ಫೆಬ್ರವರಿ 14 ಪ್ರೇಮಿಗಳ ದಿನ(Valentine’s Day). ಈ ದಿನದಂದು ಜನರು ತಮ್ಮ ಸಂಗಾತಿಯನ್ನು ವಿಶೇಷವಾಗಿಸಲು ಅಥವಾ ತಮ್ಮ ಪ್ರೀತಿಯನ್ನು ತೋರಿಸಲು ವಿಭಿನ್ನ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಾರೆ. ಈ ವಿಶೇಷ ದಿನದಂದು ಕೆಲವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಗುಲಾಬಿಗಳು, ಚಾಕೊಲೇಟ್‌ಗಳು ಅಥವಾ ವಿಶೇಷ ಭೋಜನವನ್ನು ಆಯೋಜಿಸುತ್ತಾರೆ. ಆದರೆ ಇನ್ನು ಕೆಲವರು ಅಚ್ಚರಿಯಾಗುವಂಥಾ ಪ್ಲ್ಯಾನ್ ಮಾಡಿರುತ್ತಾರೆ. ಆದರೆ ಪ್ರೇಮಿಗಳ ದಿನದಂದು ದಂಪತಿ ವಿಶೇಷ ಕಾನೂನು ಒಪ್ಪಂದವನ್ನು ಮಾಡಿರುವುದನ್ನು ನೋಡಿದ್ದೀರಾ. ಅಂತಹ ಪೋಸ್ಟ್ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೊದಲ ವ್ಯಕ್ತಿ (ಗಂಡ) ಮತ್ತು ಎರಡನೇ ವ್ಯಕ್ತಿ (ಹೆಂಡತಿ) ನಡುವೆ ಮಾಡಿಕೊಂಡ ಒಪ್ಪಂದಗಳು ತುಂಬಾ ತಮಾಷೆಯಾಗಿವೆ, ಈಗ ಆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಿಯಮಗಳನ್ನು ಮನೆಗಾಗಿ ಮಾಡಲಾಗಿದೆ. ಇದರಿಂದ ಅವರ ನಡುವೆ ಪ್ರೀತಿ ಉಳಿಯುತ್ತದೆ ಮತ್ತು ದಂಪತಿ ಜಗಳಗಳಿಂದ ದೂರವಿರುತ್ತಾರೆ. ಅದರಲ್ಲಿ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬರೆಯಲಾಗಿದೆ.
ಊಟದ ಮೇಜಿನ ಬಳಿ ಮನೆಯ ವಿಷಯಗಳನ್ನು ಮಾತ್ರ ಚರ್ಚಿಸಲಾಗುವುದು, ಬ್ಯುಸಿನೆಸ್ ವಿಚಾರದ ಬಗ್ಗೆ ಅಲ್ಲ. ಎರಡನೆಯದಾಗಿ ರೂಮ್ ವಾತಾವರಣವು ಮನೆಯ ವಾತಾವರಣದಿಂದ ಕೂಡಿರಬೇಕು ಮತ್ತು ಬಂಡವಾಳ ಲಾಭ/ನಷ್ಟದ ಬಗ್ಗೆ ಅಲ್ಲ, ಹೆಂಡತಿ ಅವರನ್ನು ಕ್ರಿಪ್ಟೋಕಾಯಿನ್ ಅಥವಾ ಕ್ರಿಪ್ಟೋಪೇ ಎಂದು ಕರೆಯುವ ಬದಲು ಅವರ ಹೆಸರಿನಿಂದ ಕರೆಯಬೇಕು. ಮತ್ತೊಂದೆಡೆ ನಿಯಮಗಳನ್ನು ಹೀಗೆ ಬರೆಯಲಾಗಿದೆ. ಗಂಡ ಮಾಡಿದ ತಪ್ಪುಗಳ ಬಗ್ಗೆ ತಾಯಿಗೆ ಹೇಳಬಾರದು, ಮಾಜಿ ಸಂಗಾತಿಯನ್ನು ವಾದಕ್ಕೆ ಒಳಪಡಿಸಬಾರದು, ದುಬಾರಿ ಉತ್ಪನ್ನಗಳನ್ನು ಖರೀದಿಸಬಾರದು, ತಡರಾತ್ರಿಯಲ್ಲಿ ಸ್ವಿಗ್ಗಿ ಅಥವಾ ಜೊಮಾಟೊದಲ್ಲಿ ಆರ್ಡರ್ ಮಾಡಬಾರದು ಎಂದು ಉಲ್ಲೇಖಿಸಲಾಗಿದೆ.
ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಈ ನಿಯಮಗಳನ್ನು ಪಾಲಿಸದವರು ಮೂರು ತಿಂಗಳ ಕಾಲ ಬಟ್ಟೆ ಒಗೆಯುವುದು, ಶೌಚಗೃಹ ಸ್ವಚ್ಛಗೊಳಿಸುವುದು, ದಿನಸಿ ಶಾಪಿಂಗ್ ಮುಂತಾದ ಎಲ್ಲಾ ಮನೆಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
Agreement kalesh between husband and wife 😂💀 pic.twitter.com/tm7Km6VYkU
— Ghar Ke Kalesh (@gharkekalesh) February 12, 2025
ಗಂಡ ಮತ್ತು ಹೆಂಡತಿಯ ನಡುವಿನ ಒಪ್ಪಂದದ ಸಂಘರ್ಷ ಎಂದು ಶೀರ್ಷಿಕೆ ನೀಡಿ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.ತಮಾಷೆಯ ವಿಷಯವೆಂದರೆ ಗಂಡ ಅದಕ್ಕೆ ಸಹಿ ಮಾಡಿಲ್ಲ. ಈ ಮದುವೆಯಲ್ಲಿ ವ್ಯಾಪಾರಕ್ಕಿಂತ ಹೆಚ್ಚಿನ ಅಡ್ಡಪರಿಣಾಮಗಳು ಗೋಚರಿಸುತ್ತವೆ. ಅತ್ಯಂತ ಅಪಾಯಕಾರಿ ಶಿಕ್ಷೆ ಗಂಡ ಎಲ್ಲಾ ಕೆಲಸವನ್ನೂ ಮಾಡಬೇಕಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.