ಎಕ್ಸ್​​​ನಲ್ಲಿ ಬಿಟೌನ್​ ಬ್ಯೂಟಿ ಜಾನ್ವಿ ಕಪೂರ್​​​ಗೆ ಖಾತೆ ಇಲ್ವಂತೆ; ನಟಿಯ ತಂಡ ಹೀಗೆಳಿದ್ದು ಯಾಕೆ ಗೊತ್ತಾ?

Untitled-design-2024-06-17T170821.157
Published on

ಮುಂಬೈ: ಸಿನಿಮಾ ಸೆಲಿಬ್ರಿಟಿಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳಿಂದ ತೊಂದರೆ ಎದುರಿಸುತ್ತಿರುತ್ತಾರೆ. ಇತ್ತೀಚೆಗೆ ಬಿಟೌನ್​​​ ನಟಿ ಜಾನ್ವಿ ಕಪೂರ್ ಕೂಡ ಇಂತಹದ್ದೇ ವಂಚನೆಗೆ ಬಲಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಹೆಸರಿನಲ್ಲಿ ಹಲವು ನಕಲಿ ಖಾತೆಗಳು ಪತ್ತೆಯಾಗಿವೆ ಎಂದು ಜಾನ್ವಿ ಕಪೂರ್​ ತಂಡವು ಆಕೆಯ ಅಧಿಕೃತ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದೆ.

ಜಾನ್ವಿ ಕಪೂರ್ ಹೆಸರಿನಲ್ಲಿ ಹಲವು ನಕಲಿ ಖಾತೆಗಳು ಪತ್ತೆಯಾಗಿವೆ. ಈ ನಕಲಿ ಖಾತೆಗಳು ಅಸಲಿ ಖಾತೆಯಂತೆ ಗೋಚರಿಸುತ್ತವೆ. ನಟಿಯ ನಿಜವಾದ ಖಾತೆಗಳೆಂದು ಅಭಿಮಾನಿಗಳನ್ನು ದಾರಿತಪ್ಪಿಸಲಾಗುತ್ತಿದೆ. ಈ ನಕಲಿ ಖಾತೆಗಳಿಂದ ಯಾರೊಬ್ಬರು ಮೋಸ ಹೋಗದಂತೆ ತಂಡವು ಮನವಿ ಮಾಡಿದೆ.

ಡಿಜಿಟಲ್ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾರದ್ದೆ ಹೆಸರಿನಲ್ಲದರೂ ಖಾತೆಯನ್ನು ರಚಿಸುವುದು ತುಂಬಾ ಸುಲಭ. ಜಾಹ್ನವಿ ಕಪೂರ್ ಈ ಹಿಂದೆ ಟ್ವಿಟ್ಟರ್​ ಎಂದು ಕರೆಯಲಾಗುತ್ತಿದ್ದ ಎಕ್ಸ್​ನಲ್ಲಿ ಯಾವುದೇ ಅಧಿಕೃತ ಖಾತೆಯನ್ನು ಹೊಂದಿಲ್ಲ. ದಯವಿಟ್ಟು ಈ ನಕಲಿ ಖಾತೆಗಳಿಂದ ಒದಗಿಸಲಾದ ಯಾವುದೇ ಮಾಹಿತಿಯನ್ನು ನಂಬಬೇಡಿ ಎಂದು ತಂಡವು ಸ್ಪಷ್ಟಿಕರಣ ನೀಡಿದೆ.

ಅಲ್ಲದೆ ನಟಿ ಜಾನ್ವಿ ಕಪೂರ್​​ ತಮ್ಮ ವೈಯಕ್ತಿಕ ಅಥವಾ ವೃತ್ತಿ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಇನ್​​ಸ್ಟಾಗ್ರಾಮ್​ ಖಾತೆಯನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net