ಈ ಫೋಟೋದಲ್ಲಿರುವ ಬಾಲಕ ಇಂದು ಭಾರತೀಯ ಚಿತ್ರರಂಗದ ಸೂಪರ್​ಸ್ಟಾರ್!​ ಸಾಧ್ಯವಾದ್ರೆ ಗುರುತಿಸಿ| Star Hero

Star Hero

ಚೆನ್ನೈ: ಈ ಮೇಲಿನ ಫೋಟೋದಲ್ಲಿರುವ ಬಾಲಕ ಇಂದು ಸ್ಟಾರ್ ಹೀರೋ ( Star Hero ). ಸಿನಿ ಇಂಡಸ್ಟ್ರಿಯಲ್ಲಿ ಎಷ್ಟೇ ಸ್ಟಾರ್ ಹೀರೋಗಳಿದ್ದರೂ ಸೂಪರ್ ಸ್ಟಾರ್ ಅಂತ ತಕ್ಷಣ ಗುರುತಿಸಿಕೊಳ್ಳುವ ಹೆಸರು ಅವರದು. ಎಷ್ಟೇ ಹೊಸ ಹೀರೋಗಳು ಬಂದರೂ ಇವರ ಕ್ರೇಜ್ ಅನ್ನು ಮಾತ್ರ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ ದಕ್ಷಿಣ ಭಾರತದ ಮೊದಲ ಹೀರೋ. ಇವರ ಸ್ಟೈಲ್​ ವಿಶೇಷ ಅಭಿಮಾನಿ ಬಳಗವೇ ಇದೆ. ತಮ್ಮ ನಟನೆಯಿಂದಲೇ ಹಲವು ದಾಖಲೆಗಳನ್ನು ಮುರಿದಿರುವ ಇವರು ಚಿತ್ರರಂಗದ ದಿಗ್ಗಜ ನಟನೆಂದೇ ಹೇಳಬಹುದು.

ನಿಮಗೆ ಈಗಾಗಲೇ ಆ ನಟ ಯಾರೆಂದು ಗೊತ್ತಾಗಿರಬಹುದು. ಅವರು ಬೇರೆ ಯಾರೂ ಅಲ್ಲ ಸೂಪರ್​ಸ್ಟಾರ್ ರಜಿನಿಕಾಂತ್ ( Rajinikanth )​.

ಅಂದಹಾಗೆ ರಜನಿಕಾಂತ್ ಅವರು 1950, ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಮರಾಠಿ ಕುಟುಂಬದಲ್ಲಿ ಜನಿಸಿದರು. ರಜನಿಕಾಂತ್ ಅವರ ನಿಜವಾದ ಹೆಸರು ಶಿವಾಜಿರಾವ್ ಗಾಯಕ್ವಾಡ್. ತಂದೆಯ ಹೆಸರು ರಾಮೋಜಿರಾವ್ ಗಾಯಕವಾಡ. ಪೊಲೀಸ್ ಪೇದೆಯಾಗಿ ಕೆಲಸ ಮಾಡಿದ್ದಾರೆ. ಇವರ ಕುಟುಂಬ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದು ನೆಲೆಸಿತು. ನಾಲ್ಕು ಮಕ್ಕಳಲ್ಲಿ ರಜನಿಕಾಂತ್ ಕಿರಿಯ ಮಗ. ರಜನಿಕಾಂತ್ ಅವರು 9 ವರ್ಷದವರಾಗಿದ್ದಾಗ ತಾಯಿಯನ್ನು ಕಳೆದುಕೊಂಡರು.

ರಜನಿಕಾಂತ್ ಓದಿದ್ದು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ. ಆ ನಂತರ ರಜನಿಕಾಂತ್ ಅವರನ್ನು ರಾಮಕೃಷ್ಣ ಮಠಕ್ಕೆ ಸೇರಿಸಲಾಯಿತು. ಅಲ್ಲಿ ಆಧ್ಯಾತ್ಮಿಕ ಪಾಠದ ಜೊತೆಗೆ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಒನ್ಸ್ ಅಪಾನ್ ಎ ಟೈಮ್ ಇನ್ ಎ ಮ್ಯಾಥ್ ಎಂಬ ಪೌರಾಣಿಕ ನಾಟಕದಲ್ಲಿ ರಜನಿಕಾಂತ್ ಏಕಲವ್ಯನ ಸ್ನೇಹಿತನ ಪಾತ್ರವನ್ನು ನಿರ್ವಹಿಸಿದ್ದಾರೆ. ಕನ್ನಡದ ಖ್ಯಾತ ಕವಿ ಡಾ.ಬೇಂದ್ರೆ ರಜನಿ ಅವರ ಅಭಿನಯವನ್ನು ಶ್ಲಾಘಿಸಿದರು. ಅಂದಿನಿಂದ ಅವರಿಗೆ ನಟನೆಯಲ್ಲಿ ಆಸಕ್ತಿ ಹೆಚ್ಚಾಯಿತು. ಓದು ಮುಗಿದ ನಂತರ ರಜನಿಕಾಂತ್ ಕೂಲಿ ಸೇರಿದಂತೆ ಹಲವು ಕೆಲಸಗಳನ್ನು ಮಾಡಿದರು.

ಇದನ್ನೂ ಓದಿ: ಗರ್ಭಪಾತಕ್ಕೆಂದು ಪ್ರಿಯಕರ ತಂದ ಮಾತ್ರೆ ಸೇವಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದುರಂತ ಸಾವು | Abortion

Rajinikanth

ಆ ನಂತರ ಬೆಂಗಳೂರು ಸಾರಿಗೆಯಲ್ಲಿ ಬಸ್ ಕಂಡಕ್ಟರ್ ಕೆಲಸ ಸಿಕ್ಕಿತು. ಆ ಕೆಲಸವನ್ನು ಮಾಡುತ್ತಿರುವಾಗ ಹೊಸದಾಗಿ ರೂಪುಗೊಂಡ ಮದ್ರಾಸ್ ಫಿಲ್ಮ್ ಇನ್ ಸ್ಟಿಟ್ಯೂಟ್​ನ ಜಾಹೀರಾತು ರಜಿನಿ ಕಣ್ಣಿಗೆ ಬಿದ್ದಿತು. ಅದರಲ್ಲಿ ಸೇರಿಕೊಂಡು ನಟನೆಯಲ್ಲಿ ತರಬೇತಿ ಪಡೆಯಲು ಬಯಸಿದ್ದರು. ಈ ಸಂದರ್ಭದಲ್ಲಿ ಅವರ ಸ್ನೇಹಿತ ಮತ್ತು ಸಹೋದ್ಯೋಗಿ ರಾಜ್ ಬಹದ್ದೂರ್, ಸಂಸ್ಥೆಗೆ ಸೇರಲು ಪ್ರೋತ್ಸಾಹಿಸಿದ್ದು ಮಾತ್ರವಲ್ಲದೆ ಆರ್ಥಿಕವಾಗಿಯೂ ಸಹಾಯ ಮಾಡಿದರು. ಅಲ್ಲಿಯೇ ತಮಿಳು ನಿರ್ದೇಶಕ ಕೆ.ಬಾಲಚಂದರ್ ರಜನಿಕಾಂತ್ ಅವರನ್ನು ಗುರುತಿಸಿದ್ದರು. ಆದರೆ ಕಾಲಿವುಡ್​ನಲ್ಲಿ ಶಿವಾಜಿ ಗಣೇಶನ್ ಸ್ಟಾರ್ ಹೀರೋ ಆಗಿದ್ದರು. ಎರಡೂ ಹೆಸರುಗಳು ಒಂದೇ ಆಗಿದ್ದರಿಂದ ಬಾಲಚಂದರ್ ಶಿವಾಜಿ ಹೆಸರನ್ನು ರಜನಿಕಾಂತ್ ಎಂದು ಬದಲಾಯಿಸಿದರು.

ತಮಿಳು ಮಾತನಾಡಲು ಕಲಿಯುವಂತೆಯೂ ಸಲಹೆ ನೀಡಿದರು. ಆ ಸಲಹೆಯನ್ನು ಪಾಲಿಸಿದ ರಜನಿಕಾಂತ್ ತಮಿಳು ಕಲಿತರು. 1975ರಲ್ಲಿ ಬಾಲಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸದ್ಯ ಅವರು ಜೈಲರ್ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಪಡೆದುಕೊಂಡಿದ್ದಾರೆ. ಅಲ್ಲದೆ, ನಿನ್ನೆಯಷ್ಟೇ ಅವರ ನಟನೆಯ ವೆಟ್ಟೈಯನ್​ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ಆಫೀಸ್​ನಲ್ಲಿ ಬಹಳ ಸದ್ದು ಮಾಡುತ್ತಿದೆ. (ಏಜೆನ್ಸೀಸ್​)

ದಕ್ಷಿಣ ಭಾರತದ ನಿರ್ದೇಶಕರಿಗೆ ನನ್ನ ಆ ಭಾಗದ ಮೇಲೆ ವ್ಯಾಮೋಹ ಜಾಸ್ತಿ! ಮಲ್ಲಿಕಾ ಶೆರಾವತ್ ಶಾಕಿಂಗ್​ ಹೇಳಿಕೆ​ | Mallika Sherawat

ಚಳಿಗಾಲ ಬರ್ತಿದೆ ಆರೋಗ್ಯದ ಬಗ್ಗೆ ಎಚ್ಚರವಿರಲಿ! ಈ ಆಹಾರಗಳನ್ನು ತಪ್ಪದೇ ಸೇವಿಸಿದ್ರೆ ಅನಾರೋಗ್ಯ ಕಾಡಲ್ಲ | Winter

ನಾನು ಎಲ್ಲದಕ್ಕೂ ರೆಡಿ… ರೀಲ್ಸ್​ನಿಂದಲೇ ಸಿನಿಮಾ ಅವಕಾಶ ಗಿಟ್ಟಿಸಿದ ಮಲಯಾಳಿ ಯುವತಿಯ ಶಾಕಿಂಗ್ ಹೇಳಿಕೆ! Aradhya Devi

Share This Article

ಚಳಿಗಾಲ ಶುರುವಾಗ್ತಿದೆ ಜೇನುತುಪ್ಪ ಸೇವಿಸಿದ್ರೆ ಈ ಆರೋಗ್ಯ ಸಮಸ್ಯೆಗಳು ನಿಮ್ಮತ್ರ ಸುಳಿಯೋದೇ ಇಲ್ಲ! Honey in Winter

Honey in Winter : ಚಳಿಗಾಲ ಇನ್ನೇನು ಶುರುವಾಗಲಿದೆ. ಈ ಚಳಿಗಾಲ ನಮ್ಮ ಚರ್ಮಕ್ಕೆ ತುಂಬಾನೇ…

ಇಲ್ಲಿದೆ ಜೀವನದ ಗುಟ್ಟು… ಅಪ್ಪಿತಪ್ಪಿಯೂ ಈ ವಿಚಾರಗಳನ್ನು ಎಂದಿಗೂ ಯಾರೊಂದಿಗೂ ಹೇಳಿಕೊಳ್ಳಬೇಡಿ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

ನಿಮ್ಮ ಅಂಗೈನಲ್ಲಿ ಈ ಗುರುತು ಇದೆಯಾ ಒಮ್ಮೆ ನೋಡಿ… ಇದ್ರೆ ನಿಮ್ಮಂಥ ಅದೃಷ್ಟವಂತ ಯಾರೂ ಇಲ್ಲ! Palmistry

Palmistry : ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ…