More

    ಅಮಿತ್ ಷಾ ಬುಲಾವ್ ಬೆನ್ನಲ್ಲೇ ದೆಹಲಿಗೆ ಈಶ್ವರಪ್ಪ; ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದ ಮಾಜಿ ಸಚಿವ

    ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕರ್ನಾಟಕದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಪ್ರಬಲ ಆಕಾಂಕ್ಷಿಗಳು ಬಂಡಾಯ ಏಳುತ್ತಿದ್ದು, ಬಿಜೆಪಿ ಪಾಲಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರ ನಡುವೆಯೇ ಪುತ್ರನಿಗೆ ಹಾವೇರಿ ಟಿಕೆಟ್​ ಕೈತಪ್ಪಿದ ಪರಿಣಾಮ ಅಸಮಾಧಾನಗೊಂಡು ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ದೆಹಲಿ ಬರುವಂತೆ ಬಿಜೆಪಿ ಹೈಕಮಾಂಡ್​ನಿಂದ ಬುಲಾವ್​ ಬಂದಿದೆ.

    ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ ಈ ಬಗ್ಗೆ ಈಶ್ವರಪ್ಪಗೆ ಕರೆ ಮಾಡಿ ಮಾತನಾಡಿದ್ದು, ಬುಧವಾರ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ. ಅಮಿತ್ ಷಾ ಕರೆ ಬೆನ್ನಲ್ಲೇ ಆಪ್ತ ಜೊತೆ ಮಾತನಾಡಿರುವ ಈಶ್ವರಪ್ಪ ದೆಹಲಿಗೆ ಹೋಗಿ ಬರುವುದಾಗಿ ತಿಳಿಸಿದ್ದಾರೆ. ಆದರೆ, ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ವಿಚಾರಕ್ಕೆ ಬದ್ಧ ಇರುವುದಾಗಿ ಹೇಳಿರುವುದಾಗಿ ವರದಿಯಾಗಿದೆ.

    ಅಮಿತ್​ ಷಾ ಕರೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ, ನಮ್ಮ ದೇಶದ ಗೃಹಮಂತ್ರಿಗಳು, ದೇಶದ ಉಕ್ಕಿನ ಮನುಷ್ಯ ಬೆಳಗ್ಗೆ ದೂರವಾಣಿ ಮೂಲಕ ಕರೆ ಮಾಡಿದ್ರು. ನೀವು ಇಷ್ಟ ಹಿರಿಯರಿದ್ದೀರಿ ಯಾಕೆ ಚುನಾವಣೆಗೆ‌ ನಿಂತಿದ್ದೀರಾ ಅಂತಾ ಕೇಳಿದ್ರು. ಅಪ್ಪ ಮಕ್ಕಳ ವ್ಯವಸ್ಥೆ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಚುನಾವಣೆಗೆ ನಿಂತಿದ್ದೇನೆ ಅಂತಾ ಹೇಳಿದ್ದೀನಿ.

    KS Eshwarappa

    ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಐವರ ಸಾವು, ಹಲವರ ಸ್ಥಿತಿ ಗಂಭೀರ

    ಹಿಂದುತ್ವ ಪರ ಹೋರಾಟ ಮಾಡಿದ್ದೇ ತಪ್ಪಾ ಅಂತಾ ಅವರಿಗೆ ಹೇಳಿದ್ದೀನಿ. ಹಿಂದುಳಿದ ವರ್ಗಕ್ಕೆ ಯಾಕೆ ಟಿಕೆಟ್ ಸಿಗಲಿಲ್ಲ ಅಂತಾ ಕೇಳಿದ್ದಾರೆ ಅಂತಾ ಹೇಳಿದ್ದೇನೆ. ಅವರು ವಾಪಸ್ಸು ತೆಗೆದುಕೊಳ್ಳಿ, ನೀವು ಹೇಳಿದ ಹಾಗೇ ಆಗುತ್ತದೆ ಅಂತಾ ಹೇಳಿದ್ರು. ಆಗ ನಾನು ನಿಮ್ಮ ಬಳಿ ಬಂದು ಮಾತಾನಾಡಿದ್ರು ಪ್ರಯೋಜನ ಆಗಿಲ್ಲ ಅಂತಾ ಹೇಳಿದ್ದೇನೆ.

    ನಾನು ಈ ಹಿಂದೆ ದೆಹಲಿಗೆ ಬಂದಿದ್ದೆ, ಆಗಲೂ ಸರಿಯಾಗಿಲ್ಲ. ಈಗ ನನಗೆ ದೆಹಲಿಗೆ ನಾಳೆ ಬರಲು ತಿಳಿಸಿದ್ರು. ನಾನು ಬರ್ತೇನೆ, ಅದರೆ ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದು ಹೇಳಿದ್ದೇನೆ. ನನ್ನ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಎಂದು ಹೇಳಿದರು. ಅದಕ್ಕೆ ನಾನು ನನ್ನ ಕುಟುಂಬದೊಟ್ಟಿಗೆ ಕೂತು ತೀರ್ಮಾನ ಮಾಡಿದ್ದೇವೆ ಎಂದಿದ್ದೇನೆ. ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ. ಬ್ರಹ್ಮ ಬಂದು ಹೇಳಿದ್ರೂ ನಾನೂ ಹಿಂದೆ ಸರಿಯಲ್ಲ, ಮೋದಿಯವರೇ ಬಂದು ಹೇಳಿದ್ರೂ ನಾನೂ ಹಿಂದೆ ಸರಿಯಲ್ಲ. ಅವರಿಗೆ ನಾನು ಮನವರಿಕೆ ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts