ಬೆಳಕಿನ ಹಬ್ಬ ದೀಪಾವಳಿ ಎಂದರೆ ಎಲ್ಲರಿಗೂ ಸಂಭ್ರಮ. ಅದರಲ್ಲೂ ಮಕ್ಕಳಿಗಂತೂ ಹೇಳುವುದೆ ಬೇಡ, ಪಟಾಕಿ ಸಿಡಿಸುವ ಖುಷಿ. ಜನರು ತಮ್ಮ ಸಂತೋಷದ ಜತೆಗೆ ಇತರರ ಸುರಕ್ಷತೆಯನ್ನು ನೋಡಿಕೊಳ್ಳಬೇಕು. ಕೆಲವೊಮ್ಮೆ ಜನರು ಮಿತಿಮೀರಿ ನಡೆದುಕೊಳ್ಳುತ್ತಾರೆ. ಈ ಹಬ್ಬ ಅನೇಕ ಕಹಿ ಘಟನೆಗೂ ಕಾರಣವಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ.
ಇದನ್ನು ಓದಿ: ವಡಾಪಾವ್ ತಿಂದು ವಾವ್.. ಎಂದ ಕೊರಿಯನ್ ಹುಡುಗಿ; Viral Video ನೋಡಿ ಹಿಗ್ಗಿದ ನೆಟ್ಟಿಗರು
ವೈರಲ್ ವಿಡಿಯೋದಲ್ಲಿ ನೆಲದ ಮೇಲೆ ಸಿಲಿಂಡರ್ ಇದೆ, ಅದರ ಸುತ್ತ ಜನರು ಜಗಳವಾಡುತ್ತಿರುವುದನ್ನು ಕಾಣಬಹುದು. ಅದನ್ನು ನೋಡುತ್ತಾ ಸುತ್ತಲು ಜನರು ನಿಂತಿರುವುದನ್ನು ನೋಡಬಹುದು. ಅಲ್ಲಿರುವ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಅಕ್ಕಪಕ್ಕದ ಮನೆಯವರ ನಡುವೆ ನಡೆದ ಈ ಘಟನೆಗೆ ಪಟಾಕಿ ಸಿಡಿಸುವುದೇ ಕಾರಣ ಎನ್ನಲಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿಯು ಹೆಚ್ಚು ಪಟಾಕಿಗಳನ್ನು ಸಿಡಿಸಿದಾಗ ನೆರೆ ಮನೆಯ ವ್ಯಕ್ತಿಯೊಬ್ಬರು ಕೋಪಗೊಂಡು ಗ್ಯಾಸ್ ಸಿಲಿಂಡರ್ ಅನ್ನು ಮೊದಲ ಮಹಡಿಯ ಮನೆಯ ಬಾಲ್ಕನಿಯಿಂದ ಎಸೆದಿದ್ದಾರೆ ಎನ್ನಳಲಾಗಿದೆ. ಇದನ್ನು ನೋಡಿದ ಸುತ್ತಲಿನ ಜನರು ಗುಂಪು ಸೇರಿದ್ದಾರೆ.
Kalesh b/w Two Neighbours over One was bursting excessive crackers and other got irritated, so they threw Gas Cylinder from their balcony (1st) Floor and then the whole crowd gathered.
pic.twitter.com/oVWfGgbmhZ— Ghar Ke Kalesh (@gharkekalesh) November 1, 2024
ಸುಮಾರು 27 ಸೆಕೆಂಡುಗಳ ಈ ವಿಡಿಯೋವನ್ನು 6.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 3.5 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ವೀಡಿಯೊ ಮಾಡಿದ ವ್ಯಕ್ತಿಗೆ ಸಿಲಿಂಡರ್ ಅನ್ನು ಸುಡುವ ಪರಿಣಾಮಗಳು ಏನಾಗಬಹುದು ಎಂದು ತಿಳಿದಿತ್ತು ಹಾಗಾಗಿ ಕ್ಯಾಮರಾ ಹಿಡಿದು ಸೆರೆ ಹಿಡಿಯಲು ತಯಾರಾಗಿದ್ದಾರೆ, ಇತರರಿಗೆ ಅವರು ಏನು ತೊಂದರೆ ಮಾಡುತ್ತಾರೆಂದು ಜನರು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ, ದೀಪಾವಳಿಯು ಇತರ ದಿನಗಳಂತೆಯೇ ಇದೆ, ಇದಕ್ಕಿಂತ ಹೆಚ್ಚು ಮೂರ್ಖತನವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಮಧ್ಯರಾತ್ರಿ ಮನೆಗೆ ಬಂದ ಅತಿಥಿ; ಸಿಂಹದ ಎಂಟ್ರಿ Video ನೋಡಿ ನೆಟ್ಟಿಗರು ಶಾಕ್ | Viral Video