ಕೊಚ್ಚಿನ್​ನಿಂದ ಮುಂಬೈವರೆಗೆ; ರಿಷಭ್​ ಶೆಟ್ಟಿ ಹೊಸ ಪ್ರಯಾಣ

Rishab Shetty
Published on

ಮುಂಬೈ: 'ಕಾಂತಾರ' ಚಿತ್ರದ ಪ್ರಮೋಷನ್​ಗಾಗಿ ರಿಷಭ್​ ಶೆಟ್ಟಿ ಕೆಲವು ದಿನಗಳ ಹಿಂದೆ ಬೇರೆಬೇರೆ ರಾಜ್ಯಗಳಿಗೆ ಭೇಟಿ ಕೊಟ್ಟು, ಈಗ ಮತ್ತೊಮ್ಮೆ ಅವರು ಕೊಚ್ಚಿನ್​ನಿಂದ ಮುಂಬೈವರೆಗೂ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿ ಅವರು ಹೋಗಿರುವುದು ಧನ್ಯವಾದ ಸಮರ್ಪಿಸಲಿಕ್ಕೆ.

ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರವು ಸೆ. 30ರಂದು ಕನ್ನಡದಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಪಡೆದಿತ್ತು. ಆ ನಂತರ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್​ ಆಗುವ ಮೂಲಕ ಪ್ಯಾನ್ ಇಂಡಿಯಾಗೆ ಡಬ್​ ಆಗಿತ್ತು. ಈ ಚಿತ್ರದ ಪ್ರಚಾರಕ್ಕಾಗಿ ರಿಷಭ್​ ಶೆಟ್ಟಿ, ಸಪ್ತಮಿ ಗೌಡ, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ನಗರಗಳಿಗೆ ಭೇಟಿ ಕೊಟ್ಟು ಚಿತ್ರದ ಪ್ರಚಾರ ಮಾಡಿದ್ದಾರೆ.

ಈಗ ಚಿತ್ರ ಗೆದ್ದ ಖುಷಿಯಲ್ಲಿ ರಿಷಭ್​ ಮತ್ತೊಮ್ಮೆ ಚಾರ್ಟರ್ಡ್​ ಫ್ಲೈಟ್​ ಹತ್ತಿದ್ದಾರೆ. ಈ ಬಾರಿ ಅವರು ಹೋಗಿದ್ದು ಚಿತ್ರ ಗೆಲ್ಲಿಸಿದ ಜನರಿಗೆ ಧನ್ಯವಾದ ಹೇಳಲಿಕ್ಕೆ. ಬೆಂಗಳೂರಿನಿಂದ ಕೊಚ್ಚಿನ್​ಗೆ ಹೊರಟು, ಅಲ್ಲಿಂದ ಚೆನ್ನೈ, ತಿರುಪತಿ, ವಿಶಾಖಪಟ್ನಂ ಮತ್ತು ಮುಂಬೈಗೆ ಹೋಗಿದ್ದಾರೆ. ಭೇಟಿ ನೀಡಿದ ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾತನಾಡುವುದರ ಜತೆಗೆ, ಚಿತ್ರ ಗೆಲ್ಲಿಸಿದ ಜನರಿಗೆ ಅಭಿನಂದನೆ ತಿಳಿಸಿದ್ದಾರೆ.

ಬರೀ ಪತ್ರಿಕಾಗೋಷ್ಠಿಗಳನ್ನು ನಡೆಸುವುದರಷ್ಟೇ ಅಲ್ಲ. ಕೆಲವು ದೊಡ್ಡ ದೇವಸ್ಥಾನಗಳಿಗೂ ಹೋಗಿ ದೇವರ ಆಶೀರ್ವಾದ ಪಡೆದಿದ್ದಾರೆ. ಸಿಂಹಾಚಲ ದೇವಸ್ಥಾನ, ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೂ ರಿಷಭ್​ ಭೇಟಿಕೊಟ್ಟು ದೇವರ ದರ್ಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net