ತಮಿಳುನಾಡು: ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಪ್ರಧಾನಿ ಮೋದಿ ಚಾಲನೆ

ಮೋದಿ
Published on

ಚೆನ್ನೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆರನೇ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನನ್ನು ಉದ್ಘಾಟಿಸಿದರು. ಜನವರಿ 19ರಿಂದ 31ರವರೆಗೆ ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ.

ಇದೇ ಸಂದರ್ಭದಲ್ಲಿ ಸುಮಾರು 250 ಕೋಟಿ ರೂಪಾಯಿ ಮೌಲ್ಯದ ಪ್ರಸಾರ ಕ್ಷೇತ್ರದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಹಾಗೂ ಡಿಡಿ ತಮಿಳಿನ ಲೋಗೋವನ್ನು ಸಹ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಚೆನ್ನೈಗೆ ಬಂದಿರುವ ಎಲ್ಲಾ ಕ್ರೀಡಾಪಟುಗಳು ಮತ್ತು ಕ್ರೀಡಾ ಪ್ರೇಮಿಗಳಿಗೆ ಶುಭಾಶಯ ಕೋರುತ್ತೇನೆ. ನೀವು ಒಟ್ಟಾಗಿ ಏಕ್ ಭಾರತ್ ಶ್ರೇಷ್ಠ ಭಾರತದ ನಿಜವಾದ ಮನೋಭಾವವನ್ನು ಪ್ರದರ್ಶಿಸುತ್ತಿದ್ದೀರಿ, ತಮಿಳುನಾಡು ಸುಂದರ ತಮಿಳು ಭಾಷೆ, ಸಂಸ್ಕೃತಿ ಮತ್ತು ಆಹಾರ ಪದ್ಧತಿಯು ಖಂಡಿತವಾಗಿಯೂ ಆಕರ್ಷಿಸುತ್ತದೆ ಎಂದರು.
ಖೇಲೋ ಇಂಡಿಯಾ ಗೇಮ್ಸ್, ಯೂತ್ ಗೇಮ್ಸ್, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಮತ್ತು ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ನಿಮಗೆ ಆಡಲು ಉತ್ತಮ ಅವಕಾಶ ನೀಡುತ್ತಿವೆ. ಜೊತೆಗೆ ನಿಮ್ಮ ಪ್ರತಿಭೆ ಮುಂದಿಡಲು ಉತ್ತಮ ಅವಕಾಶ ನೀಡುತ್ತಿವೆ. ಖೇಲೋ ಇಂಡಿಯಾ ಯೂತ್ ಗೇಮ್ಸ್‌ ಗೆ ಮ್ಯಾಸ್ಕಾಟ್ ಆಗಿರುವುದು ನನಗೆ ಸಂತೋಷವಾಗಿದೆ. ವೇಲು ನಾಚಿಯಾರ್ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಮಂತ್ರಿ ಅಡಿಗಲ್ಲು ಹಾಕಿದ ಪ್ರಸಾರ ಕ್ಷೇತ್ರದ ಯೋಜನೆಗಳು ಡಿಡಿ ತಮಿಳು ಎಂದು ಪರಿಷ್ಕರಿಸಿದ ಡಿಡಿ ಪೊಧಿಗೈ ಚಾನೆಲ್ ಅನ್ನು ಪ್ರಾರಂಭಿಸುವುದನ್ನು ಒಳಗೊಂಡಿದೆ.

ಎಂಟು ರಾಜ್ಯಗಳಲ್ಲಿ 12 ಆಕಾಶವಾಣಿ ಎಫ್‌ಎಂ ಯೋಜನೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 4 ಡಿಡಿ ಟ್ರಾನ್ಸ್‌ಮಿಟರ್‌ಗಳು. ಜೊತೆಗೆ 12 ರಾಜ್ಯಗಳಲ್ಲಿ 26 ಹೊಸ ಎಫ್‌ಎಂ ಟ್ರಾನ್ಸ್‌ ಮೀಟರ್ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net