ಹೇಗಿದ್ದ ಹನ್ಸಿಕಾ ಹೇಗಾದ್ರೂ ನೋಡಿ... ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ ತೂಕ ಇಳಿಸಿಕೊಂಡರಂತೆ! Hansika Motwani

Hansika Motwani
Published on

Hansika Motwani : ಪುನೀತ್​ ಅಭಿನಯದ ‘ಬಿಂದಾಸ್​’ ಸೇರಿದಂತೆ ನಾಲ್ಕು ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ, ಸದ್ಯ ಚಿತ್ರರಂಗದಿಂದ ದೂರಾಗಿ ಉದ್ಯಮಿ ಹಾಗೂ ಸ್ನೇಹಿತೆಯ ಮಾಜಿ ಪತಿ ಸೊಹೈಲ್​ ಖಟುರಿಯಾರನ್ನು ಮದುವೆಯಾಗಿ, ದಾಂಪತ್ಯ ಜೀವನದ ಕಡೆ ಗಮನವಹಿಸಿದ್ದಾರೆ.

ಸಿನಿಮಾದಿಂದ ಅವಕಾಶಗಳು ಕಡಿಮೆಯಾದ್ರೂ ಕೂಡ ಹನ್ಸಿಕಾ ಅವರು ಮನೆಯಲ್ಲಿ ಸುಮ್ಮನೇ ಕುಳಿತಿಲ್ಲ. ಜಾಹೀರಾತುಗಳಲ್ಲಿ ನಟಿಸುವುದರಲ್ಲಿ ಬಿಜಿಯಾಗಿದ್ದಾರೆ. ಅಲ್ಲದೆ, ಟಿವಿ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಫುಲ್​ ಆ್ಯಕ್ಟೀವ್​ ಆಗಿದ್ದಾರೆ.

ಬಳಕುವ ಬಳ್ಳಿಯಂತಿದ್ದ ಹನ್ಸಿಕಾ, ಸುಂದರ ದಾಂಪತ್ಯ ಜೀವನದ ನಡುವೆ ಕೊಂಚ ತೂಕ ಹೆಚ್ಚಿಸಿಕೊಂಡು ದಪ್ಪಗಾಗಿದ್ದರು. ಆದರೆ, ಈಗ ತುಂಬಾ ಸ್ಲಿಮ್ ಆಗಿದ್ದಾರೆ. ಅವರ ಈಗಿನ ಲುಕ್​ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ತೂಕ ಇಳಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ತೂಕ ಇಳಿಕೆಗೆ ತಾನು ಅನುಸರಿಸಿದ ಮಾರ್ಗವನ್ನು ಹನ್ಸಿಕಾ ತಿಳಿಸಿದ್ದಾರೆ. ಸಾಕಷ್ಟು ನೀರು ಕುಡಿಯುವುದೇ ಮುಖ್ಯ ಕಾರಣ ಎಂದಿರುವ ಹನ್ಸಿಕಾ, ಯೋಗ, ಧ್ಯಾನದಂತಹ ದೈಹಿಕ ವ್ಯಾಯಾಮಗಳನ್ನು ಮಾಡುತ್ತಾರಂತೆ. ಅಲ್ಲದೆ, ಹೆಚ್ಚಿನ ಕ್ಯಾಲೋರಿ ಆಹಾರಗಳನ್ನು ತಪ್ಪಿಸುವುದಾಗಿ ತಿಳಿಸಿದ್ದಾರೆ. ಇದರಿಂದಲೇ ತೂಕ ಇಳಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

ಸದ್ಯ ಹನ್ಸಿಕಾ ಅವರ ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿದ್ದು, ತುಂಬಾ ಸ್ಲಿಮ್​ ಆಗಿರುವುದನ್ನು ನೋಡಿ, ಮತ್ತೆ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net