡದೇ ಸ್ಪರ್ಧಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಟ್ವೀಟ್​ಗಳನ್ನು ಬಿಜೆಪಿ ನಾಯಕರು ಹರಿಯ ಬಿಡುತ್ತಿರುವುದು ಅಚ್ಚರಿಯ ನಡೆಯಾಗಿದೆ. ಮೇಲ್ನೋಟಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯರೇ ಕಾರಣವಾದರಾ ಎನ್ನುವ ಪ್ರಶ್ನೆಯನ್ನು ಈ ಟ್ವೀಟ್​ಗಳು ಹುಟ್ಟು ಹಾಕುತ್ತವೆ. ಇದರಿಂದ ಕಾಂಗ್ರೆಸ್​ನ ಸಿಎಂ ಆಯ್ಕೆ ಮೇಲೆ ಪ್ರಭಾವ ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts