ಗರ್ಭಪಾತಕ್ಕೆಂದು ಪ್ರಿಯಕರ ತಂದ ಮಾತ್ರೆ ಸೇವಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದುರಂತ ಸಾವು | Abortion

Abortion
Published on

ಚೆನ್ನೈ: ಗರ್ಭಪಾತ ( Abortion ) ಕ್ಕೆಂದು ಪ್ರಿಯಕರ ( Lover ) ಖರೀದಿಸಿದ್ದ ಮಾತ್ರೆಯನ್ನು ಸೇವಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ( Student ) ದುರಂತ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ( Tamil Nadu ) ನಾಮಕ್ಕಲ್​ ಜಿಲ್ಲೆಯ ತಿರುಚೆಂಗೋಡ್ ಬಳಿಯ ಎಲಚಿಪಾಳ್ಯಂನಲ್ಲಿ ನಡೆದಿದೆ.

17 ವರ್ಷದ ಸಂತ್ರಸ್ತೆ ಮಲ್ಲಸಮುದ್ರಂ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿನಿ. ಶಾಲೆ ಸಮೀಪದ ಮೊಬೈಲ್ ಅಂಗಡಿಯ ಉದ್ಯೋಗಿ ಅರವಿಂದ್ ಎಂಬಾತನನ್ನು ಹುಡುಗಿ ಪ್ರೀತಿಸುತ್ತಿದ್ದಳು. ಇಬ್ಬರೂ ಒಟ್ಟಿಗೆ ಅನೇಕ ಸ್ಥಳಗಳಿಗೆ ಪ್ರಯಾಣ ಕೂಡ ಮಾಡಿದ್ದರು. ತುಂಬಾ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ತನ್ನ ಪ್ರಿಯಕರನೊಂದಿಗೆ ವೈದ್ಯರನ್ನು ಕಾಣಲು ಬಂದಿದ್ದಳು. ಆಕೆ ಗರ್ಭಿಣಿ ಎಂದು ಗೊತ್ತಾದಾಗ ಇಬ್ಬರು ಶಾಕ್​ ಆಗಿದ್ದರು.

ಆಸ್ಪತ್ರೆಯಿಂದ ಬಂದ ಕೂಡಲೇ ಮುಂದೇನು ಮಾಡುವುದು ಎಂದು ಯೋಚಿಸಿದ ಪ್ರಿಯಕರ, ಸಮೀಪದ ಮೆಡಿಕಲ್​ ಶಾಪ್​ನಲ್ಲಿ ಗರ್ಭಪಾತಕ್ಕೆಂದು ಮಾತ್ರೆಯನ್ನು ಖರೀದಿಸಿ ತಂದು ಪ್ರೇಯಸಿಗೆ ನೀಡಿದ್ದನು. ಮನೆಗೆ ಹೋಗಿ ಮಾತ್ರೆ ಸೇವಿಸಿದ ಹುಡುಗಿಗೆ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆತಂಕಗೊಂಡ ಮನೆಯವರು ವಿದ್ಯಾರ್ಥಿಯನ್ನು ಮಲ್ಲಸಮುದ್ರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೈದ್ಯರ ಸಲಹೆಯಂತೆ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗೆಂದು ಸೇಲಂ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಸಾವಿಗೀಡಾಗಿದ್ದಾಳೆ. ಮಗಳನ್ನು ಕಳೆದುಕೊಂಡಿಕೊಂಡಿದ್ದಕ್ಕೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net