More

    ಹೈದರಾಬಾದ್ ಪೊಲೀಸರಿಂದ ನಟ ಸಾಯಿ ಧರಂ ತೇಜ್‌ಗೆ ಲೀಗಲ್ ನೋಟಿಸ್! ಕಾರಣ?

    ಹೈದರಾಬಾದ್: ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನ ದುರ್ಗಂ ಚೆರುವು ಎಂಬಲ್ಲಿ ನಡೆದ ಬೈಕ್ ಅಪಘಾತಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ಸಾಯಿ ಧರಮ್ ತೇಜ್ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಸೋಮವಾರ ಸೈಬರಾಬಾದ್‌ನ 2021ರ ಅಪರಾಧ ವರದಿಯನ್ನು ಬಹಿರಂಗಪಡಿಸುವಾಗ ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ, ಸಿಆರ್‌ಪಿಸಿಯ ಸೆಕ್ಷನ್ 912 ರ ಅಡಿಯಲ್ಲಿ ಬೈಕ್ ಅಪಘಾತ ಕುರಿತು ಪ್ರಕರಣವನ್ನು ದಾಖಲಿಸಲಾಗಿದ್ದು, ನಟನಿಗೆ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ವಿಮೆ ಮತ್ತು ಮಾಲಿನ್ಯದ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ನಟ ತನ್ನ ದಾಖಲೆಗಳನ್ನು ಸಲ್ಲಿಸದ ಕಾರಣ, ಇದು ಅವರನ್ನು ತೊಂದರೆಗೆ ಸಿಲುಕಿಸಿದೆ ಎನ್ನಲಾಗಿದೆ

    ಹೈದರಾಬಾದ್ ಪೊಲೀಸರಿಂದ ನಟ ಸಾಯಿ ಧರಂ ತೇಜ್‌ಗೆ ಲೀಗಲ್ ನೋಟಿಸ್! ಕಾರಣ?

    ಇಲ್ಲಿಯವರೆಗೆ ನಟನಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ನಟನ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ‘ಸುಪ್ರೀಮ್‘, ‘ಸುಬ್ರಮಣ್ಯಂ ಫಾರ್ ಸೇಲ್‘, ‘ವಿನ್ನರ್ಮತ್ತು ಇತರ ಚಿತ್ರಗಳಲ್ಲಿ ನಟಿಸಿರುವ ಸಾಯಿ ಧರಮ್ ತೇಜ್ ಸೆಪ್ಟೆಂಬರ್‌ನಲ್ಲಿ ಅಪಘಾತಕ್ಕೀಡಾಗಿದ್ದರು. ಆಗ ನಟ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಅಪಘಾತದಿಂದ ಉಂಟಾದ ಗಾಯಗಳಿಂದ ಚೇತರಿಸಿಕೊಳ್ಳಲು ಅವರಿಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯ ಬೇಕಾಯಿತು. ಆ ಸಮಯದಲ್ಲಿ, ನಟ ಕುಡಿದು ಮತ್ತು ಅತಿ ವೇಗವಾಗಿ ಬೈಕ್ ಚಾಲಾಸಿದರು ಎಂಬ ಆರೋಪಗಳು ಕೇಳಿಬಂದಿದ್ದವು

    ಡಿಂಪಲ್​ ಕ್ವೀನ್​ಗೆ ಜ್ವರ-ಶೀತ; ಊಟ, ನಿದ್ದೆ ಬಿಟ್ಟ ರಚಿತಾ ರಾಮ್?

    ಬಾಲಿವುಡ್​ಗೂ ಸಾಯಿ ಪಲ್ಲವಿ ಎಂಟ್ರಿ; ಡಿ-ಗ್ಲಾಮರಸ್ ನಟಿಯ ಷರತ್ತುಗಳು ಏನು?

    ವಿಚ್ಛೇದನದ ಬಳಿಕ ಸಮಂತಾ ದಿಲ್ ಖುಷ್? ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಹಾಟ್ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts