ಪೊಲೀಸ್ ಠಾಣೆಯ ಆವರಣಗೋಡೆ ಕುಸಿತ: ವಾಹನ ಶೆಡ್ ಮತ್ತು 5 ಬೈಕ್‌ಗಳಿಗೆ ಹಾನಿ

police
ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಬದಿಯ ಆವರಣಗೋಡೆ ಕುಸಿದು ಬಿದ್ದು, ಠಾಣೆಯ ವಾಹನ ನಿಲುಗಡೆ ಶೆಡ್ ಧ್ವಂಸಗೊಂಡಿದೆ.
Published on

ಪುತ್ತೂರು ಗ್ರಾಮಾಂತರ: ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಬದಿಯ ಆವರಣ ಗೋಡೆ ಕುಸಿದು ಬಿದ್ದು, ಠಾಣೆಯ ವಾಹನ ನಿಲುಗಡೆ ಶೆಡ್ ಧ್ವಂಸಗೊಂಡಿದೆ. ಶೆಡ್‌ನೊಳಗೆ ನಿಲುಗಡೆ ಮಾಡಲಾಗಿದ್ದ 5 ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

ಕುಸಿದ ಆವರಣ ಗೋಡೆಯ ಕಲ್ಲುಗಳು ಈ ಭಾಗದಲ್ಲಿದ್ದ ಶೀಟ್ ಅಳವಡಿಸಿದ ವಾಹನ ನಿಲುಗಡೆ ಶೆಡ್ ಮೇಲೆ ಬಿದ್ದಿದೆ. ವಾಹನ ನಿಲುಗಡೆ ಶೆಡ್ ಸಂಪೂರ್ಣವಾಗಿ ಹಾನಿಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net