More

    ಇಂಡಿಯಾ ಮೈತ್ರಿಕೂಟವನ್ನು ಟೀಕಿಸಿ ಜಾಹೀರಾತು; ಬಿಜೆಪಿ ವಿರುದ್ಧ ಕಿಡಿಕಾರಿದ ಮಹಿಳಾ ಸಂಘಟನೆಗಳು

    ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ನಡುವೆಯೇ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ನಾಯಕರನ್ನು ಟೀಕಿಸಿ ಬಿಜಡಪಿ ಬಿಡುಗಡೆ ಮಾಡಿದ್ದ ಜಾಹೀರಾತು ಸಖತ್​ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪ ಕೇಳಿ ಬಂದಿದೆ. , ಜಾಹೀರಾತಿನಲ್ಲಿ ಮಹಿಳೆಯನ್ನು ಕೀಳಾಗಿ ಚಿತ್ರೀಕರಿಸಲಾಗಿದೆ ಎಂದು ಮಹಿಳಾ ಸಂಘಟನೆಗಳು ಕಿಡಿಕಾರಿವೆ.

    ಜಾಹೀರಾತನ್ನು ಹಿಂಪಡೆಯುವಂತೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ, ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ, ಆಲ್‌ ಇಂಡಿಯಾ ಕೋ-ಆರ್ಡಿನೇಷನ್‌ ಆಫ್‌ ಡಬ್ಲ್ಯೂ–ಪಿಎಂಎಸ್‌–ಐಜೆಎಮ್‌–ಜಿನ ಸಂಘಟನೆಗಳು ಜಾಹೀರಾತನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರಕಟಣೆಯನ್ನು ಹೊರಡಿಸಿವೆ.

    ಇದನ್ನೂ ಓದಿ: ಬೆಂಗಳೂರು ಸೇರಿದಂತೆ ಹಲವೆಡೆ ವಿಮಾನ ಸಂಚಾರ ರದ್ದು; ವರದಿ ಕೇಳಿದ ಸರ್ಕಾರ

    ಪ್ರಧಾನಿ ಅವರು ಪ್ರತಿಪಾದಿಸಿದ ‘ನಾರಿ ಶಕ್ತಿ’ ಎಂಬ ಮನುವಾದಿ ಪರಿಕಲ್ಪನೆಯು ಈ ಜಾಹೀರಾತಿನ ಮೂಲಕ ತನ್ನ ನಿಜ ಬಣ್ಣವನ್ನು ತೋರಿಸಿದೆ. ಬಿಜೆಪಿಯ ಮಹಿಳಾ ವಿರೋಧಿ ಮುಖವನ್ನು ಬಯಲು ಮಾಡಿದೆ. ಬಿಜೆಪಿಯು ಕ್ಷಮೆಯಾಚಿಸುವುದರ ಜೊತೆಗೆ, ಜಾಹೀರಾತನ್ನು ಹಿಂತೆಗೆದುಕೊಳ್ಳಬೇಕೆಂದು ಮಹಿಳಾ ಸಂಘಟನೆಗಳು ಹೊರಡಿಸಿರುವ ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.

    ಜಾಹೀರಾತಿನಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ ಸೇರಿದಂತೆ ಇಂಡಿಯಾ ಮೈತ್ರಿಕೂಟದದ ನಾಯಕರನ್ನು ಹೋಲುವ ಪಾತ್ರಗಳಿದ್ದು, ಮಹಿಳೆಯೊಬ್ಬಳನ್ನು ವಧುವಿನ ರೀತಿ ಸಿಂಗರಿಸಿ ತೋರಿಸಲಾಗಿದೆ. ಆಕೆಯ ‘ವರ’ ಯಾರು ಎಂಬ ಬಗ್ಗೆ ಇಂಡಿಯಾ ಒಕ್ಕೂಟದ ನಾಯಕರು ಜಗಳವಾಡುವ ರೀತಿಯಲ್ಲಿ ಜಾಹೀರಾತಿನಲ್ಲಿ ತೋರಿಸಲಾಗಿದೆ. ನಾಯಕತ್ವದ ಬಗ್ಗೆ ಇಂಡಿಯಾ ಮೈತ್ರಿಕೂಟದಲ್ಲಿ ಸ್ಪಷ್ಟತೆಯಿಲ್ಲ ಎಂಬಂತೆ ಈ ಜಾಹೀರಾತನ್ನು ಚಿತ್ರೀಕರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts