

ಲಖನೌ: ಸ್ನೇಹಿತನೊಂದಿಗಿದ್ದ ಪತ್ರಕರ್ತನನ್ನು ಸಜೀವ ದಹನ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ನೇಹಿತರ ಪ್ರಾಣ ಬಿಟ್ಟಿದ್ದಾರೆ.
ಹಿಂದಿ ದಿನಪತ್ರಿಕೆಯ ಪತ್ರಕರ್ತ ರಾಕೇಶ್ ಸಿಂಗ್ ಮತ್ತು ಆತನ ಸ್ನೇಹಿತ ಪಿಂಟು ಸಾಹು ಕಲ್ವರಿ ಗ್ರಾಮದಲ್ಲಿದ್ದ ರಾಕೇಶ್ನ ಮನೆಯಲ್ಲಿದ್ದರು. ಮನೆಯೊಳಗಿದ್ದ ಅವರನ್ನು ಹೊರಗಿನಿಂದ ಕೂಡಿ ಹಾಕಿ ಬೆಂಕಿ ಹಾಕಲಾಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯ ಪತ್ನಿ ಮಕ್ಕಳೊಂದಿಗೆ ಪೋಷಕರ ಮನೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)