

ಮುಂಬೈ: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಹಾಗೂ ತಮ್ಮ ಪಾತ್ರಗಳಿಂದಲೇ ಗಮನ ಸೆಳೆದ ಕಲಾವಿದರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಸಿನಿಮಾ ಅಂದರೆ ಅಲ್ಲೊಂದು ಐಟಂ ಡಾನ್ಸ್ ಇರಲೇಬೇಕು ಅನ್ನುವ ಮಾತಿದೆ. ಸಿನಿಮಾ ನಾಯಕಿಯರು ಮತ್ತು ಐಟಂ ಡ್ಯಾನ್ಸರ್ಗಳು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಾರೆ. ಸ್ಟಾರ್ ಹೀರೋಗಳಿಗೆ ಸರಿಸಮನಾದ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ಸ್ಟಾರ್ ನಟಿಯರೇ ಐಟಂ ಡಾನ್ಸ್ಗಳನ್ನು ಮಾಡುತ್ತಿದ್ದಾರೆ. ಆದರೆ, ಈ ಹಿಂದೆ ಆಗಿರಲಿಲ್ಲ. ಐಟಂ ಡಾನ್ಸ್ಗೆ ಅಂಥ ಕೆಲ ನಟಿಯರು ಇರುತ್ತಿದ್ದರು. ಉದಾಹರಣೆಗೆ ಡಿಸ್ಕೋ ಶಾಂತಿ, ಅನುರಾಧ, ಜ್ಯೋತಿಲಕ್ಷ್ಮೀ, ಸಿಲ್ಕ್ ಸ್ಮಿತಾ ಹಾಗೂ ಜಯಮಾಲಿನಿಯಂತಹ ಕಲಾವಿದರು ನಟನೆಗಿಂತ ಹೆಚ್ಚಾಗಿ ಐಟಂ ಡಾನ್ಸ್ಗಳಲ್ಲೇ ಕಾಣಿಸಿಕೊಳ್ಳುತ್ತಿದ್ದರು.
90ರ ದಶಕದಲ್ಲಿ ಹೆಚ್ಚು ಸದ್ದು ಮಾಡಿದ ಐಟಂ ಡಾನ್ಸರ್ ಅಂದರೆ ಅದು ಜಯಮಾಲಿನಿ ( Jayamalini ). ಕನ್ನಡ, ತಮಿಳು, ತೆಲುಗು ಹಿಂದಿ ಮತ್ತು ಮಲಯಾಳಂ ಭಾಷೆಗಳ ಎಲ್ಲ ಸ್ಟಾರ್ ನಟರ ಸಿನಿಮಾಗಳಲ್ಲಿ ಜಯಮಾಲಿನಿ ನಟಿಸಿದ್ದಾರೆ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಹಾಟ್ ಲುಕ್ನಿಂದಲೇ ಪಡ್ಡೆಹುಡುಗರ ನಿದ್ದೆಗೆಡೆಸಿದ್ದರು. ಆ ಕಾಲದಲ್ಲೇ ಐಟಂ ಡಾನ್ಸ್ನಲ್ಲಿ ಅರೆಬರೆ ಬಟ್ಟೆ ಉಟ್ಟು, ಮೈಚಳಿ ಬಿಟ್ಟು ಸೊಂಟ ಬಳುಕಿಸುತ್ತಿದ್ದರು. ಇವರ ಐಟಂ ಡಾನ್ಸ್ ನೋಡಲೆಂದೇ ಅನೇಕರು ಸಿನಿಮಾಗೆ ಹೋಗುತ್ತಿದ್ದರು.
ಜಯಮಾಲಿನಿ ಅವರು ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗುರು ಶಿಷ್ಯರು, ಬಂಗಾರದ ಗುಡಿ, ಬದ್ದಿ ಬಂಗಾರಮ್ಮ, ಗಾಯತ್ರಿ ಮದುವೆ, ರುಸ್ತುಂ ಜೋಡಿ, ಜಯಸಿಂಹ, ಒಂದೆ ಗುರಿ, ಕುದುರೆ ಮುಖ, ಮುತ್ತೈದೆ ಭಾಗ್ಯ, ಪೊಲೀಸ್ ಪಾಪಣ್ಣ, ಸಹೋದರರ ಸವಾಲ್, ಸೌಭಾಗ್ಯ ಲಕ್ಷ್ಮಿ, ಪ್ರಚಂಡ ಕುಳ್ಳ ಹಾಗೂ ಕಿಲಾಡಿ ಜೋಡಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಜಯಮಾಲಿನಿ ನಟಿಸಿದ್ದಾರೆ. ಕನ್ನಡಕ್ಕಿಂತ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು.
ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದಂತೆ ಗ್ಲಾಮರಸ್ ಲೋಕದಿಂದ ದೂರ ಉಳಿದ ಜಯಮಾಲಿನಿ, 1994, ಜುಲೈ 19ರಂದು ಪೊಲೀಸ್ ಇನ್ಸ್ಪೆಕ್ಟರ್ ಪಾರ್ಥಿಬನ್ ಎಂಬುವರನ್ನು ವಿವಾಹವಾದರು. ಪ್ರಸ್ತುತ ತಮ್ಮ ಏಕೈಕ ಪುತ್ರನೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾರೆ. ಆಗಾಗ ಮಾಧ್ಯಮ ಸಂದರ್ಶನಗಳಲ್ಲಿ ಜಯಮಾಲಿನಿ ಅವರು ಕಾಣಿಸಿಕೊಳ್ಳುತ್ತಿರುತ್ತಾರೆ.
ತಾಜಾ ಸಂಗತಿ ಏನೆಂದರೆ, ಜಯಮಾಲಿನಿ ಅವರ ಈಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜಯಮಾಲಿನಿ ಅವರಿಗೆ ವಯಸ್ಸಾಗಿದ್ದು, ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಫೋಟೋ ನೋಡಿದವರು ಇವರೇನಾ ಜಯಮಾಲಿನಿ ಎಂದು ಹುಬ್ಬೇರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಐಟಂ ಗರ್ಲ್ ಜಯಮಾಲಿನಿ ಈಗ ಹೇಗಾಗಿದ್ದಾರೆ ನೋಡಿ ಎಂದು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. (ಏಜೆನ್ಸೀಸ್)