ನಟ ವಿಜಯ್ ದೇವರಕೊಂಡ ತಮ್ಮ ಟ್ವಿಟರ್‌ನಲ್ಲಿ, ''ನನ್ನ ಇಲ್ಲಿಯವರೆಗಿನ ಪ್ರಯಾಣ ಮತ್ತು ನಾನು ಮಾಡಿದ ಹಣದಲ್ಲಿ ಸ್ವಲ್ಪ ನನ್ನ ಅಭಿಮಾನಿಗಳು ಮತ್ತು ಎಲ್ಲರ ಜೊತೆ ಈಗ ಹಂಚಿಕೊಳ್ಳುತ್ತಿದ್ದೇನೆ. 1 ಮಿಲಿಯನ್ ಕೊಡುಗೆ ನೀಡಲಿದ್ದೇನೆ. ಇದಕ್ಕೆ, ನೀವು ಒಂದು ಸಾಂಟಾ ಆಗಿ, ಯಾರೋ ಒಬ್ಬರಿಗೆ ನಾನು 10,000 ರೂ. ಉಡುಗೊರೆಯಾಗಿ ನೀಡಲು ಕಾರಣ ಹೇಳಿ #VijayDevarakonda #DeveraSanta2021 ಎಂದು ಬರೆದು ನನಗೆ ತಿಳಿಸಿ. ಹಾಗೆ, ಬಂದ ಹೆಸರುಗಳಲ್ಲಿ 100 ಹೆಸರುಗಳನ್ನು ಆಯ್ಕೆ ಮಾಡಿ ಜನವರಿ 1 ರಂದು ಪ್ರಕಟಿಸಿ ಆ ವ್ಯಕ್ತಿಗಳಿಗೆ ನಾನು ಒಬ್ಬೊಬ್ಬರಿಗೆ ತಲಾ 10,000 ರೂ. ಕೊಡುತ್ತೇನೆ.'' ಎಂದು ಒಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.