

ಬೆಂಗಳೂರು: ಐದು ವರ್ಷಗಳ ಹಿಂದೆ ಬಿಡುಗಡೆಯಾದ 'ಕುಮಾರಿ 21 ಎಫ್' ಎಂಬ ಚಿತ್ರದ ಮೂಲಕವೇ ಹೀರೋ ಆಗಿದ್ದರು ಪ್ರಜ್ವಲ್ ದೇವರಾಜ್ ಸಹೋದರ ಪ್ರಣಾಮ್. ಆ ಚಿತ್ರದ ಅಷ್ಟೇನೂ ಸುದ್ದಿಯಾಗಲಿಲ್ಲ. ಆ ನಂತರ ಅವರು ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತಾದರೂ, ಪ್ರಣಾಮ್ ಅಭಿನಯದ ಯಾವೊಂದು ಚಿತ್ರವೂ ಬರಲಿಲ್ಲ.
ಈ ಚಿತ್ರದ ಬಗ್ಗೆ ಮಾತನಾಡುವ ಪ್ರಣಾಮ್, 'ಚಿಕ್ಕ ವಯಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು ನಾನು. ಸುಮಾರು ೪ ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ. ಹಿಂದಿನ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿದ್ದೇನೆ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ, ನನಗೆ ಎರಡನೇ ಚಿತ್ರದಲ್ಲೇ ಗರುಡ ರಾಮ್ರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ಕಿದೆ' ಎಂದು ಖುಷಿಯಾದರು ಪ್ರಣಾಮ್.
ಪ್ರಣಾಮ್ಗೆ ನಾಯಕಿಯಾಗಿ ಮೋನಲ್ ನಟಿಸಿದ್ದಾರೆ. ಪ್ರಣಾಮ್ ತಂದೆ-ತಾಯಿ ಪಾತ್ರದಲ್ಲಿ ಶಂಕರ್ ಅಶ್ವತ್ಥ್ ಮತ್ತು ವೀಣಾ ಸುಂದರ್ ಕಾನಣಿಸಿಕೊಂಡಿದ್ದಾರಂತೆ. ಈ ಚಿತ್ರವನ್ನು ಸಾಯಿ ಶಿವನ್ ನಿರ್ದೇಶಿಸಿದರೆ, ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ನಿರ್ಮಾಣ ಮಾಡಿದ್ದಾರೆ. ಗೋಪಿನಾಥ್ ಛಾಯಾಗ್ರಹಣ ಹಾಗೂ ಮಹತಿ ಸ್ವರಸಾಗರ್ ಅವರ ಸಂಗೀತ ಈ ಚಿತ್ರಕ್ಕಿದೆ.