

ಮುಂಬೈ: ಕಳೆದ ಕಲೆವು ದಿನಗಳಿಂದ ಬಾಲಿವುಡ್ನಲ್ಲಿ 'ಪಠಾಣ್' ಚಿತ್ರದ ಟ್ರೈಲರ್ ಬಗ್ಗೆಯೇ ಮಾತು. ಚಿತ್ರ ಮುಂದಕ್ಕೆ ಹೋಗಿರುವುದರಿಂದ ಟ್ರೈಲರ್ ಬಿಡುಗಡೆ ಸಹ ಮುಂದಕ್ಕೆ ಹೋಗಿದೆ, ಈ ಚಿತ್ರದ ಎರಡು ಟ್ರೈಲರ್ಗಳು ಬಿಡುಗಡೆಯಾಗಲಿವೆ, ಒಂದರಲ್ಲಿ ಸಲ್ಮಾನ್ ಇದ್ದರೆ ಇನ್ನೊಂದರಲ್ಲಿ ಇರುವುದಿಲ್ಲ ... ಹೀಗೆ ಹಲವು ಸುದ್ದಿಗಳು ಕೇಳಿ ಬಂದಿದ್ದವು. ಆದರೆ, ಇವೆಲ್ಲ ಸುದ್ದಿಗಳನ್ನು ಸುಳ್ಳೂ ಮಾಡಿ, 'ಪಠಾಣ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
'ಪಠಾಣ್' ಚಿತ್ರದ ಟ್ರೈಲರ್ ಇಂದು ಯೂಟ್ಯೂಬ್ನ ಯಶ್ರಾಜ್ ಫಿಲಂಸ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಈ ಟ್ರೈಲರ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಹಿಂದೆಂದೂ ನೋಡಿರದ ಆಕ್ಷನ್ ದೃಶ್ಯಗಳು ಈ ಚಿತ್ರದಲ್ಲಿದ್ದು, ಶಾರುಖ್ ಖಾನ್ ಇಷ್ಟು ವರ್ಷಗಳ ಚಿತ್ರಜೀವನದಲ್ಲಿ ಮೊದಲ ಬಾರಿಗೆ ಔಟ್ ಅಂಡ್ ಔಟ್ ಆಕ್ಷನ್ ಚಿತ್ರದಲ್ಲಿ ನಟಿಸಿರುವುದು ವಿಶೇಷ.
ಚಿತ್ರದಲ್ಲಿ ಸಲ್ಮಾನ್ ಖಾನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ದರ್ಶನ ಸಹ ಟ್ರೈಲರ್ನಲ್ಲಾಗಬಹುದು ಎಂಬ ಆಸೆ ಅವರ ಅಭಿಮಾನಿಗಳಲ್ಲಿತ್ತು. ಆದರೆ, ಈ ಟ್ರೈಲರ್ನಲ್ಲಿ ಸಲ್ಮಾನ್ ಇಲ್ಲ. ಬದಲಿಗೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರ ಪಾತ್ರಗಳನ್ನು ಪರಿಚಯಿಸಲಾಗಿದೆ.
'ಪಠಾಣ್' ಚಿತ್ರದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮುಂತಾದವರು ಅಭಿನಯಿಸಿದ್ದಾರೆ. ಯಶ್ರಾಜ್ ಫಿಲಂಸ್ನಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ.