ಈತನನ್ನು ಬಂಧಿಸಲು ಮಾಹಿತಿ ಕೊಟ್ಟರೆ ನಿಮಗೆ ಸಿಗುತ್ತೆ 37 ಕೋಟಿ ರೂಪಾಯಿ!

ಸಅಜಿದ
Published on

ವಾಷಿಂಗ್ಟನ್​: 12 ವರ್ಷಗಳ ಹಿಂದೆ, ಅಂದರೆ 2008ರ ನವೆಂಬರ್​ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಈ ದಾಳಿಯ ಬಗ್ಗೆ ಸಂಪೂರ್ಣ ಮಾಹಿತಿ ನಿಮಗಿದ್ದರೆ, ಇಲ್ಲೊಂದು ಅದ್ಭುತ ಅವಕಾಶ ನಿಮಗಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಈ ವ್ಯಕ್ತಿಯ ಬಂಧನಕ್ಕೆ ಯಾವುದಾದರೂ ಒಂದು ಪ್ರಮುಖ ಮಾಹಿತಿಯನ್ನು ಕೊಟ್ಟರೆ ನಿಮಗೆ 37 ಕೋಟಿ ರೂಪಾಯಿ ಸಿಗಲಿದೆ.

ಮುಂಬೈ 26/11 ದಾಳಿಯನ್ನು ನಡೆಸಿದ್ದ ಪಾಕಿಸ್ತಾನದ ಲಷ್ಕರ್​ ಇ ತೈಬಾದ 10 ಉಗ್ರರು. ಆದರೆ ಇವರೆನ್ನೆಲ್ಲ ಮೇಲ್ವಿಚಾರಣೆ ಮಾಡಿದ್ದು, ಅವರಿಗೆ ಹೀಗೇ ಮಾಡಬೇಕೆಂದು ಹೇಳಿಕೊಟ್ಟಿದ್ದು ಸಾಜಿದ್​ ಮಿರ್​. ಪ್ರಮುಖ ಭಯೋತ್ಪಾದಕರ ಮಾಹಿತಿ ನಮ್ಮಲ್ಲಿದೆಯಾದರೂ ಸಾಜಿದ್​ ಬಗ್ಗೆ ಮಾತ್ರ ಹೆಚ್ಚಿನ ಮಾಹಿತಿಗಳು ಇಲ್ಲ. ಎಫ್​ಬಿಐನ ಮೋಸ್ಟ್​ ವಾಂಟೆಡ್​ ಟೆರರಿಸ್ಟ್​ಗಳಲ್ಲಿಯೂ ಈತನ ಹೆಸರಿದೆ.

ಮುಂಬೈ ಮಾತ್ರವಲ್ಲದೆ ದೇಶ ವಿದೇಶಗಳ ಅನೇಕ ಸ್ಥಳಗಳಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯ ಹಿಂದೆ ಸಾಜಿದ್​ ಕೈವಾಡವಿದೆ ಎನ್ನಲಾಗಿದೆ. 2011ರಲ್ಲಿಯೇ ಅರೆಸ್ಟ್​ ವಾರೆಂಟ್​ ನೀಡಲಾಗಿದ್ದರೂ ಈವರೆಗೂ ಈತನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದೀಗ ಈತನನ್ನು ಬಂಧಿಸಲು ಸಹಾಯವಾಗುವಂತಹ ಮಾಹಿತಿ ನೀಡುವವರಿಗೆ 5 ಮಿಲಿಯನ್​ ಡಾಲರ್​ (37 ಕೋಟಿ ರೂಪಾಯಿ) ಬಹುಮಾನ ಕೊಡುವುದಾಗಿ ಅಮೆರಿಕ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net