blank

ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ!: ಸ್ಫೋಟಕ ಹೇಳಿಕೆ ನೀಡಿದ ಸುಧಾಕರ್

blank

ಬೆಂಗಳೂರು: ಕಾಂಗ್ರೆಸ್​ ಪೂರ್ಣ ಬಹುಮತದೊಂದಿಗೆ ಗೆದ್ದು ಬಂದಿದ್ದು ಬಿಜೆಪಿಗೆ ದೊಡ್ಡ ಶಾಕ್ ನೀಡಿದ ಹಾಗಿತ್ತು. ಇನ್ನೂ ಸಿಎಂ ಆಯ್ಕೆ, ಸರ್ಕಾರ ರಚನೆಯೇ ಆಗಿಲ್ಲ, ಅಷ್ಟರಲ್ಲಾಗಲೇ ಮಾಜಿ ಸಚಿವ ಡಾ. ಸುಧಾಕರ್, ಬಾಂಬ್ ಸಿಡಿಸಿದ್ದಾರೆ.

ಟ್ವಿಟರ್​ ಮೂಲಕ ಇದೀಗ ಮಾಜಿ ಸಚಿವ ಸುಧಾಕರ್, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳುವ ಕಾರಣದ ಸ್ಪೋಟಕ ಹೇಳಿಕೆ ನೀಡಿದ್ದಾರೆ. ತಮ್ಮ ಟ್ವೀಟ್​ನಲ್ಲಿ ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯರೇ ಕಾರಣ ಎಂದು ಸುಧಾಕರ್ ಹೇಳಿಕೆ ನೀಡಿದ್ದಾರೆ.

ಸರಣಿ ಟ್ವೀಟ್​ನಲ್ಲಿ ಸುಧಾಕರ್, “ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ?

2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.

2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು.

ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು.

ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ?” ಎಂದು ಬರೆದ್ದಾರೆ.

ಈ ಹೇಳಿಕೆಯಿಂದಾಗಿ ಸದ್ಯ ಕಾಂಗ್ರೆಸ್​ನಲ್ಲಿ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇದ್ದು ಅದರ ಪರಿಣಾಮವಾಗಿ ಸಿಎಂ ರೇಸ್​ನಿಂದ ಸಿದ್ದರಾಮಯ್ಯ ಹಿಂದೆ ಸರಿಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Share This Article

ಸಣ್ಣ ವಿಷಯಗಳಿಗೂ ಒತ್ತಡಕ್ಕೆ ಒಳಗಾಗುತ್ತಿದ್ದೀರಾ?; ಹಾಗಾದ್ರೆ ತಪ್ಪಿದ್ದಲ್ಲ ಈ ಕಾಯಿಲೆಗಳ ಸಮಸ್ಯೆ | Health Tips

ಕೆಲವೊಮ್ಮೆ ನಮ್ಮ ಕೆಲವು ಅಭ್ಯಾಸಗಳು ನಮ್ಮ ದೇಹದಲ್ಲಿ ಹೇಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ.…

ಗರ್ಭಧಾರಣೆಯ 7ನೇ ತಿಂಗಳಿನಿಂದ ಅರಿಶಿನದೊಂದಿಗೆ ಹಸುವಿನ ಹಾಲು ಸೇವಿಸಿದ್ರೆ ಸಾಮಾನ್ಯ ಹೆರಿಗೆ ಆಗುವುದೇ; ತಜ್ಞರು ಹೇಳುವುದೇನು? | Health Tips

ಗರ್ಭಾವಸ್ಥೆಯಲ್ಲಿ ಪ್ರತಿ ಮಹಿಳೆ ತನ್ನ ಹೆರಿಗೆ ಸಾಮಾನ್ಯವಾಗಿರಬೇಕೆಂದು ಬಯಸುತ್ತಾರೆ. ವಾಸ್ತವವಾಗಿ ಸಿ-ಸೆಕ್ಷನ್ ಅನೇಕ ಅಡ್ಡಪರಿಣಾಮಗಳನ್ನು ಹೊಂದಿದೆ…

ಬೆಳಗ್ಗೆ ಎದ್ದ ತಕ್ಷಣ ಮಾಡುವ ಸಣ್ಣ ತಪ್ಪಿಂದಾಗಿ ಗಂಭೀರ ಕಾಯಿಲೆಗಳು ಎದುರಿಸಬೇಕಾಗುತ್ತಂತೆ!; ಅದು ಏನು ಗೊತ್ತೆ? | Morning

Morning : ನೀವು ಬೆಳ್ಳಿಗ್ಗೆ ಮತ್ತುಮ ರಾತ್ರಿ ಹಲ್ಲುಜ್ಜದೆ ಮಲಗಿದ್ರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗಿತ್ತವೆ…