

ಹೈದರಾಬಾದ್: ಚಿತ್ರರಂಗದಲ್ಲಿ ಐಟಂ ಡಾನ್ಸ್ಗಳ ಬಗ್ಗೆ ಯೋಚಿಸಿದಾಗ ಡಿಸ್ಕೋ ಶಾಂತಿ, ಅನುರಾಧ, ಜ್ಯೋತಿ ಲಕ್ಷ್ಮಿ, ಜಯಮಾಲಿನಿ, ಸಿಲ್ಕ್ ಸ್ಮಿತಾ ಮುಂತಾದ ನಟಿಯರು ಮೊದಲು ಕಣ್ಣ ಮುಂದೆ ಬರುತ್ತಾರೆ. ಆದರೆ, ಕಾಲ ಬದಲಾದಂತೆ ಐಟಂ ಡಾನ್ಸ್ ಸಂಸ್ಕೃತಿಯು ಸಹ ಬದಲಾಗಿದ್ದು, ಇಂದು ಸ್ಟಾರ್ ನಟಿಯರು ಕೂಡ ತುಂಡುಡುಗೆ ತೊಟ್ಟು ಸೊಂಟ ಬಳಕಿಸುತ್ತಾರೆ.
ಐಟಂ ಡಾನ್ಸ್ ಅಂತಾ ಬಂದಾಗ ನಟಿ ಮುಮೈತ್ ಖಾನ್ ( Mumaith Khan ) ಕೂಡ ಪ್ರಮುಖವಾಗಿ ನೆನಪಾಗುತ್ತಾರೆ. 2000 ರಿಂದ 2010ರವರೆಗೆ ಇವರು ತುಂಬಾ ಪ್ರಸಿದ್ಧರಾಗಿದ್ದರು. ಮುಮೈತ್ ಖಾನ್ ಡಾನ್ಸ್ಗೆ ಕಾಲಿವುಡ್, ಬಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್ವುಡ್ ಸಿನಿ ಪ್ರೇಕ್ಷಕರು ಫಿದಾ ಆಗಿದ್ದರು. ಅದರಲ್ಲೂ ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾದಲ್ಲಿ ಬಂಗಾರ ಕೋಡಿ ಪೆಟ್ಟಾ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಒಂದೆರೆಡು ದೃಶ್ಯಗಳಲ್ಲಿ ನಟನೆ ಸಹ ಮಾಡಿದ್ದರು.
ಇನ್ನು ಮುಮೈತ್ ಖಾನ್ ಅವರು ಕನ್ನಡದಲ್ಲೂ ನಟಿಸಿದ್ದಾರೆ. ಒರಟ, ರಾಜ್ ದಿ ಶೋ ಮ್ಯಾನ್, ಶೌರ್ಯ, ರಾಜಧಾನಿ ಹಾಗೂ ದಂಡುಪಾಳ್ಯ ಸಿನಿಮಾಗಳಲ್ಲಿ ಸೊಂಟ ಬಳುಕಿಸಿದ್ದಾರೆ. ಕನ್ನಡಕ್ಕಿಂತ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಮುಮೈತ್ ಖಾನ್ ಹೆಚ್ಚಾಗಿ ಐಟಂ ಡಾನ್ಸ್ಗಳಲ್ಲಿ ಕಾಣಿಸಿಕೊಂಡರು. ಕೇವಲ ಡಾನ್ಸ್ ಮೇಲೆ ಗಮನಹರಿಸದೆ ಕೆಲವು ಚಿತ್ರಗಳಲ್ಲಿ ಅಭಿನಯ ಸಹ ಮಾಡಿದ್ದಾರೆ.
ಸಿನಿ ಕೆರಿಯರ್ನಲ್ಲಿ ಉತ್ತುಂಗದಲ್ಲಿರುವಾಗಲೇ ಏಕಾಏಕಿ ಡ್ರಗ್ಸ್ ವಿವಾದದಲ್ಲಿ ಸಿಲುಕಿ ಮಾರ್ಕೆಟ್ ಕಳೆದುಕೊಂಡ ಮುಮೈತ್ ಖಾನ್, ಇದೀಗ ಬಣ್ಣದ ಜಗತ್ತಿನಿಂದ ದೂರ ಉಳಿದಿದ್ದಾರೆ. ಸಿನಿಮಾ ಅವಕಾಶಗಳು ಕಡಿಮೆಯಾದಂತೆ ಒಂದು ಹಂತದಲ್ಲಿ ಮುಮೈತ್ ಖಾನ್ ಖಿನ್ನತೆಗೂ ಒಳಗಾಗಿದ್ದರು. ಅಲ್ಲದೆ, ಅವರ ದೇಹದ ತೂಕವು ಸಹ ಹೆಚ್ಚಾಗಿತ್ತು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಮುಮೈತ್ ಖಾನ್ ಅವರ ಈಗಿನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗತೊಡಗಿವೆ. ವಿಡಿಯೋ ನೋಡಿದ ಅಭಿಮಾನಿಗಳು "ನೀವು ಕಮ್ ಬ್ಯಾಕ್ ಮಾಡಿದರೆ ತುಂಬಾ ಚೆನ್ನಾಗಿರುತ್ತೆ" ಎಂದು ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್)