ಲಖನೌ: ಕಳ್ಳತನವಾಗಿದೆ ಎಂದು ತಿಳಿದ ತಕ್ಷಣ ಪೊಲೀಸರಿಗೆ ಕರೆ ಮಾಡಿ ಅಥವಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುತ್ತೇವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Video Viral) ಆಗುತ್ತಿದ್ದು, ವ್ಯಕ್ತಿಯೊಬ್ಬರು ನೀಡಿರುವ ದೂರು ಸ್ವಲ್ಪ ವಿಭಿನ್ನವಾಗಿದೆ. ಈ ಘಟನೆಯು ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ ಎನ್ನಲಾಗಿದೆ.
ಇದನ್ನು ಓದಿ: ಪಟಾಕಿ ವಿಚಾರಕ್ಕೆ ಜಗಳ.. ಕೋಪಗೊಂಡು ಬಾಲ್ಕನಿಯಿಂದ ಸಿಲಿಂಡರ್ ಎಸೆದ ಭೂಪ; ಮುಂದೇನಾಯ್ತು ನೀವೇ ನೋಡಿ | Viral Video
ಈ ವಿಡಿಯೋದಲ್ಲಿ ಪೊಲೀಸರು ದೂರು ದಾಖಲಿಸಿದ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಅವರು ಮೊದಲು ಆ ವ್ಯಕ್ತಿಯ ಹೆಸರನ್ನು ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಆತ ವಿಜಯ್ ವರ್ಮಾ ಎಂದು ಹೇಳುತ್ತಾನೆ ಮತ್ತು ಸಂಪೂರ್ಣ ವಿವರವನ್ನು ವಿವರಿಸುವುದನ್ನು ನೋಡಬಹುದಾಗಿದೆ. ಆಲೂಗೆಡ್ಡೆ ಕಾಣೆಯಾಗಿದೆ ಎಂದು ಆ ವ್ಯಕ್ತಿ ಪೊಲೀಸರಿಗೆ ಹೇಳುತ್ತಾನೆ.
ಇದನ್ನು ಕೇಳಿದ ಪೊಲೀಸರು ಎಷ್ಟು ಆಲೂಗೆಡ್ಡೆ ಕಳ್ಳತನವಾಗಿದೆ ಎಂದು ಆಲೂಗೆಡ್ಡೆ ಪ್ರಮಾಣವನ್ನು ಕೇಳುತ್ತಾರೆ. ಅದಕ್ಕೆ ಆ ವ್ಯಕ್ತಿ 250-300 ಗ್ರಾಂ ಆಲೂಗಡ್ಡೆ ಕಳ್ಳತನವಾಗಿದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪೋಲೀಸರು ನೀವು ಕುಡಿದಿದ್ದೀರಾ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರವಾಗಿ ವಿಜಯ್, ಹೌದು ನಾನು ಕುಡಿದಿದ್ದೇವೆ. ದಿನವಿಡೀ ಕಷ್ಟಪಟ್ಟು ದುಡಿದು ನಂತರ ಕುಡಿಯುತ್ತೇವೆ ಎಂದು ಹೇಳುತ್ತಾನೆ.
हरदोई, यूपी के विजय वर्मा ने ढाई सौ ग्राम आलू चोरी होने पर पुलिस बुला ली।
पुलिस ने पूछा- नशा करते हो?
विजय बोला- ‘नशा है, थोड़ा बहुत है, मेहनत-मजदूरी करते हैं और पी लेते हैं’ pic.twitter.com/DEdHu4dg9y
— Sachin Gupta (@SachinGuptaUP) November 1, 2024
ಆ ವ್ಯಕ್ತಿ ಮತ್ತು ಪೊಲೀಸರ ನಡುವಿನ ಸಂಭಾಷಣೆಯ 57 ಸೆಕೆಂಡಗಳ ಈ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ ಮತ್ತು 2 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ.
ಆಲೂಗೆಡ್ಡೆ ಕದ್ದಿದ್ದಾರೆ ಆದರೆ ವಿಜಯ್ ಅವರ ಪ್ರಾಮಾಣಿಕತೆ ಮತ್ತು ಆಸಕ್ತಿದಾಯಕ ಶೈಲಿ ಪೊಲೀಸರಿಗೆ ಸ್ಮರಣೀಯವಾಗಬೇಕು, ಎಷ್ಟೊಂದು ಮೇಧಾವಿಗಳಿದ್ದಾರೆ, ಪೊಲೀಸರ ಇಂತಹ ತ್ವರಿತ ಕ್ರಮದಿಂದ ಜನರಲ್ಲಿ ಆತ್ಮವಿಶ್ವಾಸ ಕ್ರಮೇಣ ಹೆಚ್ಚುತ್ತದೆ, ಕುಡಿದ ಅಮಲಿನಲ್ಲಿ ಪೊಲೀಸರಿಗೆ ಏಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)
ದೀಪಾವಳಿ ವಿಶೇಷ ಸಂಭ್ರಮಾಚರಣೆ; ವ್ಯಕ್ತಿಯೊಬ್ಬರ Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..