ಗುರುಪುರ: ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ದೇವಸ್ಥಾನ ಪ್ರವಾಹದಿಂದ ಜಲಾವೃತಗೊಂಡಿದ್ದು, ದೇವಸ್ಥಾನದ ಹೊರಾಂಗಣದಲ್ಲಿ ಗಂಗಾಮಾತೆಗೆ ಪೂಜೆ ಸಲ್ಲಿಸಿದ ಸಾರ್ವಜನಿಕರು ಪ್ರವಾಹ ನೀರು ಇಳಿಮುಖಗೊಳ್ಳುವಂತೆ ಪ್ರಾರ್ಥನೆ ಸಲ್ಲಿಸಿದರು.

ಸಾನಿಧ್ಯ ದೇವರಿಗೆ, ಗಂಗಾಮಾತೆಗೆ ಪೂಜೆ

ದೇವಸ್ಥಾನದ ಅರ್ಚಕ ಬಾಲಕೃಷ್ಣ ಭಟ್ ಅವರು ಸಾನಿಧ್ಯ ದೇವರಿಗೆ ಹಾಗೂ ಗಂಗಾಮಾತೆಗೆ ಪೂಜೆ ನೆರವೇರಿಸಿದರು. ಬಳಿಕ ಭಕ್ತ ಸಮುದಾಯವು ದೀಪ ಬೆಳಗಿಸಿ ಪ್ರವಾಹಕ್ಕೆ ಬಾಗಿನ ಅರ್ಪಿಸಿದರು.

ಪ್ರಾರ್ಥನೆ ಬಳಿಕ ಇಳಿಮುಖವಾದ ನೆರೆ

ಪ್ರಾರ್ಥನೆ ಬಳಿಕ ನಿಧಾನಗತಿಯಲ್ಲಿ ಪ್ರವಾಹ ಇಳಿಯಲಾರಂಭಿಸಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ನವೀನ್‌ಚಂದ್ರ ಆಳ್ವ, ರಘು ಸಾಲ್ಯಾನ್, ದಿವಾಕರ ಆಚಾರ್ಯ, ದಿನೇಶ್ ಕರ್ಕೇರ ಸಾನದಮನೆ, ಮೀನಾಕ್ಷಿ, ಬಿಜೆಪಿ ಮುಖಂಡ ಜಗದೀಶ ಶೇಣವ ಮತ್ತಿತರರು ಇದ್ದರು.