More

    ಹಾಗೆ ಹೇಳಿ ತಪ್ಪು ಮಾಡಿದೆ, ಈಗ ನನಗೆ ನಾನೇ ಶಿಕ್ಷೆ ಕೊಟ್ಟುಕೊಂಡುದಿದ್ದೇನೆ: ವಿಜಯ್​ ದೇವರಕೊಂಡ

    ಹೈದರಾಬಾದ್: ಕಳೆದ ವರ್ಷ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಖುಷಿ ಚಿತ್ರದ ಸಕ್ಸಸ್​ನಲ್ಲಿರುವ ನಟ ವಿಜಯ್​ ದೇವರಕೊಂಡ ಅವರ ಅಭಿನಯದ ದಿ ಫ್ಯಾಮಿಲಿ ಸ್ಟಾರ್​ ತೆರೆಗೆ ಬರಲು ಸಜ್ಜಾಗಿದ್ದು, ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು 2022ರಲ್ಲಿ ತೆರೆಕಂಡಿದ್ದ ಲೈಗರ್ ಚಿತ್ರದ ಸೋಲಿನ ಕುರಿತು ಮಾತನಾಡಿರುವ ನಟ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ದಿ ಫ್ಯಾಮಿಲಿ ಸ್ಟಾರ್​ ಪ್ರಮೋಶನ್​ ವೇಳೆ ಲೈಗರ್​ ಸೋಲಿನ ಕುರಿತು ಮಾತನಾಡಿದ ದೇವರಕೊಂಡ, ಲೈಗರ್​ ಚಿತ್ರ ಬಾಕ್ಸ್​ಆಫೀಸಿನಲ್ಲಿ ಸೋತರೂ ನಾನು ನನ್ನ ವರ್ತನೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಲೈಗರ್​ ಸೋಲಿನಿಂದಾಗಿ ನಾನು ನನ್ನಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡೆ ಮತ್ತು ಅದರಿಂದ ಅಮೂಲ್ಯವಾದ ಪಾಠವನ್ನು ಕಲಿತೆ.

    ಇದನ್ನೂ ಓದಿ: ಆರ್​ಸಿಬಿ-ಲಖನೌ ಪಂದ್ಯಕ್ಕೆ ಮಳೆ ಭೀತಿ; ಚಿನ್ನಸ್ವಾಮಿ ​ಅಂಗಳ ಯಾರಿಗೆ ಹೆಚ್ಚು ಸಹಕಾರಿ?

    ಲೈಗರ್​ ಸೋಲಿನಿಂದಾಗಿ ನನಗೆ ನಾನೇ ಶಿಕ್ಷೆಯನ್ನು ಕೊಟ್ಟುಕೊಂಡಿದ್ದೆ. ಅದೇನೆಂದರೆ ಚಿತ್ರ ಬಿಡುಗಡೆಯಾಗುವ ಮುನ್ನ ನಾನು ಆ ಸಿನಿಮಾದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಇದೇ ವಿಚಾರ ನಾನು ನನ್ನ ಮೇಲೆ ವಿಧಿಸಿರುವ ಶಿಕ್ಷೆ ಎಂದು ನಟ ವಿಜಯ್​ ದೇವರಕೊಂಡ ದಿ ಫ್ಯಾಮಿಲಿ ಸ್ಟಾರ್​ ಚಿತ್ರದ ಪ್ರಮೋಷನ್​ ವೇಳೆ ಹೇಳಿದ್ದಾರೆ.

    ಗೀತಾ ಗೋವಿಂದಂ ಬಳಿಕ ನಿರ್ದೇಶಕ ಪರಶುರಾಮ್​ ಜೊತೆ ಸಿನಿಮಾ ಮಾಡುತ್ತಿರುವ ವಿಜಯ್​ ದೇವರಕೊಂಡ ದಿ ಫ್ಯಾಮಿಲಿ ಸ್ಟಾರ್​ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಗೋಪಿ ಸುಂದರ್​​ ಸಂಗೀತ ಸಂಯೋಜಿಸಿದ್ದು, ಮೃಣಾಲ್​ ಠಾಕೂರ್​ ವಿಜಯ್​ಗೆ ಜತೆಯಾಗಿದ್ದಾರೆ. ದಿಲ್​ರಾಜ್​ ಚಿತ್ರಕ್ಕೆ ಬಂಡವಾಲ ಹೂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts