ಗೋವಾ: ಅವರು ಸೌತ್ ಇಂಡಿಯಾದ ಐಕಾನ್ ಮತ್ತು ಸ್ಟೈಲಿಶ್ ಸ್ಟಾರ್. ಅವರನ್ನು ಭೇಟಿಯಾಗಲು ಅಭಿಮಾನಿಗಳು, ಸಾಮಾನ್ಯ ಜನರು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಆದರೆ, ಅದೊಂದು ದಿನ ಅವರು ಮಾತ್ರ ಸಾಮಾನ್ಯನಂತೆ ಬೀದಿಗಳಲ್ಲಿ ಅಲೆದಾಡುತ್ತಿದ್ದರು. ಅಂದಹಾಗೆ, ಅವರು ಯಾರೋ ಅಲ್ಲ, ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್. ಹೌದು, ಡಿ.17 ರಂದು ಬಿಡುಗಡೆಯಾದ ನಟ ಅಲ್ಲು ಅರ್ಜುನ್ ಅವರ 'ಪುಷ್ಪ' ಸಿನಿಮಾ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ರಲೀಸ್ ನಂತರ ಮೂರೇ ದಿನಗಳಲ್ಲಿ ಬರೋಬ್ಬರಿ 131 ಕೋಟಿ ಕೂಡ ಗಳಿಸಿದೆ. ಅಂತಹ ಸಿನಿಮಾದ ಶೂಟಿಂಗ್ ವೇಳೆ ವೈನ್ ಗೋಸ್ಕರ ಅಲ್ಲು ಗೋವಾ ಬೀದಿಗಳಲ್ಲಿ ಸಾಮಾನ್ಯನಂತೆ ಅಲೆದಾಡಿರುವ ವಿಡಿಯೋಗಳು ಕೆಲ ತಿಂಗಳುಗಳ ಹಿಂದೆ ಹರಿದಾಡುತ್ತಿದ್ದವು.