

ದೀಪಾವಳಿ ಹಬ್ಬವನ್ನು ಒಬ್ಬೊಬ್ಬರು ಒಂದೊಂದು ರೀತಿ ಸಂಭ್ರಮಿಸುತ್ತಿದ್ದಾರೆ. ಮನೆಯಲ್ಲಿ ದೀಪವನ್ನು ಬೆಳಗಿಸುವ ಮೂಲಕ, ಪಟಾಕಿ ಸಿಡಿಸುವ ಮೂಲಕ, ಮನೆಯಲ್ಲಿ ಸಿಹಿ ತಯಾರಿಸಿ ಎಲ್ಲರಿಗೂ ನೀಡುವ ಮೂಲಕ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ( Viral Video) ಆಗುತ್ತಿದ್ದು ವಿಶೇಷವಾಗಿ ಬೆಳಕಿನ ಹಬ್ಬವನ್ನು ಆಚರಿಸುತ್ತಿರುವುದು ಇದರಿಂದ ಅರ್ಥವಾಗುತ್ತದೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಹೀಂದ್ರ ಥಾರ್ ವಾಹವನ್ನು ಲೈಟ್ಗಳ ಮೂಲಕ ಅಲಂಕರಿಸಿರುವುದನ್ನು ಮತ್ತು ರಸ್ತೆಯಲ್ಲಿ ಚಲಾಯಿಸುತ್ತಿರುವುದನ್ನು ನೋಡಬಹುದು. ಅದನ್ನು ನೋಡಿದ ಜನರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿಯುತ್ತಿರುವುದನ್ನು ಕಾಣಬಹುದು.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಒಂದು ದಿನದಲ್ಲಿ 45 ಲಕ್ಷ ಮಂದಿ ವೀಕ್ಷಿಸಿದ್ದಾರೆ. 2 ಲಕ್ಷ 48 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಹಲವರು ಪ್ರತಿಕ್ರಿಯಿಸಿದ್ದಾರೆ. ಅನನ್ಯವಾಗಿದೆ, ಸುಂದರವಾಗಿ ಕಾಣುತ್ತಿದೆ, ಇದನ್ನು ನೋಡಿದ ನಂತರ ಹೆದ್ದಾರಿಯಲ್ಲಿರುವ ಧಾಬಾ ನೆನಪಾಗುತ್ತಿದೆ, ಮಹೀಂದ್ರಾ ದೀಪಾವಳಿ ಆವೃತ್ತಿ, ನೀವು ಮದುವೆಯ ಬುಕಿಂಗ್ ತೆಗೆದುಕೊಳ್ಳುತ್ತೀರಾ ಎಂದು ಕಾಮೆಂಟ್ ಮಾಡಿದ್ದಾರೆ.