ವಿಚ್ಛೇದನದ ಬಳಿಕ ಸಮಂತಾ ದಿಲ್ ಖುಷ್? ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಹಾಟ್ ನಟಿ!

Published on
ಗೋವಾ: ಪ್ರಸ್ತುತ 'ಪುಷ್ಪಾ-ದಿ ರೈಸ್' ಸಿನಿಮಾದ ಐಟಂ ಹಾಡಿನ ಯಶಸ್ಸನಲ್ಲಿ ತೇಲುತ್ತಿರುವ ನಟಿ ಸಮಂತಾ, ಇದೀಗ ಗೋವಾದಲ್ಲಿ 2021ರ ಕೊನೆಯ ಪಾರ್ಟಿ ಎಂಜಾಯ್ ಮಾಡುತ್ತಾ 2022ರನ್ನು ಸಂತೋಷದಿಂದ ಸ್ವಾಗತಿಸಲು ಸಜ್ಜಾಗಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್ - 2' ನಟಿ ಒಂದಿಷ್ಟು ಫೋಟೋಗಳನ್ನು ಸಾಮಾಜಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ಗೋವಾ ರಜೆಯ ದಿನಗಳನ್ನು ಹೇಗೆ ಎಂಜಾಯ್ ಮಾಡುತ್ತಿದ್ದಾರೆ ಅಂತ ತಮ್ಮ ಇನ್‌ಸ್ಟಾ ಕಥೆಗಳಲ್ಲಿ ಹೇಳಿಕೊಂಡಿದ್ದಾರೆ. ನಟಿ ತನ್ನ ಸ್ನೇಹಿತೆಯರಾದ ಡಿಸೈನರ್ ಶಿಲ್ಪಾ ರೆಡ್ಡಿ ಮತ್ತು ವಾಸುಕಿ ಸುಂಕವಲ್ಲಿ ಅವರೊಂದಿಗೆ ಗೋವಾಗೆ ಹೋಗಿದ್ದಾರೆ. 
ಸಮಂತಾ ಹಂಚಿಕೊಂಡ ಚಿತ್ರವೊಂದರಲ್ಲಿ, ಅವರು ಮುದ್ರಿತ ಮೊನೊಕಿನಿ ಸ್ಟೈಲ್​ನ ಬಿಕಿನ ಧರಿಸಿರುವುದನ್ನು ಕಾಣಬಹುದು. ಆ ಚಿತ್ರದಲ್ಲಿ ತಮ್ಮ ನಗು ಹೇಳುತ್ತೆ ಅವರು ಎಷ್ಟು ಸಂತೋಷವಾಗಿದ್ದಾರೆ ಅಂತ. ಇನ್ನೊಂದು ಚಿತ್ರದಲ್ಲಿ, ನಟಿ ತನ್ನ ಸ್ನೇಹಿತರೊಂದಿಗೆ ಬೀಚ್‌ನಲ್ಲಿ ಆಡುತ್ತಿರುವುದು ಕಾಣಿಸಿಕೊಂಡಿದೆ. ಸದ್ಯ, ನಟಿಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೆಲವರಂತೂ, ನಟಿ ವಿಚ್ಛೇದನದ ಬಳಿಕ ಜೀವನದಲ್ಲಿ ತುಂಬಾ ಖುಷಿಯಾಗಿದ್ದಾರೆ ಎಂದು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net