ಕಾಡುಪ್ರಾಣಿಗಳು ನಮ್ಮೆದುರು ಬಂದರೆ ಸಾಕು ಪ್ರಜ್ಞೆ ಕಳೆದುಕೊಳ್ಳತ್ತೇವೆ ಅಥವಾ ಕಿರುಚಾಡುತ್ತಾ ಓಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯರಾತ್ರಿಯಲ್ಲಿ ಸಿಂಹವೊಂದು ಮನೆಯೊಳಗೆ ಪ್ರತ್ಯಕ್ಷವಾದರೆ ಹೇಗೆ ಒಮ್ಮೆ ಆಲೋಚಿಸಿ. ಸದ್ಯ ಈ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ಇದನ್ನು ಓದಿ: ವಡಾಪಾವ್ ತಿಂದು ವಾವ್.. ಎಂದ ಕೊರಿಯನ್ ಹುಡುಗಿ; Viral Video ನೋಡಿ ಹಿಗ್ಗಿದ ನೆಟ್ಟಿಗರು
ವೈರಲ್ ವಿಡಿಯೋದಲ್ಲಿ ಮೆಟ್ಟಿಲುಗಳ ಮೇಲೆ ನಿಂತಿರುವ ವ್ಯಕ್ತಿಯೊಬ್ಬರು ಸಿಂಹವೊಂದು ಮೆಟ್ಟಿಲು ಹತ್ತುತ್ತಿರುವುದನ್ನು ನೋಡಿದ್ದಾರೆ. ನಂತರ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಒಂದೇ ಮನೆಯಲ್ಲಿ ಎರಡು ಸಿಂಹಗಳನ್ನು ಕಂಡರೆ ಯಾರಿಗಾದರೂ ಭಯವಾಗಬಹುದು. ಆದರೆ ಆ ವ್ಯಕ್ತಿ ತುಂಬಾ ಆರಾಮವಾಗಿ ಮೆಟ್ಟಿಲುಗಳ ಮೇಲೆ ನಿಂತಿರುವ ಸಿಂಹದ ಕಡೆಗೆ ಹೋಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ವ್ಯಕ್ತಿಯು ಸಿಂಹದ ಬಳಿಗೆ ಬಂದಾಗ ಸಿಂಹವು ಅವನ ಮೇಲೆ ಆಕ್ರಮಣ ಮಾಡುವ ಬದಲು ಆರಾಮಾಗಿ ವರ್ತಿಸುವುದನ್ನು ನೋಡಬಹುದು.
One of my worst horrifying nightmares😭😢 pic.twitter.com/UTgHog7iy9
— Nature is Amazing ☘️ (@AMAZlNGNATURE) October 29, 2024
ಇದು ನನಗೆ ಭಯಾನಕ ಕನಸುಗಳಲ್ಲಿ ಒಂದಾಗಿದೆ ಎಂಬ ಶೀರ್ಷಿಕೆಯಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ, ಸುಮಾರು 27 ಸೆಕೆಂಡ್ಗಳ ಈ ವಿಡಿಯೋವನ್ನು ಇದುವರೆಗೂ 2 ಕೋಟಿ 97 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 3 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.
ಅದು ಸಾಕುಪ್ರಾಣಿಯೇ ಅಥವಾ ನಿಜವಾಗಿಯೂ ಕಾಡು ಸಿಂಹವೇ, ದೊಡ್ಡ ಹುಲಿ ನನ್ನ ಮನೆಗೆ ಪ್ರವೇಶಿಸಿದೆ ಮತ್ತು ನಾನು ಅದನ್ನು ಕೋಣೆಯಲ್ಲಿ ಬೀಗ ಹಾಕಿದ್ದೇನೆ ಎಂದು ನಾನು ಪದೇ ಪದೆ ಕನಸು ಕಾಣುತ್ತೇನೆ, ಇದು ಯಾವ ರೀತಿಯ ಕನಸು, ನಿಜವಾಗಿಯೂ ಸಾಕುಪ್ರಾಣಿಯಾಗಿಲ್ಲದಿದ್ದರೆ ನೀವು ದೇವರನ್ನು ನೆನಪಿಸಿಕೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಅಪಾಯಕಾರಿ ಸ್ಟಂಟ್; Viral Video ನೋಡಿ ನೆಟ್ಟಿಗರು ಕಿಡಿ