More

    ಏಕಾಏಕಿ ಈರುಳ್ಳಿ ಬೆಲೆ ಕುಸಿತ! ರೈತ ಕಂಗಾಲು

    ಬೆಂಗಳೂರು: ಈರುಳ್ಳಿ ಬೆಲೆ ಏಕಾಏಕಿ ಕುಸಿತವಾಗಿದ್ದು ಈರುಳ್ಳಿ ಬೆಳಗಾರರು ಕಂಗಾಲಾಗಿದ್ದಾರೆ.

    ಕಳೆದ ವಾರ ಮಳೆಯಾಗಿದ್ದು ವಿಜಯಪುರ ಜಿಲ್ಲೆಯಿಂದ ಈರುಳ್ಳಿ ದೊಡ್ಡ ಪ್ರಮಾಣದಲ್ಲಿ ರಾಜಧಾನಿಯ ಮಾರುಕಟ್ಟೆಗೆ ದಾಸ್ತಾನು ಬಂದಿದೆ. ನಗರದ ಯಶವಂತಪುರ ಹಾಗೂ ದಾಸರಹಳ್ಳಿ ಎಪಿಎಂಸಿಗೆ ಬರುತ್ತಿದೆ. ಹೀಗಾಗೀ ಈರುಳ್ಳಿ ಬೆಲೆ ಇಳಿಕೆಯಾಗಿದೆ.

    ಇದನ್ನೂ ಓದಿ: ಒಂದೇ ವರ್ಷದಲ್ಲಿ ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ 500% ಏರಿಕೆ; ಗಗನಕ್ಕೇರಿದ ಚಿಕನ್ ಬೆಲೆ!

    ಸೀಸನ್​ ಅಲ್ಲದ ಸಮಯದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ!

    ಇನ್ನು ಸೀಸನ್‌ ಅಲ್ಲದ ಕಾರಣ ಕಳೆದ ಒಂದೆರಡು ತಿಂಗಳಿಂದ ಯಶವಂತಪುರ ಮಾರುಕಟ್ಟೆಯ ಈರುಳ್ಳಿ ವಿಭಾಗದಲ್ಲಿ ವಹಿವಾಟು ಕುಸಿತವಾಗಿದೆ. ಏಕಾಏಕಿ ಸೋಮವಾರದಿಂದ ಇಲ್ಲಿಗೆ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದ್ದು ಕಡಿಮೆ ಗುಣಮಟ್ಟದ ಹೆಚ್ಚು ಈರುಳ್ಳಿ ಬಂದಿರುವ ಕಾರಣಕ್ಕೆ ಬೆಲೆಯೂ ಗಣನೀಯವಾಗಿ ಕಡಿಮೆಯಾಗಿದೆ.

    ಇದನ್ನೂ ಓದಿ: ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ

    ಎಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 8-10 ರೂ. ಗೆ ಮಾರಾಟವಾಗುತ್ತಿದ್ದು ಕಳಪೆ ಈರುಳ್ಳಿ ಬೆಲೆ 5-8 ದರದಲ್ಲಿ ಹರಾಜು ಹಾಕಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ ಕೆಜಿಗೆ 20 ರೂ. ಗೆ ಮಾರಾಟವಾಗುತ್ತಿದ್ದು ಕಳಪೆ ಈರುಳ್ಳಿಗೆ 10-12 ರೂ. ಮಾತ್ರವೇ ಬೆಲೆಯಿದೆ.

    ಮಳೆಗೂ ಈರುಳ್ಳಿ ಬೆಲೆಗೂ ಅವಿನಾಭಾವ ಸಂಬಂಧ

    100 ರೂ.ಗೆ ಏಳು-ಎಂಟು ಕೇಜಿ ಈರುಳ್ಳಿ ಮಾರಾಟ ಆಗುತ್ತಿದ್ದು ಇದೀಗ ಮಳೆಯಾಗುತ್ತಿರುವ ಕಾರಣಕ್ಕೆ ತೇವಾಂಶದಿಂದ ಈರುಳ್ಳಿ ಕೊಳೆಯಬಹುದು ಎಂಬ ಆತಂಕ ವಿಜಯಪುರ ಭಾಗದ ರೈತರಲ್ಲಿ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ರೈತರು ಬೆಳೆ ನಾಶದ ಭಯದಿಂದ ದಾಸ್ತಾನಿಟ್ಟಿದ್ದ ಈರುಳ್ಳಿಯನ್ನು ಹೊರತೆಗೆದು ಮಾರುಕಟ್ಟೆಗೆ ತರುತ್ತಿದ್ದಾರೆ. ಸೀಸನ್‌ ಅಲ್ಲದ ಸಾಮಾನ್ಯ ದಿನಗಳಲ್ಲಿ ಗರಿಷ್ಠ 30ರಿಂದ 35 ಸಾವಿರ ಚೀಲ ಈರುಳ್ಳಿ ಬರುತ್ತದೆ.

    ಇದನ್ನೂ ಓದಿ: ಈರುಳ್ಳಿ ತುಂಬಿದ್ದ ವಾಹನ-ಹಾಲಿನ ಕ್ಯಾಂಟರ್​ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

    ಆದರೆ, ಮಂಗಳವಾರ ಯಶವಂತಪುರ ಮಾರುಕಟ್ಟೆಗೆ 308 ಲಾರಿಗಳಲ್ಲಿ 47,676, ದಾಸನಪುರಕ್ಕೆ 6,318 ಸೇರಿ ಒಟ್ಟು 53,994 ಚೀಲ ಈರುಳ್ಳಿ ಬಂದಿದೆ. ಅದಲ್ಲದೇ ಸೋಮವಾರ ಬರೋಬ್ಬರಿ 72 ಸಾವಿರ ಚೀಲ ಈರುಳ್ಳಿ ಬಂದಿತ್ತು. ಹೀಗಾಗಿ ಪೂರೈಕೆ ಹೆಚ್ಚಾಗಿದ್ದು ಭಾರಿ ಬೆಲೆ ಇಳಿಕೆಯಾಗಿದೆ. ಒಟ್ಟಿನಲ್ಲಿ ಮಳೆ ಕಾರಣಕ್ಕೆ ಈರುಳ್ಳಿ ಬೆಲೆ ಕಡಿಮೆಯಾಗಿದೆ ಎಂದೇ ಹೇಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts