More

    ಸಲ್ಮಾನ್​ ಚಿತ್ರದಲ್ಲಿ ಬಾಕ್ಸರ್​ ವಿಜೇಂದರ್​ ಸಿಂಗ್​ ನಟನೆ; 8 ವರ್ಷಗಳ ನಂತರ ಅಭಿನಯಕ್ಕೆ

    ಮುಂಬೈ: 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿಜೇಂದರ್​ ಸಿಂಗ್​ಗೆ ನಟನೆ ಹೊಸದೇನಲ್ಲ. ಈ ಹಿಂದೆ ಅವರು 2014ರಲ್ಲಿ ‘ಫಗ್ಲಿ’ ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಈಗ ಬರೋಬ್ಬರಿ 8 ವರ್ಷಗಳ ನಂತರ ಅವರು ಅಭಿನಯಕ್ಕೆ ವಾಪಸ್ಸಾಗಿದ್ದಾರೆ. ಸಲ್ಮಾನ್​ ಖಾನ್​ ಅಭಿನಯದ ‘ಕಿಸಿ ಕಾ ಭಾಯ್​ ಕಿಸಿ ಕೀ ಜಾನ್​’ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಮೆಗಾ ಕ್ಲ್ಯಾಶ್​; ಸಂಕ್ರಾಂತಿಗೆ ಬಾಕ್ಸ್​ ಆಫೀಸ್​ನಲ್ಲಿ ಅಜಿತ್​ ವರ್ಸಸ್​ ವಿಜಯ್​‘

    ಶನಿವಾರ ವಿಜೇಂದರ್​ ಸಿಂಗ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಿಜೇಂದರ್​ ಸಿಂಗ್​, ‘ಕಿಸಿ ಕಾ ಭಾಯ್​ ಕಿಸಿ ಕೀ ಜಾನ್​’ ಚಿತ್ರದಲ್ಲಿ ನಟಿಸುತ್ತಿರುವುದನ್ನು ಸಲ್ಮಾನ್​ ಖಾನ್​ ಘೋಷಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಒಂದು ಫೋಟೋ ಹಂಚಿಕೊಂಡು, ‘ಹ್ಯಾಪಿ ಬರ್ಥ್​ಡೇ ಹಮಾರೆ ಬಾಕ್ಸರ್​ ಭಾಯ್​’ ಎಂದು ಹೇಳಿದ್ದಾರೆ. ಈ ಮೂಲಕ ಚಿತ್ರದಲ್ಲಿ ವಿಜೇಂದರ್​ ಸಿಂಗ್​ ನಟಿಸುತ್ತಿರವ ವಿಷಯವನ್ನು ಘೋಷಿಸಿದ್ದಾರೆ.

    ಈ ಚಿತ್ರದಲ್ಲಿ ವಿಜೇಂದರ್​ ಅವರ ಪಾತ್ರವೇನು? ಎಂಬ ವಿಷಯ ಇನ್ನೂ ಗೊತ್ತಾಗಿಲ್ಲ. ಆದರೆ, ಅವರು ಆ ಫೋಟೋದಲ್ಲಿ ಸಲ್ಮಾನ್​ ಖಾನ್​ ಜತೆಗೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಜತೆಗೆ ಜಸ್ಸೀ ಗಿಲ್​, ಸಿದ್ಧಾರ್ಥ್​ ನಿಗಮ್​ ಮತ್ತು ರಾಘವ್​ ಜುಯಾಲ್​ ಸಹ ಇದ್ದಾರೆ. ಅವರೆಲ್ಲರೂ ಮುಷ್ಠಿ ಕಟ್ಟಿದ್ದು, ಇದು ಫೈಟಿಂಗ್​ ದೃಶ್ಯವಿರಬಹುದು ಎಂದು ಸೂಚಿಸುತ್ತದೆ.

    ಇದನ್ನೂ ಓದಿ: ಡಿಸೆಂಬರ್​ನಲ್ಲಿ ಸಿದ್ಧಾರ್ಥ್​-ಕಿಯಾರಾ ಮದುವೆ; ಸದ್ಯದಲ್ಲೇ ಅಧಿಕೃತ ಘೋಷಣೆ

    ‘ಕಿಸಿ ಕಾ ಭಾಯ್​ ಕಿಸಿ ಕೀ ಜಾನ್​’ ಚಿತ್ರವು ತಮಿಳಿನ ‘ವೀರಂ’ ಚಿತ್ರದ ರೀಮೇಕ್​ ಆಗಿದ್ದು, ಈ ಹಿಂದೆ ‘ಬಚ್ಚನ್​ ಪಾಂಡೇ’ ಚಿತ್ರವನ್ನು ನಿರ್ದೇಶಿಸಿದ್ದ ಫರ್ಹಾದ್​ ಸಾಮ್ಜಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಲ್ಮಾನ್​ಗೆ ನಾತಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದು, ತೆಲುಗಿನ ವೆಂಕಟೇಶ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ರಾಮ್​ಚರಣ್​ ತೇಜ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗಿದೆ.

    ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರ ‘ಕೆಡಿ’ಗೆ ಶ್ರೀಲೀಲಾ ನಾಯಕಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts