More

  ರಶ್ಮಿಕಾ ಜೊತೆ ಮದುವೆ: ವಿಜಯ್ ದೇವರಕೊಂಡ ಹೇಳಿದ್ದೇನು?

  ಬೆಂಗಳೂರು: ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದುರ ಬಗ್ಗೆ ಗೊತ್ತೇ ಇದೆ. ಆದರೆ ಜೋಡಿ ಇದುವರೆಗೆ ತಾವಿಬ್ಬರೂ ಸಂಬಂಧದಲ್ಲಿ ಇದ್ದೇವೆ ಎಂದು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಕಳೆದ ಕೆಲ ದಿನಗಳಿಂದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ಆತ್ಮೀಯತೆ ಕುರಿತು ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ವಿಜಯ್ ದೇವರಕೊಂಡ ಅವರು ಸ್ಪಷ್ಟನೆ ನೀಡಿದ್ದಾರೆ.

  ಇದನ್ನೂ ಓದಿ:ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ 55 ದೇಶಗಳ 100 ಗಣ್ಯರು!

  ವಿಜಯ್‌ ದೇವರಕೊಂಡ ಮಾತನಾಡಿ ನನಗೆ ಫೆಬ್ರವರಿಯಲ್ಲಿ ಯಾವುದೇ ನಿಶ್ಚಿತಾರ್ಥ ಅಥವಾ ಮದುವೆ ಇಲ್ಲ. ಪ್ರತಿ ವರ್ಷ ಈ ಮಾಧ್ಯಮಗಳು ನನ್ನ ಮದುವೆಮಾಡಲು ಪ್ರಯತ್ನಿಸುತ್ತವೆ. ನಾನು ಪ್ರತಿ ವರ್ಷವೂ ಈ ವದಂತಿಯನ್ನು ಕೇಳುತ್ತಲೇ ಇರುತ್ತೇನೆ. ಈ ಮಾಧ್ಯಮಗಳು ನನ್ನನ್ನು ಹಿಡಿದು ಮದುವೆ ಮಾಡಲು ಪ್ರಯತ್ನಿಸುತ್ತವೆಯೇ ಎಂದು ಹೇಳಿದ್ದಾರೆ.

  ಆದರೆ ಇತ್ತೀಚಿನ ದಿನಗಳಲ್ಲಿ ವಿಜಯ್ ಮತ್ತು ರಶ್ಮಿಕಾ ಜೊತೆಯಾಗಿ ಸೀಕ್ರೆಟ್ ಟ್ರಿಪ್ ಮಾಡುತ್ತಿದ್ದಾರಂತೆ. ಆದರೂ ಈ ಬಗ್ಗೆ ಏನನ್ನೂ ಹೇಳದಿದ್ದರೂ ಅವರ ಇನ್‌ಸ್ಟಾಗ್ರಾಮ್ ನೋಡಿದರೆ ಈ ಬಗ್ಗೆ ಪ್ರೂಫ್ ಸಿಗುತ್ತಿದೆ. ಇದೀಗ ವಿಜಯ್ ಜೊತೆ ರಶ್ಮಿಕಾ ಎಂಗೇಜ್ ಮೆಂಟ್, ಮದುವೆ ಅಂತೇನೂ ಇಲ್ಲ ಅನ್ನೋದು ಸ್ಪಷ್ಟವಾಗಿದೆ.

  ಪ್ರಸ್ತುತ, ರಶ್ಮಿಕಾ ಮತ್ತು ವಿಜಯ್ ತಮ್ಮ ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. ರಶ್ಮಿಕಾ ಪ್ರಸ್ತುತ ಅನಿಮಲ್ ಸಕ್ಸಸ್ ಖುಷಿಯಲ್ಲಿದ್ದಾರೆ. ರಶ್ಮಿಕಾ ಗರ್ಲ್ ಫ್ರೆಂಡ್ ಮತ್ತು ಪುಷ್ಪಾ 2 ನಲ್ಲಿ ಬ್ಯುಸಿಯಾಗಿದ್ದರೆ. ವಿಜಯ್ ಫ್ಯಾಮಿಲಿ ಸ್ಟಾರ್‌ನಲ್ಲಿ ಬ್ಯುಸಿಯಾಗಿದ್ದಾರೆ.

  ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ ನಡೆಸುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಒಟ್ಟಿಗೆ ಓಡಾಡುತ್ತಿರುವ ಫೋಟೊಗಳು ಹಲವು ಬಾರಿ ವೈರಲ್‌ ಆಗಿದ್ದವು.

  ಡೇಟಿಂಗ್ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಉತ್ತರಿಸಿದ್ದರು. ಕಳೆದ ಕೆಲವು ದಿನಗಳಿಂದ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥದ ಬಗ್ಗೆ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಫೆಬ್ರವರಿ ಎರಡನೇ ವಾರದಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ವರದಿಯಾಗಿತ್ತು. ಈ ಮೂಲಕ ಅವರು ವದಂತಿಗೆ ಬ್ರೇಕ್ ಹಾಕಿದ್ದಾರೆ.

  ತಮಿಳುನಾಡು: ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಪ್ರಧಾನಿ ಮೋದಿ ಚಾಲನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts