More

    ಜಯಾ ಅವರನ್ನು ಮದುವೆಯಾಗುವುದಕ್ಕೆ ಒಂದು ಕಂಡೀಷನ್​ ಹಾಕಿದ್ದರಂತೆ ಅಮಿತಾಭ್​ … ಏನು ಗೊತ್ತಾ ಅದು?

    ಮುಂಬೈ: ಬಾಲಿವುಡ್​ ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​ ಅವರನ್ನು ಮದುವೆಯಾಗಿ 49 ವರ್ಷಗಳಾಗಿವೆ. ಮುಂದಿನ ಜೂನ್​ ಬಂದರೆ, ಇವರಿಬ್ಬರೂ ಮದುವೆಯಾಗಿ 50 ವರ್ಷಗಳಾಗುತ್ತವೆ. ಅಲ್ಲಿಂದ ತಮ್ಮ ಇಷ್ಟು ವರ್ಷಗಳ ದಾಂಪತ್ಯ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ.

    ಇದನ್ನೂ ಓದಿ: ಹಿಮಾಚಲ ಪ್ರದೇಶದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಲು ಕಂಗನಾ ರೆಡಿಯಂತೆ …

    ಆದರೆ, ಮದುವೆಯಾಗುವುದಕ್ಕೆ ಮುನ್ನ, ಅಮಿತಾಭ್​ ಬಚ್ಚನ್​ ಅವರು ಜಯಾ ಬಾಧುರಿ ಅವರಿಗೆ ಒಂದು ಕಂಡೀಷನ್​ ಇಟ್ಟಿದ್ದರಂತೆ. ಅದನ್ನು ಪೂರೈಸಿದರೆ ಮದುವೆಯಾಗುವುದಾಗಿ ಹೇಳಿದ್ದರಂತೆ. ಈ ವಿಷಯವನ್ನು ಸ್ವತಃ ಜಯಾ ಬಚ್ಚನ್​ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

    ‘ನಾವಿಬ್ಬರೂ ಮದುವೆಯಾಗುವುದಕ್ಕೆ ಅವರಿಗೆ ಒಂದು ಕಂಡೀಷನ್​ ಇತ್ತು. ಪ್ರಮುಖವಾಗಿ, ನಾನು ಅಭಿನಯಿಸುವುದನ್ನು ನಿಲ್ಲಿಸಬಾರದು ಎಂಬುದು ಅವರ ಆಸೆಯಾಗಿತ್ತು. ನನ್ನ ಹೆಂಡತಿ ಮೂರು ಹೊತ್ತೂ ಮನೆಯಲ್ಲಿ ಇರುವುದು ನನಗೆ ಇಷ್ಟ ಇಲ್ಲ. ಕೆಲಸವನ್ನು ಮುಂದುವರೆಸು. ಅದರ ಜತೆಗೆ ಕುಟುಂಬಕ್ಕೂ ಸಮಯ ಕೊಡು. ಸರಿಯಾದ ಜನರೊಂದಿಗೆ ಒಳ್ಳೆಯ ಚಿತ್ರಗಳನ್ನು ಮಾಡು ಎಂದು ಅವರು ನನ್ನನ್ನು ಹುರುದುಂಬಿಸಿದ್ದರು’ ಎಂದು ಹೇಳಿದ್ದಾರೆ ಜಯಾ ಬಚ್ಚನ್​.

    ಇದನ್ನೂ ಓದಿ: ಇಡೀ ಸಿನಿಮಾ ಹಾಲ್​ ಬುಕ್​ ಮಾಡಿ ಉಚಿತ ಟಿಕೆಟ್ ವಿತರಿಸಿದ ಮಾಜಿ ಸಚಿವರ ಪುತ್ರ! ‘ಗಂಧದಗುಡಿ’ ವೀಕ್ಷಿಸಿದ ಎಲ್ಲರಿಗೂ…

    ಅಮಿತಾಭ್​ ಬಚ್ಚನ್​ ಮತ್ತು ಜಯಾ ಅವರ ಮದುವೆ 1973ರ ಜೂನ್​ 3ರಂದು ಮುಂಬೈನಲ್ಲಿ ಸರಳ ಸಮಾರಂಭದಲ್ಲಿ ನಡೆಯಿತು.

    ಕೆಎಂಎಫ್​ ರಾಯಭಾರಿ ಆಗಿದ್ದ ಪುನೀತ್​ಗೆ ವಿಶೇಷ ಗೌರವ; ಹಾಲಿನ ಪ್ರತಿ ಪ್ಯಾಕೆಟಲ್ಲೂ ಅಪ್ಪು ನಮನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts