More

    ರಾಮಜನ್ಮಭೂಮಿ ತೀರ್ಪು: ರಾಮಲಲ್ಲಾ ಪ್ರತಿಷ್ಠಾಪನೆ ಸಭಾರಂಭಕ್ಕೆ ನ್ಯಾಯಮೂರ್ತಿಗಳಿಗೆ ಅಹ್ವಾನ

    ನವದೆಹಲಿ: ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ಅಯೋಧ್ಯಾ ರಾಮಮಂದಿರದ ರಾಮಲಲ್ಲಾ ವಿಗ್ರಹದ ಮುಖವನ್ನು ಶುಕ್ರವಾರ ಅನಾವರಣ ಮಾಡಲಾಗಿದೆ. ಸೋಮವಾರ ಪ್ರತಿಷ್ಠಾಪನೆಗೊಳ್ಳಲಿರುವ ಸೌಮ್ಯ ಹಾಗೂ ಮಂದಸ್ಮಿತ ವದನದ ಬಾಲರಾಮನ ವಿಗ್ರಹ ಕಣ್ಮನ ಸೆಳೆಯುತ್ತಿದೆ. ಈ ವಿಗ್ರಹವು ಶ್ರೀ ರಾಮ ಐದು ವರ್ಷದ ಮಗುವಾಗಿದ್ದಾಗಿನ ನಿಲುವಿನಲ್ಲಿದೆ.

    ಇದನ್ನೂ ಓದಿ:ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ; ಮಹಾರಾಷ್ಟ್ರ, ಪುದುಚೇರಿಯಲ್ಲಿ ರಜೆ ಘೋಷಣೆ

    ಅಯೋಧ್ಯೆಯ ರಾಮ ಮಂದಿರ ವಿವಾದಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್​ನ ಸಂವಿಧಾನಿಕ ಪೀಠದ ಐವರು ನ್ಯಾಯಾಧೀಶರಿಗೆ ಜನವರಿ 22ರಂದು ನಡೆಯುವ ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

    2019ರ ನವೆಂಬರ್ 9 ರಂದು ಐತಿಹಾಸಿಕ ತೀರ್ಪು ನೀಡಿದ ಮುಖ್ಯನ್ಯಾಯಮೂರ್ತಿಯಾಗಿದ್ದ ಹಾಲಿ ರಾಜ್ಯಸಭಾ ಸದಸ್ಯ ರಂಜನ್​ ಗೊಗೊಯ್​, ನ್ಯಾ. ಎಸ್​.ಎ. ಬೊಬ್ಬೆ, ನ್ಯಾ.ಅಶೋಕ್​ ಭೂಷನ್​ ಹಾಗೂ ಸಿಜೆಐ ಡಿವೈ ಚಂದ್ರಚೂಡ್, ನ್ಯಾ. ಎಸ್ ಅಬ್ದುಲ್ ನಜೀರ್ ಅವರನ್ನು ಟ್ರಸ್ಟ್​ ಆಹ್ವಾನಿಸಲಾಗಿದೆ.

    ಆಹ್ವಾನಿತರಲ್ಲಿ ಮಾಜಿ ಮುಖ್ಯ ನ್ಯಾಯಾಧೀಶರು, ನ್ಯಾಯಾಧೀಶರು, ಉನ್ನತ ವಕೀಲರು ಒಳಗೊಂಡು 50 ನ್ಯಾಯ ಶಾಸ್ತ್ರಜ್ಞರನ್ನು ಆಹ್ವಾನಿಸಲಾಗಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಮಾಜಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಕೂಡ ಆಹ್ವಾನಿತರಲ್ಲಿ ಸೇರಿದ್ದಾರೆ.
    ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ರಚಿಸಿದ ಟ್ರಸ್ಟ್​ ರಚಿಸಿದ ಟ್ರಸ್ಟ್​ಗೆ ಈ ತೀರ್ಪು ಪ್ರೇರಣೆಯಾಯಿತು.

    ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕರ್ನಾಟಕದಲ್ಲೂ ರಜೆ ಘೋಷಣೆಗೆ ಬಿಜೆಪಿ, ವಕೀಲರ ಸಂಘ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts