More

    ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರ ‘ಕೆಡಿ’ಗೆ ಶ್ರೀಲೀಲಾ ನಾಯಕಿ?

    ಬೆಂಗಳೂರು: ‘ಜೋಗಿ’ ಪ್ರೇಮ್​ ನಿರ್ದೇಶನದಲ್ಲಿ ಧ್ರುವ ಸರ್ಜಾ ಅಭಿನಯಿಸಿರುವ ಹೊಸ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಲಿದೆ. 70ರ ದಶಕದ ಕಥೆಯಿರುವ ಈ ಪೀರಿಯಾಡಿಕ್​ ಚಿತ್ರಕ್ಕೆ ‘ಕೆಡಿ – ದಿ ಡೆವಿಲ್​’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಧ್ರುವಗೆ ನಾಯಕಿಯಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಮೂಲಗಳ ಪ್ರಕಾರ, ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ‘ಬ್ರಹ್ಮಾಸ್ತ್ರ 2’ನಲ್ಲಿ ಯಶ್​ ನಟಿಸೋದು ಸುಳ್ಳು ಎಂದ ಕರಣ್​ ಜೋಹರ್​; ಅಭಿಮಾನಿಗಳಿಗೆ ನಿರಾಸೆ

    ಇದಕ್ಕೂ ಮೊದಲು ‘ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ಜಾಗಕ್ಕೆ ರಶ್ಮಿಕಾ ಮಂದಣ್ಣ ಬಂದರು. ಆ ನಂತರ ‘ದುಬಾರಿ’ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗುವುದು ಫಿಕ್ಸ್​ ಎಂದು ಹೇಳಲಾಯ್ತು. ಆದರೆ, ಆ ಚಿತ್ರವೇ ಮುಂದುವರೆಯಲಿಲ್ಲ. ಈಗ ‘ಕೆಡಿ – ದಿ ಡೆವಿಲ್​’ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ ಎಂಬ ಸುದ್ದಿ ಇದೆ. ಆದರೆ, ನಿರ್ದೇಶಕ ಪ್ರೇಮ್​ ಆಗಲೀ, ಚಿತ್ರತಂಡದವರಾಗಲೀ ಇದು ಖಚಿತ ಎಂದು ಎಲ್ಲೂ ಹೇಳಿಲ್ಲ.

    ಇತ್ತೀಚೆಗೆ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್​, ನಾಯಕಿಯ ಹುಡುಕಾಟ ಇನ್ನೂ ನಡೆದಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಯಾರು ಹೆಚ್ಚು ಸಮಯ ಕೊಡುತ್ತಾರೋ ಅವರು ನಾಯಕಿಯಾಗುತ್ತಾರೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಶ್ರೀಲೀಲಾಗೆ ಕನ್ನಡದಲ್ಲಿ ‘ಜ್ಯೂನಿಯರ್’ ಬಿಟ್ಟರೆ ಬೇರೆ ಚಿತ್ರವಿಲ್ಲ. ತೆಲುಗಿನಲ್ಲಿ ಒಂದೆರಡು ಚಿತ್ರಗಳನ್ನು ಅವರು ಒಪ್ಪಿದ್ದಾರಾದರೂ ಅವು ಮುಗಿಯುವ ಹಂತಕ್ಕ ಬಂದಿದೆ. ಸದ್ಯ ಶ್ರೀಲೀಲಾ ಬಳಿ ಒಂದಿಷ್ಟು ಸಮಯವಿರುವುದರಿಂದ ಅವರೇ ಈ ಚಿತ್ರಕ್ಕೆ ನಾಯಕಿಯಾಗಬಹುದು ಎಂದು ಹೇಳಲಾಗುತ್ತಿದೆ. ಮೇಲಾಗಿ, ಶ್ರೀಲೀಲಾ ಕುಟುಂಬಕ್ಕೂ, ಕೆವಿಎನ್​ ಪ್ರೊಡಕ್ಷನ್ಸ್​ ಸಂಸ್ಥೆಯ ನಡುವೆ ಒಳ್ಳೆಯ ಸ್ನೇಹ ಇದೆ. ಹಾಗಾಗಿ, ಈ ಚಿತ್ರಕ್ಕೆ ಅವರೇ ಫಿಕ್ಸ್ ಎಂದು ಹೇಳಲಾಗುತ್ತಿದೆ.

    ಅಂದಹಾಗೆ, ‘ಕೆಡಿ – ದಿ ಡೆವಿಲ್​’ ಚಿತ್ರದಲ್ಲಿ ಸಂಜಯ್​ ದತ್​ ನಟಿಸುತ್ತಿದ್ದು, ಅವರ ಜತೆಗೆ ಶಿಲ್ಪಾ ಶೆಟ್ಟಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಸದ್ಯ ‘ಮಾರ್ಟಿನ್​’ ಚಿತ್ರದಲ್ಲಿ ಧ್ರುವ ಬಿಜಿಯಾಗಿದ್ದು, ಆ ಚಿತ್ರದ ನಂತರ ‘ಕೆಡಿ’ಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಜಯಾ ಅವರನ್ನು ಮದುವೆಯಾಗುವುದಕ್ಕೆ ಒಂದು ಕಂಡೀಷನ್​ ಹಾಕಿದ್ದರಂತೆ ಅಮಿತಾಭ್​ … ಏನು ಗೊತ್ತಾ ಅದು?

    ‘ಕೆಡಿ – ದಿ ಡೆವಿಲ್​’ ಚಿತ್ರದ ಮುಹೂರ್ತ ಈಗಾಗಲೇ ಕಳೆದ ಏಪ್ರಿಲ್​ನಲ್ಲೇ ಮುಗಿದಿದ್ದು, ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಅರ್ಜುನ್​ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್​ ಛಾಉಆಗ್ರಹಣ ಈ ಚಿತ್ರಕ್ಕಿದೆ.

    ಕೊಚ್ಚಿನ್​ನಿಂದ ಮುಂಬೈವರೆಗೆ; ರಿಷಭ್​ ಶೆಟ್ಟಿ ಹೊಸ ಪ್ರಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts