ಚೆನ್ನೈ: ಕಲಾವಿದರ ವೈಯಕ್ತಿಕ ವಿಚಾರಗಳ ಬಗ್ಗೆ ವದಂತಿಗಳು ಹರಡುವುದು ಸರ್ವೇ ಸಾಮಾನ್ಯ ಎಂಬುದು ಎಲ್ಲರಿಗು ತಿಳಿದಿರುವ ಸಂಗತಿ. ಇದೀಗ ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಅವರ ವೈವಾಹಿಕ ಜೀವನ ಕುರಿತ ಗಾಳಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾವುದು ಆ ಸುದ್ದಿ ಅಂದರೆ, ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ಡಿವೋರ್ಸ್ ಆಗಿದೆಯಂತೆ.
ವಿಕಿಪೀಡಿಯಾ ಮಾಹಿತಿಯನ್ನು ಎಡಿಟ್ ಮಾಡಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಈ ವದಂತಿಗೆ ಕಾರಣವಾಗಿದೆ. ಹರಿದಾಡುತ್ತಿರುವ ಫೋಟೋದಲ್ಲಿ ವಿಜಯ್ ಅವರ ಪತ್ನಿ ಕಾಲಂ ಮುಂದೆ ಸಂಗೀತಾ ಅವರ ಹೆಸರನ್ನು ಬರೆಯಲಾಗಿದೆ. ಅಲ್ಲದೆ, ಬ್ರಾಕೆಟ್ನಲ್ಲಿ 1999ರಲ್ಲಿ ಮದುವೆ, 2022ರಲ್ಲಿ ಡಿವೋರ್ಸ್ ಅಂತಾ ಬರೆಯಲಾಗಿದೆ.
ದಂಪತಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದು, ವಿಚ್ಛೇದನಕ್ಕೆ ಮಲಯಾಳಿ ನಟಿಯೊಂದಿಗಿನ ವಿಜಯ್ ಸಂಬಂಧವೇ ಕಾರಣ ಎಂಬ ಗಾಸಿಪ್ ಹಬ್ಬಿದೆ.
ವಿಜಯ್ ಅವರ ಹೊಸ ಚಿತ್ರ ‘ವಾರಿಸು’ ಆಡಿಯೋ ಬಿಡುಗಡೆ ಕಾರ್ಯಕ್ರಮ ಮತ್ತು ಪ್ರಿಯಾ ಅಟ್ಲೀ ಅವರ ಚೊಚ್ಚಲ ಸೀಮಂತಕ್ಕೆ ವಿಜಯ್ ಜೊತೆ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಡಿವೋರ್ಸ್ ವದಂತಿ ಹರಿದಾಡುತ್ತಿದೆ. ಆದರೆ, ಮಾಧ್ಯಮವೊಂದರ ವರದಿ ಪ್ರಕಾರ, ಇವೆಲ್ಲವೂ ಸುಳ್ಳು ಎಂದು ವಿಜಯ್ ಆಪ್ತ ಮೂಲಗಳು ತಿಳಿಸಿವೆ. ಸಂಗೀತಾ ಮತ್ತು ಅವರ ಮಕ್ಕಳು ಅಮೆರಿಕದಲ್ಲಿ ಇದ್ದುದರಿಂದ ವಿಜಯ್ ಜೊತೆ ಬಂದಿರಲಿಲ್ಲ. ಸದ್ಯದಲ್ಲೇ ಕುಟುಂಬದೊಂದಿಗೆ ಇರಲು ವಿಜಯ್ ಸಹ ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
ಏಲಕ್ಕಿ ನಾಡಿನಲ್ಲಿ ಕನ್ನಡ ಕಂಪು: ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ: ಅಚ್ಚಗನ್ನಡ ನೆಲದಲ್ಲಿ ಅಕ್ಷರ ಜಾತ್ರೆ, ಮೊಳಗಲಿದೆ ಕನ್ನಡ ಕಹಳೆ
ಬಾಲಿವುಡ್ನಲ್ಲಿ ಕನ್ನಡ ನಿರ್ದೇಶಕರು; ಹಿಂದಿಯಲ್ಲಿ ಪವನ್, ಹರಿ, ರಾಜ್ ಆ್ಯಕ್ಷನ್-ಕಟ್