More

    1,096 ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಭಾಗಿ

    ಹುಣಸೂರು: ನಗರದಲ್ಲಿ ಗುರುವಾರ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕಿನ 274 ಮತಗಟ್ಟೆ ಕೇಂದ್ರದ ಸಿಬ್ಬಂದಿ ಮತ ಯಂತ್ರಗಳನ್ನು ಪಡೆದುಕೊಂಡರು.


    ಬೆಳಗ್ಗೆ 10 ಗಂಟೆಯಿಂದ ವಿದ್ಯಾಸಂಸ್ಥೆಯ 30ಕ್ಕೂ ಹೆಚ್ಚು ಕೊಠಡಿಗಳಲ್ಲಿ ಚುನಾವಣಾ ಸಿಬ್ಬಂದಿಗೆ ಮಾಸ್ಟರ್ ಟ್ರೈನರ್ಸ್‌ ಇವಿಎಂ ಯಂತ್ರದ ಜೋಡಣೆ, ಮಾಕ್‌ಪೋಲ್ ಯಾವಾಗ ಮಾಡಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿ ಯಂತ್ರಗಳನ್ನು ಆಯಾ ಮತಗಟ್ಟೆ ಕೇಂದ್ರದ ಪಿಆರ್‌ಒಗೆ ಒಪ್ಪಿಸಿದರು.


    ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 274 ಮತಗಟ್ಟೆಗಳಲ್ಲಿ 1,096 ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಕ್‌ಪೋಲ್ ಇನ್ನಿತರ ಯಾವುದೇ ಕಾರ್ಯಗಳನ್ನು ಚುನಾವಣಾ ಸಿಬ್ಬಂದಿ ಚುನಾವಣೆ ದಿನದ ಬೆಳಗ್ಗೆ ಮತಗಟ್ಟೆ ಕೇಂದ್ರದಲ್ಲಿ ಮಾಡಬೇಕು. ಇನ್ಯಾವುದೇ ಪ್ರಕ್ರಿಯೆಯನ್ನು ನಡೆಸಕೂಡದು. ಪಾರದರ್ಶಕವಾಗಿ ಚುನಾವಣೆ ನಡೆಯಬೇಕಿದೆ. ಮಸ್ಟರಿಂಗ್ ಕೇಂದ್ರದಿಂದ ಹೊರಟ ನಂತರ ಮಸ್ಟರಿಂಗ್ ವೆಬ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಆಯಾ ಮತಗಟ್ಟೆ ಕೇಂದ್ರ ತಲುಪಿದ ಖಾತರಿಯನ್ನು ಆಯೋಗಕ್ಕೆ ತಿಳಿಸಲು ಸೂಚಿಸಲಾಗಿದೆ. ಸಮಸ್ಯೆಗಳೇನಾದರೂ ಕಂಡುಬಂದಲ್ಲಿ ಸೆಕ್ಟರ್ ಅಧಿಕಾರಿಯಲ್ಲಿ ತಿಳಿಸಿರಿ ಅಥವಾ ನೇರವಾಗಿ ಸಹಾಯಕ ಚುನಾವಣಾಧಿಕಾರಿಯಾದ ನನಗೆ ಮಾಹಿತಿ ನೀಡಲು ಸೂಚಿಸಿದ್ದೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts