

ನವದೆಹಲಿ: ಚಿನ್ನದ ದರ 50 ಸಾವಿರ ದಾಟಿದೆ ಎಂದು ಬೇಸರದಲ್ಲಿದ್ದ ಮಹಿಳೆಯರಿಗೆ ಒಂದು ಸಿಹಿ ಸುದ್ದಿ. ಮೂರು ತಿಂಗಳ ಬಳಿಕ ಇದೀಗ ಚಿನ್ನದ ದರ 50 ಸಾವಿರ ರೂಪಾಯಿಗಿಂತ ಕಡಿಮೆಯಾಗಿದೆ. ಪ್ರಸ್ತುತ 10 ಗ್ರಾಂ ಚಿನ್ನದ ದರ 48 ಸಾವಿರ ರೂಪಾಯಿಯ ಆಸು ಪಾಸಿಗೆ ಬಂದು ನಿಂತಿದೆ.
ಬುಧವಾರದಂದು ಚಿನಿವಾರು ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ 48,513 ರೂಪಾಯಿ ವರದಿಯಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಚಿನ್ನದ ದರ ಶೇ. 4 ಇಳಿಕೆ ಕಂಡಿದೆ. ಕಳೆದ ವಾರಕ್ಕೆ ಹೋಲಿಸಿದರೆ ಶೇ. 2.5 ಇಳಿಕೆಯಾಗಿದೆ. ಆಗಸ್ಟ್ 7ಕ್ಕೆ ಚಿನ್ನದ ದರ 56 ಸಾವಿರಕ್ಕೂ ಅಧಿಕ ವರದಿಯಾಗಿತ್ತು. ಆಗಸ್ಟ್ 25ಕ್ಕೆ 48,500ಕ್ಕೆ ಇಳಿಕೆಯಾಗಿತ್ತು. ಇದೀಗ 3 ತಿಂಗಳ ನಂತರ ಅತ್ಯಂತ ಕಡಿಮೆ ಚಿನ್ನದ ದರ ವರದಿಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 44,824 ವರದಿಯಾಗಿದ್ದು, ಗುರುವಾರ 44,705ಕ್ಕೆ ಇಳಿದಿದೆ. 24 ಕ್ಯಾರೆಟ್ ಗೋಲ್ಡ್ನಲ್ಲೂ 130 ರೂಪಾಯಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಚಿನ್ನದ ದರ 46,200 ರೂಪಾಯಿಗಳಷ್ಟಿದೆ. ಉಳಿದಂತೆ ಚೆನ್ನೈನಲ್ಲಿ 46,400, ಕೋಲ್ಕತದಲ್ಲಿ 50,070 ಮತ್ತು ಮುಂಬೈನಲ್ಲಿ 49,800 ವರದಿಯಾಗಿದೆ.
ಒಂದು ಕೆ.ಜಿ ಬೆಳ್ಳಿ ದರ ಬುಧವಾರ 59,500 ವರದಿಯಾಗಿದ್ದು, ಗುರುವಾರ 60,050 ರೂಪಾಯಿಗೆ ಏರಿಕೆಯಾಗಿದೆ. (ಏಜೆನ್ಸೀಸ್)