More

  ಉತ್ತರಕಾಶಿ ಸುರಂಗ ಮಾರ್ಗ ವಿಳಂಬ; ಸಿಲುಕಿದ ಕಾರ್ಮಿಕರ ಒತ್ತಡ ನಿಯಂತ್ರಿಸಲು ಮೊಬೈಲ್ ಫೋನ್​, ಬೋರ್ಡ್ ಗೇಮ್ಸ್​!

  ಉತ್ತರಾಖಂಡ: ನಿರಂತರವಾಗಿ ನಡೆಯುತ್ತಿರುವ ಉತ್ತರಕಾಶಿ ಸುರಂಗದ ರಕ್ಷಣಾ ಕಾರ್ಯಾಚರಣೆ ನಿರೀಕ್ಷಿಸಿದ ಸಮಯಕ್ಕಿಂತ ಹೆಚ್ಚಿನ ಅವಧಿ ತೆಗೆದುಕೊಳ್ಳುವ ಮೂಲಕ ವಿಳಂಬವಾದ ಹಿನ್ನಲೆ ಅವಶೇಷಗಳಡಿ ಸಿಲುಕಿರುವ 41 ಕಾರ್ಮಿಕರ ಒತ್ತಡ ನಿವಾರಿಸಲು ಅಧಿಕಾರಿಗಳು ಬೋರ್ಡ್ ಆಟಗಳು ಸೇರಿದಂತೆ ಮೊಬೈಲ್ ಫೋನ್‌ಗಳನ್ನು ಒದಗಿಸಿದ್ದಾರೆ.

  ಇದನ್ನೂ ಓದಿ: ಮಧ್ಯಕರ್ನಾಟಕದಲ್ಲಿ ಕನ್ನಡಕ್ಕಿಲ್ಲ ಆಪತ್ತು -ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆ – ನಗರಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

  “ಕಾರ್ಮಿಕರು ವಿಡಿಯೋ ಗೇಮ್‌ಗಳನ್ನು ಆಡುವ ಮೂಲಕ ತಮ್ಮ ಒತ್ತಡಗಳನ್ನು ನಿವಾರಿಸಿಕೊಳ್ಳಲಿ ಎಂಬ ಉದ್ದೇಶದಿಂದ ಅವರಿಗೆ ಮೊಬೈಲ್ ಫೋನ್‌ಗಳನ್ನು ನೀಡಲಾಗಿದೆ. ಲೂಡೋ, ಹಾವು ಮತ್ತು ಏಣಿಯಂತಹ ಬೋರ್ಡ್ ಆಟಗಳನ್ನು ಸಹ ಅವರಿಗೆ ಒದಗಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಇದಲ್ಲದೆ, ಸ್ಥಳದಲ್ಲಿ ಸ್ಥಿರ ದೂರವಾಣಿ ಸಂಪರ್ಕವನ್ನು ಕೂಡ ಸ್ಥಾಪಿಸಲಾಗಿದೆ ಮತ್ತು ಸಾಧನವನ್ನು ಸುರಂಗದೊಳಗೆ ಕಳುಹಿಸಲಾಗುತ್ತದೆ. ಅವಶೇಷಗಳಿಂದಾಗಿ ಯಂತ್ರಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುವುದರಿಂದ ರಕ್ಷಣಾ ಕಾರ್ಯಾಚರಣೆ ವಾರಗಳವರೆಗೆ ಮುಂದುವರಿಯಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

  ಇದನ್ನೂ ಓದಿ:  ರಾಜಸ್ಥಾನಕ್ಕೆ ಯಾರು ರಾಯಲ್ಸ್?; ರಾಜಕೀಯ ಪಕ್ಷಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

  “ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಈ ಆಟಗಳು ಅವರ ಒತ್ತಡವನ್ನು ಬಸ್ಟ್ ಮಾಡಲು ಸಹಾಯ ಮಾಡುತ್ತದೆ. ಒಳಗೆ ಸಿಲುಕಿರುವ ಕಾರ್ಮಿಕರಿಗೆ ಲ್ಯಾಂಡ್‌ಲೈನ್ (ಫೋನ್) ಕಳುಹಿಸಲಾಗುವುದು ಇದರಿಂದ ಅವರು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಬಹುದು” ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).

  ಈ ರಾಶಿಯವರಿಗಿಂದು ವ್ಯವಹಾರದಿಂದ ಲಾಭ: ನಿತ್ಯಭವಿಷ್ಯ

  ಈ ರಾಶಿಯವರಿಗಿಂದು ವ್ಯವಹಾರದಿಂದ ಲಾಭ: ನಿತ್ಯಭವಿಷ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts