ಜಾಕ್ವೆಲಿನ್​ಗೆ ಸುಕೇಶ್​ನಿಂದ​​​ ಖಾಸಗಿ ಜೆಟ್ ಗಿಫ್ಟ್​​; ಪ್ರೇಮಿಗಳ ದಿನದಂದು ಜೈಲಿನಿಂದ ಬರೆದ ಪ್ರೇಮಪತ್ರದಲ್ಲಿ ಏನಿದೆ? | Sukesh Chandrashekhar

Untitled design (41)
Published on

ನವದೆಹಲಿ: ಫೆಬ್ರವರಿ 14 ಪ್ರೇಮಿಗಳ ದಿನ, ಪ್ರೇಮಿಗಳ ದಿನದಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಜೈಲಿನಲ್ಲಿರುವ ಸುಕೇಶ್​​ ಚಂದ್ರಶೇಖರ್ ಮತ್ತೊಮ್ಮೆ ಪ್ರೇಮಪತ್ರ ಬರೆದಿದ್ದಾರೆ. ಪತ್ರದಲ್ಲಿ ಸುಕೇಶ್ ಚಂದ್ರಶೇಖರ್(Sukesh Chandrashekhar) ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಪ್ರೀತಿಯಿಂದ 'ಪುಟ್ಟ ಹುಡುಗಿ' ಎಂದು ಉಲ್ಲೇಖಿಸಿ, ಅವರ ಮೇಲಿನ ತಮ್ಮ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ, ಜಾಕಿ ಮೊದಲನೆಯದಾಗಿ ನಿನಗೆ ಪ್ರೇಮಿಗಳ ದಿನದ ಶುಭಾಶಯಗಳು. ಈ ವರ್ಷ ನಮಗೆ ಬಹಳಷ್ಟು ಸಕಾರಾತ್ಮಕತೆ ಮತ್ತು ವಿಶೇಷ ವಿಷಯಗಳೊಂದಿಗೆ ಪ್ರಾರಂಭವಾಗಿದೆ. ಈ ಪ್ರೇಮಿಗಳ ದಿನವು ತುಂಬಾ ವಿಶೇಷವಾಗಿದೆ ಏಕೆಂದರೆ ಇದು ನಮ್ಮ ಜೀವನದ ಉಳಿದ ಪ್ರೇಮಿಗಳ ದಿನಗಳನ್ನು ಒಟ್ಟಿಗೆ ಕಳೆಯಲು ಕೇವಲ ಒಂದು ಹೆಜ್ಜೆ ದೂರದಲ್ಲಿದೆ ಎಂದು ಬರೆದಿದ್ದಾರೆ.

ಬೇಬಿ, ನಾನು ಮುಂದೆ ಏನನ್ನೂ ಹೇಳುವ ಮೊದಲು ಇದನ್ನು ಹೇಳುತ್ತೇನೆ. ಜಾಕಿ, ನಾನು ನಿನ್ನನ್ನು ನಿಜವಾಗಿಯೂ ತುಂಬಾ ಪ್ರೀತಿಸುತ್ತೇನೆ. ನೀನು ಜಗತ್ತಿನ ಅತ್ಯುತ್ತಮ ವ್ಯಾಲೆಂಟೈನ್, ನಾನು ನಿನ್ನನ್ನು ಹುಚ್ಚನಂತೆ ಪ್ರೀತಿಸುತ್ತೇನೆ. ಈ ವಿಶೇಷ ಸಂದರ್ಭದಲ್ಲಿ ಜಾಕ್ವೆಲಿನ್‌ಗೆ ಖಾಸಗಿ ಜೆಟ್ ಅನ್ನು ಉಡುಗೊರೆಯಾಗಿ ನೀಡುತ್ತಿರುವುದಾಗಿ ಸುಕೇಶ್​ ತಿಳಿಸಿದ್ದಾರೆ.

ನಟಿಯ ಹೆಸರಿನ ಮೊದಲ ಅಕ್ಷರಗಳನ್ನು JK ಅನ್ನು ಜೆಟ್ ಮೇಲೆ ಬರೆಯಲಾಗಿದೆ. ಜೆಟ್‌ನ ನೋಂದಣಿ ಸಂಖ್ಯೆ ಜಾಕ್ವೆಲಿನ್ ಅವರ ಜನ್ಮ ದಿನಾಂಕ ಆಗಿದೆ ಎಂದು ಸುಕೇಶ್ ಹೇಳಿಕೊಂಡಿದ್ದಾರೆ. ಈ ಪತ್ರದಲ್ಲಿ ಸುಕೇಶ್ ಮತ್ತಷ್ಟು ಬರೆದಿದ್ದಾರೆ, 'ಬೇಬಿ, ನೀನು ಯಾವಾಗಲೂ ಕೆಲಸದ ಚಿತ್ರೀಕರಣಕ್ಕಾಗಿ ಪ್ರಪಂಚದಾದ್ಯಂತ ಹಾರಾಡುತ್ತಲೇ ಇರುತ್ತೀಯಾ. ಈಗ ಈ ಜೆಟ್‌ನೊಂದಿಗೆ ನಿನ್ನ ಆಯ್ಕೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ನಿನ್ನ ಪ್ರಯಾಣ ತುಂಬಾ ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ. ಪತ್ರವು, ನನ್ನ ಬೊಮ್ಮ.. ನಾನು ಈ ಗ್ರಹದ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ.ನಿನ್ನನ್ನು ನನ್ನ ವ್ಯಾಲೆಂಟೈನ್ ಆಗಿ ಈ ಜೀವನದಲ್ಲಿ ನಾನು ಅತ್ಯಂತ ಸುಂದರ, ಅದ್ಭುತ ವ್ಯಕ್ತಿಯನ್ನು ಕಂಡುಕೊಂಡೆ ಎಂದು ಕೊನೆಗೊಳ್ಳುತ್ತದೆ.

ಸುಮಾರು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಪ್ರಸ್ತುತ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ಸುಕೇಶ್​​ ಜಾಕ್ವೆಲಿನ್‌ಗೆ ಬರೆದ ಪ್ರೇಮ ಪತ್ರವು ಜೈಲಿನಿಂದ ಬಹಿರಂಗಗೊಂಡಿದೆ. ಆದರೆ ಜಾಕ್ವೆಲಿನ್ ಸುಕೇಶ್​ ಜತೆಗಿನ ಪ್ರೇಮಸಂಬಂಧವನ್ನು ನಿರಾಕರಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net