More

    ಶೀಘ್ರದಲ್ಲೇ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಪ್ರವೀಣ್ ಸೂದ್; ಟ್ವೀಟ್ ಮೂಲಕ ವಿದಾಯ

    ಬೆಂಗಳೂರು: ಮುಂದಿನ ಎರಡು ವರ್ಷಗಳವರೆಗೆ ಸಿಬಿಐನ ನಿರ್ದೇಶಕರಾಗಿ ಆಯ್ಕೆ ಆಗಿರುವ ಪ್ರಸ್ತುತ ಡಿಜಿ, ಐಜಿಪಿ ಪ್ರವೀಣ್ ಸೂದ್ ಇಂದು ಟ್ವೀಟ್ ಮಾಡಿದ್ದು ತಮ್ಮ ಅಧಿಕಾರವನ್ನು ಹೊಸಬರಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.

    ತಮ್ಮ ಟ್ವೀಟ್​ನಲ್ಲಿ ಪ್ರವೀಣ್ ಸೂದ್, “ಶೀಘ್ರದಲ್ಲೇ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡುತ್ತೇನೆ. ಡಿಜಿ&ಐಜಿಪಿ ಕರ್ನಾಟಕ ಈ ಅಧಿಕೃತ ಟ್ವಿಟ್ಟರ್ ಖಾತೆ ನಿರ್ವಹಣೆಯಿಂದ ಹೊರಬರುತ್ತೇನೆ. 2020ರಲ್ಲಿ ಈ ಖಾತೆಯ ನಿರ್ವಹಣೆಯನ್ನು ಪ್ರಾರಂಭಿಸಿದ್ದೇನೆ. ಅಧಿಕೃತ ವಿಷಯಗಳ ಬಗ್ಗೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 1.6 ಲಕ್ಷ ಜನ ಈ ಖಾತೆಯನ್ನ ಅನುಸರಿಸುತ್ತಿರೋದು ತುಂಬಾ ಖುಷಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: 545 ಪಿಎಸ್​ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲು ಸಿದ್ಧ ಎಂದ ಪ್ರವೀಣ್ ಸೂದ್; ಯಾವಾಗ?

    ನಂತರದ ಎರಡು ಟ್ವೀಟ್​ಗಳಲ್ಲಿ ಅವರು, ಕರ್ನಾಟಕ ಪೊಲೀಸರಿಗೆ ಸಂಬಂಧಿಸಿದ ಅಧಿಕೃತ ವಿಷಯಗಳ ಕುರಿತು ನಿಮ್ಮ ಪ್ರತಿಕ್ರಿಯೆಗಳಿಗಾಗಿ ತುಂಬು ಧನ್ಯವಾದಗಳು. ನಾನು ನನ್ನ @Copsview ವೈಯಕ್ತಿಕ ಹ್ಯಾಂಡಲ್ ಅನ್ನು ಬಳಸುವುದನ್ನು ಮುಂದುವರಿಸುತ್ತೇನೆ.
    HOPF ಆಗಿ ಕಳೆದ 3.5 ವರ್ಷಗಳಲ್ಲಿ ಮತ್ತು ಸಾಮಾನ್ಯವಾಗಿ 37 ವರ್ಷಗಳಲ್ಲಿ ನನಗೆ ತೋರಿದ ಪ್ರೀತಿ ಮತ್ತು ಪ್ರೀತಿಗಾಗಿ ಧನ್ಯವಾದಗಳು” ಎಂದು ಬರೆದಿದ್ದಾರೆ.

    2025ರಲ್ಲಿ ವಾಪಸ್!

    ನನ್ನ ಮುಂದಿನ ಅಸೈನ್​ಮೆಂಟ್​ಗಳನ್ನು ಪೂರ್ಣಗೊಳಿಸಿದ ನಂತರ ನಾನು ಕರ್ನಾಟಕಕ್ಕೆ ಮೇ 2025 ರಲ್ಲಿ ಹಿಂತಿರುಗುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಮತ್ತೊಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಮುಂದಿನ ಡಿಜಿ ಹಾಗೂ ಐಜಿಪಿಯಾಗಿ ಯಾರು ಆಯ್ಕೆ ಆಗಲಿದ್ದಾರೆ ಎನ್ನುವ ಕುತೂಹಲವನ್ನು ಹುಟ್ಟು ಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts