ಪವನ್​ ಕಲ್ಯಾಣ್​ ನನ್ನನ್ನು ಬಿಟ್ಟು ಹೋಗಿದ್ದು, ನಾನಲ್ಲ ಎಂದಿದ್ದೇಕೆ ರೇಣು ದೇಸಾಯಿ

Untitled-design-2024-06-17T152854.469-1
Published on

ನಟಿ ರೇಣು ದೇಸಾಯಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವುದು ಗೊತ್ತೇ ಇದೆ. ಅಕಿರಾ ಮತ್ತು ಆದ್ಯಾ ಕುರಿತ ಆಕೆಯ ಪೋಸ್ಟ್‌ಗಳು ಕ್ಷಣಗಳಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗೆ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ರೇಣು ದೇಸಾಯಿ ಮತ್ತು ಎಪಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ರೇಣು ಯಾವುದೇ ಪೋಸ್ಟ್​ ಹಾಕಿದರೂ ಪವನ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿರುತ್ತಾರೆ. ಪವನ್ ಕಲ್ಯಾಣ್ ಅವರನ್ನು ನನ್ನ ವೈಯಕ್ತಿಕ ಜೀವನಕ್ಕೆ ತರಬೇಡಿ ಎಂದು ರೇಣು ದೇಸಾಯಿ ಎಷ್ಟು ಬಾರಿ ಬೇಡಿಕೊಂಡರೂ ಪವನ್ ಅಭಿಮಾನಿಗಳು ರೇಣು ಅವರ ಪೋಸ್ಟ್ ಅಡಿಯಲ್ಲಿ ಕಾಮೆಂಟ್​ ಮಾಡುವುದನ್ನು ನಿಲ್ಲಿಸಿಲ್ಲ.

ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ರೇಣು ದೇಸಾಯಿ ತಮ್ಮ ಮನೆಯಲ್ಲಿ ನಡೆದ ಹಬ್ಬ ಹಾಗೂ ಹೋಮದ ಕುರಿತು ಮಾತನಾಡಿ ಪೋಸ್ಟ್​ ಮಾಡಿದ್ದರು. ಅದರಲ್ಲಿ ನಾನೇ ತನ್ನ ಕೈಯಿಂದಲೇ ಪ್ರಸಾದ ಮಾಡಿದೆ ಎಂದು ರೇಣು ದೇಸಾಯಿ ಹೇಳಿದ್ದಾರೆ. ಆದರೆ ಅವರು ಶೇರ್ ಮಾಡಿರುವ ವಿಡಿಯೋಗೆ ಪವನ್ ಅಭಿಮಾನಿ ನೀಡಿರುವ ಪ್ರತಿಕ್ರಿಯೆಗೆ ರೇಣು ದೇಸಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯೊಬ್ಬ, ವದಿನಾಗಾರು ನೀವು ಸ್ವಲ್ಪ ದಿನ ತಾಳ್ಮೆಯಿಂದ ಇದ್ದಿದ್ದರೆ ಚೆನ್ನಾಗಿರುತಿತ್ತು. ಒಬ್ಬ ದೇವರನ್ನು ಮದುವೆಯಾಗಿ ಅವರ ಅಂತರಂಗ ತಿಳಿಯದೆ ಹೊರಟುಹೋದಿರಿ. ಆದರೆ ಇಂದು ನಿಮಗೆ ಅವರ ಬೆಲೆ ತಿಳಿದಿದ್ದೀರಿ. ವಿಧಿ ಎಲ್ಲವನ್ನೂ ನಿರ್ಧರಿಸುತ್ತದೆ. ಮಕ್ಕಳು ಅಣ್ಣನ ಜತೆ ಇದ್ದಾರೆ ನಿಮ್ಮನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

ಅದಕ್ಕೆ ಪ್ರತಿಕ್ರಿಯಸಿರುವ ರೇಣು ದೇಸಾಯಿ, ನಿಮಗೆ ಸ್ವಲ್ಪವಾದ್ರೂ ಬುದ್ಧಿ ಇದ್ದಿದ್ದರೆ ಹೀಗೆ ಹೇಳುತ್ತಿರಲಿಲ್ಲ. ನಾನು ಪವನ್​ ಅವರನ್ನು ಬಿಟ್ಟು ಹೋಗಿದ್ದಲ್ಲ. ಅವರೇ ನನ್ನನ್ನು ಬಿಟ್ಟುಹೋಗಿ ಇನ್ನೊಂದು ಮದುವೆ ಆಗಿದ್ದಾರೆ. ದಯವಿಟ್ಟು ಮತ್ತೊಮ್ಮೆ ಈ ರೀತಿ ಕಾಮೆಂಟ್​​ ಮಾಡಿ ನನಗೆ ಹಿಂಸೆ ನೀಡಬೇಡಿ ಎಂದು ಪವನ್​ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net