More

    ಖ್ಯಾತ ನಟಿ ಮನೆಯಲ್ಲಿ 1 ಕೋಟಿ ಮೌಲ್ಯದ ಡೈಮಂಡ್​ ನೆಕ್ಲೆಸ್​ ಪತ್ತೆ!? ವಿಜಯ್​ ಬಗ್ಗೆ ಹರಿದಾಡ್ತಿದ್ದ ವದಂತಿ ನಿಜವಾಯ್ತಾ?

    ಚೆನ್ನೈ: ಇಳಯದಳಪತಿ ವಿಜಯ್​ ಕುರಿತು ಸಾಕಷ್ಟು ವದಂತಿಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಕೆಲವು ತಿಂಗಳುಗಳ ಹಿಂದಷ್ಟೇ ವಿಜಯ್​ ಮತ್ತು ಪತ್ನಿ ಸಂಗೀತ ನಡುವಿನ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವದಂತಿ ಮತ್ತೆ ಮುನ್ನೆಲೆಗೆ ಬಂದಿದೆ.

    ನಟ-ನಟಿಯರ ಡಿವೋರ್ಸ್​ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಈ ಬಗ್ಗೆ ಅನೇಕ ಪತ್ರಕರ್ತರು ತಮ್ಮ ಯೂಟ್ಯೂಬ್​ ಚಾನೆಲ್​ಗಳಲ್ಲಿ ಮಾತನಾಡುತ್ತಲೇ ಇರುತ್ತಾರೆ. ಆದರೆ, ಈ ವಿವಾದಗಳು ಆಮೇಲೆ ತಣ್ಣಗಾಗಿ ಬಿಡುತ್ತವೆ. ಅದೇ ರೀತಿಯಾಗಿ ಖ್ಯಾತ ಹಿರಿಯ ಪತ್ರಕರ್ತ ಪಾಂಡಿಯನ್​ ಎಂಬುವರು ಮಾಧ್ಯಮ ಸಂದರ್ಶನದಲ್ಲಿ ನೀಡಿರುವ ಹೇಳಿಕೆಯೊಂದು ಇದೀಗ ಭಾರಿ ವಿವಾದ ಹುಟ್ಟು ಹಾಕಿದೆ.

    ತ್ರಿಷಾ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಲೆಕ್ಕಕ್ಕೆ ಸಿಗದ ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ಅದರಲ್ಲೂ ತ್ರಿಷಾ ಮನೆಯಿಂದ ಒಂದು ಕೋಟಿ ಮೌಲ್ಯದ ವಜ್ರದ ನೆಕ್ಲೇಸ್ ಅನ್ನು ಐಟಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಈ ಬಗ್ಗೆ ತ್ರಿಷಾ ಅವರನ್ನು ವಿಚಾರಿಸಿದಾಗ ನಟ ವಿಜಯ್​ ಅವರು ಕೊಟ್ಟ ಉಡುಗೊರೆ ಇದು ಎಂದಿದ್ದಾರೆ ಎಂದು ಪಾಂಡಿಯನ್​ ತಿಳಿಸಿದ್ದಾರೆ.

    ಈ ಹಿಂದೆಯೇ ಪಾಂಡಿಯನ್​ ಈ ಹೇಳಿಕೆ ನೀಡಿದ್ದರು. ಇದೀಗ ಮತ್ತೊಮ್ಮೆ ಅದೇ ಹೇಳಿಕೆಯನ್ನು ಪುನರುಚ್ಛರಿಸಿದ್ದು ಸಿನಿಮಾ ರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ, ಪಾಂಡಿಯನ್​ ಹೇಳಿಕೆ ಎಷ್ಟರ ಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ ಆದರೆ, ಚರ್ಚೆ ಮಾತ್ರ ಜೋರಾಗಿದೆ. ಇದರ ನಡುವೆ ವಿಜಯ್​ ಅಭಿಮಾನಿಗಳು ಪಾಂಡಿಯನ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಈ ಹಿಂದೆ ವಿಕಿಪೀಡಿಯಾ ಮಾಹಿತಿಯನ್ನು ಎಡಿಟ್​ ಮಾಡಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಅದರಲ್ಲಿ ವಿಜಯ್​ ಅವರ ಪತ್ನಿ ಕಾಲಂ ಮುಂದೆ ಸಂಗೀತಾ ಅವರ ಹೆಸರನ್ನು ಬರೆಯಲಾಗಿದೆ. ಅಲ್ಲದೆ, ಬ್ರಾಕೆಟ್​ನಲ್ಲಿ 1999ರಲ್ಲಿ ಮದುವೆ, 2022ರಲ್ಲಿ ಡಿವೋರ್ಸ್​ ಅಂತಾ ಬರೆಯಲಾಗಿತ್ತು. ಅಲ್ಲದೆ, ವಿಜಯ್ ಅವರ ‘ವಾರಿಸು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮತ್ತು ಪ್ರಿಯಾ ಅಟ್ಲೀ ಅವರ ಚೊಚ್ಚಲ ಸೀಮಂತಕ್ಕೆ ವಿಜಯ್​ ಜೊತೆ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಡಿವೋರ್ಸ್​ ವದಂತಿ ಹರಿದಾಡಿತ್ತು. ಆದರೆ, ಇದೆಲ್ಲವು ಸುಳ್ಳು ಎಂದು ವಿಜಯ್​ ಆಪ್ತ ಮೂಲಗಳು ತಿಳಿಸಿದ್ದವು.

    ದಳಪತಿ ವಿಜಯ್ ಮತ್ತು ಸಂಗೀತಾ ದಂಪತಿ ವಿಚ್ಛೇದನ ನೀಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರೋ ಬೆನ್ನಲ್ಲೇ ವಿಜಯ್​ ಅವರು ನಟಿ ತ್ರಿಷಾ ಜೊತೆಯಲ್ಲಿ ನಾರ್ವೆಯಲ್ಲಿ ಕಾಣಿಸಿಕೊಂಡಿದ್ದರು. ಈ ಜೋಡಿ, ‘ಲಿಯೋ’ ಸಿನಿಮಾ ಮೂಲಕ ಮತ್ತೆ ಫೇಮಸ್​ ಆಗಿದೆ. ಲಿಯೋ ಚಿತ್ರದ ಚಿತ್ರೀಕರಣ ಮುಗಿಸಿದ ವಿಜಯ್ ಸ್ವಲ್ಪ ವಿರಾಮಕ್ಕೆಂದು ನಾರ್ವೆಗೆ ಹೋಗಿರುವುದು ತಿಳಿದಿತ್ತು. ಆದರೆ ಈಗ ಅವರು ನಾರ್ವೆಯಲ್ಲಿ ತ್ರಿಷಾ ಜೊತೆ ಕಾಣಿಸಿಕೊಂಡಿದ್ದರು. ವಿಜಯ್​ ಪತ್ನಿ ಸಂಗೀತಾಗೆ ಡಿವೋರ್ಸ್​​ ಕೊಡಲಿದ್ದಾರೆಯೇ ಅನ್ನೋ ಚರ್ಚೆಗಳು ನಡೆದಿದ್ದವು. 5 ವರ್ಷಗಳ ನಂತರ ಸಿನಿಮಾದಲ್ಲಿ ಒಂದಾಗುತ್ತಿರುವ ವಿಜಯ್ ಮತ್ತು ತ್ರಿಷಾ ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ಪ್ರಶ್ನೆ ಸಹ ಮೂಡಿತ್ತು. ಆದರೆ, ಇದೆಲ್ಲ ಕೇವಲ ವಂದತಿಯಷ್ಟೇ ಎನ್ನಲಾಗಿದೆ. ಆದರೆ, ಈ ಬಗ್ಗೆ ವಿಜಯ್​ ಸಹ ಯಾವುದೇ ಸ್ಪಷ್ಟನೆ ನೀಡಿಲ್ಲ. (ಏಜೆನ್ಸೀಸ್​)

    ಮಲಯಾಳಂ ನಟಿ ಜತೆಗಿನ ಸಂಬಂಧವೇ ನಟ ವಿಜಯ್​ ಡಿವೋರ್ಸ್​ಗೆ ಕಾರಣ? ವೈರಲ್​ ಫೋಟೋ ಅಸಲಿಯತ್ತೇನು?

    ನಟಿ ತ್ರಿಷಾ ಜೊತೆ ನಾರ್ವೆಯಲ್ಲಿ ಕಾಣಿಸಿಕೊಂಡ ದಳಪತಿ ವಿಜಯ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts