blank

ರಾಕ್ಷಸರ ಗುರು ಶುಕ್ರ ಗ್ರಹದ ಸಂಚಾರ: ಈ 3 ರಾಶಿಯವರಿಗೆ ಮುಂದಿನ 90 ದಿನ ಅದೃಷ್ಟವೋ ಅದೃಷ್ಟ! Zodiac Signs

Zodiac Signs

Zodiac Signs : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ವ್ಯಕ್ತಿಯ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಮನುಷ್ಯನ ಸ್ವಭಾವಗಳಲ್ಲಿನ ಬದಲಾವಣೆಗೆ ಗ್ರಹಗತಿಗಳೇ ಕಾರಣ ಎಂದು ನಂಬಲಾಗಿದೆ. ವ್ಯಕ್ತಿಯ ಒಳಿತು-ಕೆಡುಕಗಳ ಮೇಲೆಯೂ ಜಾತಕವೂ ಪ್ರಭಾವ ಬೀರುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಮತ್ತು ಸಂಚಾರ ಬಹಳ ಮಹತ್ವವನ್ನು ಪಡೆದುಕೊಳ್ಳುತ್ತದೆ. ಎಲ್ಲ ಗ್ರಹಗಳು ತಮ್ಮ ಅವಧಿ ಅಥವಾ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತವೆ. ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ರಾಕ್ಷಸರ ಗುರು ಎಂದು ಪರಿಗಣಿಸಲಾಗುತ್ತದೆ. ಶುಕ್ರನು ಸಂಪತ್ತು, ಸೌಂದರ್ಯ, ಪ್ರೀತಿ, ಆಕರ್ಷಣೆ ಮತ್ತು ಸಮೃದ್ಧಿಗೆ ಕಾರಣವೆಂದು ಪರಿಗಣಿಸಲಾಗಿದೆ.

ಇದೀಗ ಏಪ್ರಿಲ್ 01 ರಂದು ಪೂರ್ವ ಭಾದ್ರಪದ ನಕ್ಷತ್ರಕ್ಕೆ ಶುಕ್ರ ಸ್ಥಳಾಂತರಗೊಳ್ಳಲಿದ್ದು, ಇದರಿಂದ ಯಾವ ರಾಶಿಚಕ್ರ ಚಿಹ್ನೆಗಳಿಗೆ ಲಾಭವಾಗುತ್ತದೆ ಎಂದು ನಾವು ತಿಳಿಯೋಣ.

ಮೀನ ರಾಶಿ

ಮೀನ ರಾಶಿಯವರಿಗೆ ಶುಕ್ರನ ಸಂಚಾರವು ವಿವಿಧ ಪ್ರಯೋಜನಗಳನ್ನು ನೀಡಲಿದೆ. ಜೀವನ ನಡೆಸುವ ಸಾಮರ್ಥ್ಯದೊಂದಿಗೆ ದಂಪತಿ ನಡುವಿನ ಅನ್ಯೋನ್ಯತೆ ಕೂಡ ಹೆಚ್ಚಾಗುತ್ತದೆ. ಇನ್ನೂ ಮದುವೆಯಾಗದ ಹೆಣ್ಣು ಮಕ್ಕಳಿಗೆ ಒಳ್ಳೆಯ ಗಂಡ ಸಿಗುತ್ತಾನೆ. ವ್ಯಾಪಾರಿಗಳು ಪ್ರಗತಿಯತ್ತ ಸಾಗುತ್ತಾರೆ. ವೃತ್ತಿಪರರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಗರ್ಭಿಣಿಯರು, ಅವರ ಗಂಡಂದಿರು ಕೇಳುತ್ತಿರುವುದು ಒಂದೇ… ಹೆಚ್ಚುತ್ತಿರುವ ಹೊಸ ಟ್ರೆಂಡ್​ ಬಹಿರಂಗಪಡಿಸಿದ ವೈದ್ಯರು! Pregnant Women

ವೃಷಭ ರಾಶಿ

ವೃಷಭ ರಾಶಿಯವರಿಗೆ ಶುಕ್ರನ ಸಂಚಾರದಿಂದಾಗಿ ಆದಾಯದಲ್ಲಿ ಉತ್ತಮ ಹೆಚ್ಚಳ ಕಂಡುಬರಲಿದೆ. ಹಲವು ಮೂಲಗಳಿಂದ ಹಣದ ಒಳಹರಿವು ಬರುತ್ತದೆ. ಆದರೆ, ನಿಮ್ಮೊಂದಿಗೆ ಕೆಲಸ ಮಾಡುವವರ ಬಗ್ಗೆ ನೀವು ಯಾವಾಗಲೂ ಜಾಗರೂಕರಾಗಿದ್ದರೆ ಯಶಸ್ಸು ಬರುತ್ತದೆ. ಪ್ರಸ್ತುತ ಉದ್ಯೋಗದಲ್ಲಿರುವವರಿಗೆ ಹೊಸ ಉತ್ತಮ ಕೆಲಸ ಸಿಗುತ್ತದೆ. ಪ್ರಸ್ತುತ ಕೆಲಸದ ಸ್ಥಳದಲ್ಲಿ ಸಂಬಳ ಹೆಚ್ಚಳದಲ್ಲಿ ಬದಲಾವಣೆಯನ್ನು ನೋಡಬಹುದು.

ಮಕರ ರಾಶಿ

ಮಕರ ರಾಶಿಯ 3ನೇ ಮನೆಯಲ್ಲಿ ಶುಕ್ರನ ಸಂಚಾರ ಸಂಭವಿಸಲಿದೆ. ನಿಮಗೆ ಸ್ವಲ್ಪ ಹಠಾತ್ ಆರ್ಥಿಕ ಲಾಭ ಸಿಗುತ್ತದೆ. ನೀವು ಕೆಲಸಕ್ಕಾಗಿ ವಿದೇಶಕ್ಕೆ ಪ್ರಯಾಣಿಸುತ್ತೀರಿ. ಹಳೆಯ ವ್ಯವಹಾರಗಳಲ್ಲಿ ಮಾಡಿದ ಹೂಡಿಕೆಗಳು ಈಗ ಲಾಭವನ್ನು ನೀಡುತ್ತವೆ. ವಿದ್ಯಾರ್ಥಿಗಳು ಶೈಕ್ಷಣಿಕ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ಹೇಳಿದ ಸಮಯಕ್ಕೆ ಸಿನಿಮಾ ಆರಂಭಿಸದೇ ಅತಿಯಾಗಿ ಜಾಹೀರಾತು ಪ್ರದರ್ಶಿಸಿದ ಪಿವಿಆರ್​ಗೆ ಬಿತ್ತು ಭಾರಿ ದಂಡ! PVR

ಹೇಗಿದ್ದ ಹನ್ಸಿಕಾ ಹೇಗಾದ್ರೂ ನೋಡಿ… ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ ತೂಕ ಇಳಿಸಿಕೊಂಡರಂತೆ! Hansika Motwani

Share This Article

ನರ ದೌರ್ಬಲ್ಯಕ್ಕೆ ನೆಲ್ಲಿಕಾಯಿಯೇ ರಾಮಬಾಣ! ಇದರ ಅನೇಕ ಪ್ರಯೋಜನಗಳ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Gooseberry

Gooseberry : ಪ್ರಕೃತಿಯಲ್ಲಿ ಹಲವು ರೀತಿಯ ಔಷಧಿಗಳಿವೆ. ಅವು ನಮ್ಮ ಕಣ್ಣಿಗೆ ಗೋಚರಿಸುತ್ತಿದ್ದರೂ ಅವುಗಳಲ್ಲಿರುವ ವಿಶೇಷ…

ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಿ! ಅನಾರೋಗ್ಯ ದೂರ ಮಾಡಿ…Mango

ಬೆಂಗಳೂರು: ( Mango ) ಬೇಸಿಗೆಯಲ್ಲಿ  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.…